ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಹವಾದಿಂದ ಕರಾವಳಿಯಲ್ಲಿ ಬದಲಾವಣೆ ಆಗಲಿ: ವೈ.ಎಸ್.ವಿ.ದತ್ತ

ಬ್ರಹ್ಮಾವರ: ಜನನಾಯಕ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ವೈ.ಎಸ್‌.ವಿ. ದತ್ತ
Last Updated 8 ಆಗಸ್ಟ್ 2022, 4:19 IST
ಅಕ್ಷರ ಗಾತ್ರ

ಬ್ರಹ್ಮಾವರ: ವೈಚಾರಿಕ ನಿಲುವು, ತಾತ್ವಿಕ ಬದ್ಧತೆ, ಸ್ಪಷ್ಟ ನಿಲುವು ಹೊಂದಿರುವ ಸಿದ್ದರಾಮಯ್ಯ ಅವರಿಂದ ಮಾತ್ರ ಕರಾವಳಿ ಮತ್ತು ಮಲೆನಾಡಿನಲ್ಲಿ ಪರಿವರ್ತನೆ ಸಾಧ್ಯ ಎಂದು ವೈ.ಎಸ್.ವಿ.ದತ್ತ ಹೇಳಿದರು.

ಬ್ರಹ್ಮಾವರ ಬಂಟರ ಭವನದಲ್ಲಿ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಪ್ರಯುಕ್ತ ಜನನಾಯಕ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರ ಧ್ವನಿ ದಕ್ಷಿಣ ಕರ್ನಾಟಕಕ್ಕೆ ಅಗತ್ಯವಿಲ್ಲ. ಕರಾವಳಿ ಮಲೆನಾಡಿಗೆ ಅಗತ್ಯವಿದೆ. ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸಣ್ಣತನ ಅವರಲ್ಲಿರಲಿಲ್ಲ. ವಿರೋಧ ಪಕ್ಷದವರೆನ್ನುವ ತಾರತಮ್ಯವಿರಲಿಲ್ಲ. ತಾಳ್ಮೆ, ಸೌಜನ್ಯ ಅವರಲ್ಲಿತ್ತು. ಆದರೆ ಬಿಜೆಪಿ ಪಕ್ಷದಲ್ಲಿಯೇ ತಾರತಮ್ಯವನ್ನು ನಾವು ಕಾಣುತ್ತಿರುವುದು ವಿಪರ್ಯಾಸವೇ ಸರಿ. ಸಿದ್ಧರಾಮಯ್ಯನವರ ಅಗತ್ಯ ರಾಜ್ಯಕ್ಕಿದೆ. ಇಂದಿನ ವ್ಯವಸ್ಥೆಯ ವಿರುದ್ಧವಾಗಿ ಮಾತನಾಡುವ ಗಟ್ಟಿತನ ಅವರಲ್ಲಿ ಮಾತ್ರ ನಾವು ಕಾಣಬಹುದು’ ಎಂದರು.

ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಮಾತನಾಡಿ ‘ಸಿದ್ದರಾಮಯ್ಯ ಸಮಾಜದ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತ ಬಲ್ಲ ಏಕೈಕ ವ್ಯಕ್ತಿ. ಅವರ ಅಂತರಂಗ ಬಹಿರಂಗ ಒಂದೇ ಆಗಿತ್ತು’ ಎಂದರು.

ಲೇಖಕ ಬಿ. ಚಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ನಿರಂಜನ ಹೆಗ್ಡೆ, ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಜಯನ್ ಮಲ್ಪೆ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೋಟ ಇಬ್ರಾಹಿಂ ಸಾಹೇಬ್, ಕಥೋಲಿಕ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ವಲೇರಿಯನ್ ಮಿನೇಜಸ್, ಸಾಮಾಜಿಕ ಹೋರಾಟಗಾರ್ತಿ ಗೌರಿ ಕೆಂಜೂರು, ಸಾಸ್ತಾನ ಸಿ.ಎ ಬ್ಯಾಂಕ್ ಅಧ್ಯಕ್ಷ ಶ್ರೀಧರ್ ಪಿಎಸ್, ಬೈಂದೂರಿನ ಡಾ.ಸುಬ್ರಹ್ಮಣ್ಯ ಭಟ್ ಇದ್ದರು.

ವಕೀಲ ಮಂಜುನಾಥ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು. ಶಶಿಧರ್ ಹೆಮ್ಮಾಡಿ ಸಹಕರಿಸಿದರು. ಡಾ.ಗಣೇಶ್ ಗಂಗೊಳ್ಳಿ ಮತ್ತು ತಂಡದವರಿಂದ ದೇಶ ಭಕ್ತಿಗೀತೆ ನಡೆಯಿತು. ಸಿದ್ದ
ರಾಮಯ್ಯ ಕುರಿತು ವಿದ್ಯಾರ್ಥಿ
ಗಳು ಮತ್ತು ಸಾರ್ವಜನಿಕರಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ಭಾಗಿಗಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT