ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡು‍ಪಿ | ಹೊಸ ಭಾಷೆ ಕಲಿಯಿರಿ, ಕನ್ನಡ ಮರೆಯಬೇಡಿ

ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ‘ಸೌರಭ–2022’: ಸರ್ವಾಧ್ಯಕ್ಷ ಡಾ.ಸೋಮೇಶ್ವರ ಶ್ರೀನಿವಾಸ ಶೆಟ್ಟಿ
Last Updated 16 ಮೇ 2022, 3:05 IST
ಅಕ್ಷರ ಗಾತ್ರ

ಹೆಬ್ರಿ: ಹೊಸ ಭಾಷೆ ಕಲಿಯುವುದು ತಪ್ಪಲ್ಲ. ಆದರೆ, ಕನ್ನಡ ಭಾಷೆಯನ್ನು ಮರೆಯಬಾರದು. ಕನ್ನಡವನ್ನು ಚೆನ್ನಾಗಿ ಬಳಸಿ, ಬೆಳೆಸಿ, ಉಳಿಸಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸೋಮೇಶ್ವರ ಶ್ರೀನಿವಾಸ ಶೆಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿನ ಅನಂತ ಪದ್ಮನಾಭ ದೇವಸ್ಥಾನದ ವಠಾರದಲ್ಲಿ ಭಾನುವಾರ ಕಾರ್ಕಳ ಹೊಸಸಂಜೆ ಪ್ರಕಾಶನ ಆಯೋಜನೆಯಲ್ಲಿ ನಡೆದ ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ‘ಸೌರಭ–2022’ರ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡದ ಸೇವೆಯನ್ನು ಎಲ್ಲರೂ ಮಾಡುವಂತಾಗಬೇಕು. ಅಂತಹ ಮಹತ್ವದ ಕಾರ್ಯ ದೇವರಾಯ ಪ್ರಭು ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದಿದೆ. ಮನಸ್ಸುಗಳನ್ನು ಬೆಸೆಯುವ ಕೆಲಸ ಸಾಹಿತ್ಯದಿಂದ ನಡೆಯುತ್ತದೆ. ದೇವರಾಯರು ಅಂತಹ ಸಾರ್ಥಕ ಕೆಲಸ ಮಾಡಿದ್ದಾರೆ. ಸಾಹಿತ್ಯ ದೇಶ, ಕಾಲ, ವಿಭಾಗಕ್ಕೆ ಸೀಮಿತ ಅಲ್ಲ, ಸಾಹಿತ್ಯ ವಿಶ್ವವ್ಯಾಪ್ತಿ ಎಂದು ಅವರು ಹೇಳಿದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಬೆಳ್ವೆ ಗಣೇಶ್‌ ಕಿಣಿ, ‘ಕನ್ನಡದ ನೆಲ, ಜಲ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ವದ ಕಾರ್ಯ ಸಾಹಿತ್ಯದ ಮೂಲಕ ನಡೆಯಬೇಕಿದೆ. ಅಂತಹ ಕೆಲಸಗಳು ಹೊಸಸಂಜೆ ಪ್ರಕಾಶನದ ಮೂಲಕ ದೇವರಾಯ ಪ್ರಭು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

‘ಸಾಹಿತ್ಯ ಸೇವೆಗೆ ಯಾರ ಹಂಗೂ ಬೇಡ, ಅದು ಸೇವೆಯಾಗಿ ನಡೆಯಬೇಕು. ಅದನ್ನು ಯಾರೂ ಮಾಡಬಹುದು. ಸಾಹಿತ್ಯ ಸೇವೆಗೆ ನಮ್ಮ ಸದಾ ಬೆಂಬಲ ಇದೆ’ ಎಂದು ಹೆಬ್ರಿ ವ್ಯವ ಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್‌ ಕೆ. ಅಡ್ಯಂತಾಯ ಹೇಳಿದರು.

ಕವಿಗೋಷ್ಠಿ: ಉಪನ್ಯಾಸಕಿ ಶ್ರೀ ಮುದ್ರಾಡಿ ಅಧ್ಯಕ್ಷತೆಯಲ್ಲಿ ‘ಸೌರಭ ಕವಿಗೋಷ್ಠಿ’ ನಡೆಯಿತು.

