ಕಾರ್ಕಳ: ಶಾಸ್ತ್ರೀಯ ಸಂಗೀತ ಸಭಾ ಹಾಗೂ ಶ್ರೀ ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿರುವ 34ನೇ ಸಂಗೀತ ಮಹೋತ್ಸವ ಫೆ.27ರಿಂದ ಮಾ.1ರ ವರೆಗೆ ಇಲ್ಲಿನ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಭಾದ ಅಧ್ಯಕ್ಷ ಎಸ್.ನಿತ್ಯಾನಂದ ಪೈ ಹಾಗೂ ಕಾರ್ಯದರ್ಶಿ ಪ್ರಕಾಶ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲ ದಿನ ಸಂಜೆ 4.30ರಿಂದ ನೀಹಾರಿಕಾ ದೇರಾಜೆ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದ್ದು ತಬಲಾದಲ್ಲಿ ರೂಪಕ್ ವೈದ್ಯ ಮತ್ತು ಹಾರ್ಮೋನಿಯಂನಲ್ಲಿ ಅಜಯ ಹೆಗ್ಡೆ ಸಹಕರಿಸುವರು.

ನಂತರ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಮುಖ್ಯ ವ್ಯವಸ್ಥಾಪಕ ಟ್ರಸ್ಟಿ ಕೆ. ಜಯರಾಮ ಪ್ರಭು ಕಾರ್ಯಕ್ರಮ ಉದ್ಘಾಟಿಸಲಿದ್ದು ಮಂಗಳೂರು ಭಾರತ್ ಬೀಡಿ ವರ್ಕ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಸುಬ್ರಾಯ ಎಂ. ಪೈ ಅಧ್ಯಕ್ಷತೆ ವಹಿಸುವರು. ವಯಲಿನ್ ವಿದ್ವಾನ್ ಮೈಸೂರು ಮಂಜುನಾಥ್, ಕೊಳಲು ವಾದಕ ವಿದ್ವಾನ್ ಪ್ರವೀಣ್ ಗೋಡ್ಖಿಂಡಿ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅಜೆಕಾರ್ ಪದ್ಮಗೋಪಾಲ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿ ಪಾಳ್ಗೊಳ್ಳುವರು. ಗ್ರಾಮಿ ಪ್ರಶಸ್ತಿ ಪುರಸ್ಕೃತ, ಮೋಹನವೀಣಾ ಪ್ರವರ್ತಕ ಪಂಡಿತ್ ವಿಶ್ವಮೋಹನ್ ಭಟ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರತಿದಿನ ಸಂಜೆ 4.30ರಿಂದ ರಾತ್ರಿ 9ರ ವರೆಗೆ ಕಚೇರಿಗಳು ನಡೆಯಲಿವೆ. ಪಂಡಿತ ವಿಶ್ವಮೋಹನ ಭಟ್ ಅವರ ಮೋಹನ್ ವೀಣಾ, ಮೈಸೂರು ಮಂಜುನಾಥ ಅವರ ವಯಲಿನ್ ಮತ್ತು ಪ್ರವೀಣ್ ಗೋಡ್ಖಿಂಡಿ ಅವರ ವಾದ್ಯತ್ರಯ ಕಛೇರಿ ಮೊದಲ ದಿನ ನಡೆಯಲಿದೆ. 28ರಂದು ವಿದ್ವಾನ್ ವೆಂಕಟೇಶ್ ಚಿಪ್ಳುಣ್ಕರ್ ಅವರ ಶಿಷ್ಯರಿಂದ ಕರ್ನಾಟಕ ಸಂಗೀತ, ಚಿಲ್ಕುಂದ ಸಹೋದರಿಯರ ಗಾಯನ ಇರುತ್ತದೆ. ಅವರಿಗೆ ವಯಲಿನ್ನಲ್ಲಿ ವಿದ್ವಾನ್ ದೆಹಲಿ ಶ್ರೀಧರ್, ಮೃದಂಗದಲ್ಲಿ ವಿದ್ವಾನ್ ನಿಕ್ಷಿತ್ ಪುತ್ತೂರು, ಮೋರ್ಸಿಂಗ್ನಲ್ಲಿ ವಿದ್ವಾನ್ ರಾಜಶೇಖರ್ ಸಹಕರಿಸುವರು. ನಂತರ ಕಾಶಿಯ ಮಿಶ್ರಾ ಸಹೋದರರು ಜುಗಲ್ಬಂದಿ ನಡೆಸಿಕೊಡುವರು.

ಮಾ.1ರಂದು ಶ್ವೇತಾ ವಿ.ನಾಯಕ್ ಶಿಷ್ಯರಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ, ಪಂಡಿತ್ ಉದಯ್ ಮಲ್ಲಿಕ್ ಅವರ ಗಾಯನ, ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತದ ಜುಗಲ್ಬಂದಿ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.