ಕಾರ್ಕಳ: ‘ನಮಗೆ ಬದುಕಿನಲ್ಲಿ ಉದ್ದೇಶವಿರಬೇಕು. ನಮ್ಮ ಮತ್ತು ಸುತ್ತುಮುತ್ಲು ಇರುವವರ ಬದುಕನ್ನು ಸುಂದರವಾಗಿಸುವುದು ನಮ್ಮ ಗುರಿಯಾಗಬೇಕು’ ಎಂದು ಬಿಗ್ ಎಫ್.ಎಂ. ರೇಡಿಯೊ ವಾಹಿನಿಯ ಆರ್ಜೆ ನಯನಾ ಹೇಳಿದರು.

ಇಲ್ಲಿನ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಹಾಗಣಪತಿ ದೇವಸ್ಥಾನ ಗಣಿತನಗರ, ಅಜೆಕಾರ್ ಪದ್ಮಗೋಪಾಲ ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಮೌಲ್ಯಸುಧಾದ 44ನೇ ಸಂಚಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ‘ಯುವ ಮನಸ್ಸುಗಳಿಗೆ ಒಂದಿಷ್ಟು ಮಾತು’ ವಿಷಯದಲ್ಲಿ ಅವರು ಮಾತನಾಡಿದರು.

ನಾವು ಏನಾಗಬೇಕು, ಯಾರ ಜೊತೆ ಬೆರೆಯಬೇಕು ಎಂಬುದರಿಂದ ನಮ್ಮ ಆಯ್ಕೆಗಳು ನಿರ್ಧಾರವಾಗುತ್ತವೆ. ಪ್ರಯತ್ನದ ಮೇಲೆ ಎಲ್ಲವೂ ನಿಂತಿದೆ. ಅನಿವಾರ್ಯತೆಗಳೇ ಮನಸ್ಸನ್ನು ಗಟ್ಟಿಗೊಳಿಸುತ್ತವೆ ಎಂದರು.

ಅಜೆಕಾರ್ ಪದ್ಮಗೋಪಾಲ ಎಜುಕೇಷನ್ ಟ್ರಸ್ಟ್ನ ಟ್ರಸ್ಟಿಗಳಾದ ಅನಿಲ್ ಕುಮಾರ್ ಜೈನ್, ನಿತ್ಯಾನಂದ ಪ್ರಭು, ಉಪ ಪ್ರಾಂಶುಪಾಲ ಸಾಹಿತ್ಯ, ಉಷಾ ರಾವ್ ಯು. ಪಾಲ್ಗೊಂಡಿದ್ದರು. ರಸಾಯನ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರಜ್ವಲ್ ನಿರೂಪಿಸಿದರು.