ಶ್ರೀಕರ ಭಾರದ್ವಾಜ್‌ ಕಬ್ಬಿನಾಲೆ, ಅರುಣಾ ಹೆಬ್ರಿ, ವಸಂತ ಹೊಳ್ಳ ಹೆಬ್ರಿ, ಹೆಬ್ರಿ ಮಾಲತಿ ಜಿ. ಪೈ ಕಾರ್ಕಳ, ಡಾ.ಸುಮತಿ ಪಿ, ಚೈತ್ರಾ ಕಬ್ಬಿನಾಲೆ, ಅಶ್ವಿನಿ ಕೆ, ಸುಕುಮಾರ್‌ ಮುನಿಯಾಲ್‌ ಕವನ ವಾಚನ ಮಾಡಿದರು.

ಮಂಗಳೂರು ಮೆಸ್ಕಾಂ ನಿರ್ದೇಶಕ ಎಂ.ದಿನೇಶ್‌ ಪೈ ಮುನಿಯಾಲು, ಮುನಿಯಾಲು ಲಯನ್ಸ್‌ ಕ್ಲಬ್‌ನ ಹರ್ಷ ಶೆಟ್ಟಿ, ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸ್ನೇಹಲತಾ ಟಿ.ಜಿ, ವರಂಗ ಗ್ರಾಮ ಪಂಚಾಯಿತಿ ಅದ್ಯಕ್ಷೆ ಉಷಾ ಹೆಬ್ಬಾರ್‌, ಕುಚ್ಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿ, ಹೆಬ್ರಿ ರಾಮ ಮಂದಿರದ ಕಾರ್ಯದರ್ಶಿ ಎಚ್. ನರೇಂದ್ರ ನಾಯಕ್, ‌ಸಾಹಿತ್ಯ ಪೋಷಕ ಬೈಕಾಡಿ ಮಂಜುನಾಥ ರಾವ್‌ಶಿವಪುರ, ಕುಚ್ಚೂರು ಕುಡಿಬೈಲ್‌, ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ರಾಜೇಶ್‌ ಉಪಸ್ಥಿತರಿದ್ದರು.

ಸಮ್ಮೇಳನದ ರೂವಾರಿ, ಕಾರ್ಕಳ ಹೊಸಸಂಜೆ ಪ್ರಕಾಶನದ ಆರ್. ದೇವ ರಾಯ ಪ್ರಭು ಪ್ರಾಸ್ತಾವಿಕ ಮಾತನಾಡಿ, ಮತ್ತೊಮ್ಮೆ ಸೌರಭ ಸಾಹಿತ್ಯ ಸಮ್ಮೇಳನ ವನ್ನು ನಡೆಸುವುದಾಗಿ ಘೋಷಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್‌ ನಿರೂಪಿಸಿದರು. ಅಕ್ಷಿತಾ ಕೆ. ಶೆಟ್ಟಿ ವಂದಿಸಿದರು.

ರಾಘವೇಂದ್ರ ಚಾರಿಟಬಲ್‌ ಟ್ರಸ್ಟ್‌, ವ್ಯವಸಾಯ ಸೇವಾ ಸಹಕಾರಿ ಸಂಘ, ಶ್ರೀರಾಮ ಮಂದಿರ, ಶ್ರೀಗುರು ರಕ್ಷಾ ಚಾರಿಟಬಲ್‌ ಟ್ರಸ್ಟ್‌ ಮುದ್ರಾಡಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ತಾಲ್ಲೂಕು ಘಟಕ, ಶಾಂತಿನಿಕೇತನ ಯುವ ವೃಂದ ಕುಚ್ಚೂರು ಇವುಗಳ ಸಹಯೋಗದಲ್ಲಿ ಚೈತನ್ಯ ಮಹಿಳಾ ವೃಂದ, ಅಂತರರಾಷ್ಟ್ರೀಯ ಸೀನಿಯರ್‌ ಛೇಂಬರ್ಸ್‌ ಘಟಕ, ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಶಿವಪುರ, ಮುನಿಯಾಲು ಲಯನ್ಸ್‌ ಕ್ಲಬ್‌ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಸಹಕಾರದಲ್ಲಿ ಸಮ್ಮೇಳನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT