ಕೋಟ್ಯದೀಶನ ಬಳಿ ಕಾರೂ ಇಲ್ಲ !

ಗುರುವಾರ , ಏಪ್ರಿಲ್ 25, 2019
33 °C
₹ 87.31 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಪ್ರಮೋದ್ ಮಧ್ವರಾಜ್

ಕೋಟ್ಯದೀಶನ ಬಳಿ ಕಾರೂ ಇಲ್ಲ !

Published:
Updated:
Prajavani

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರಮೋದ್ ಮಧ್ವರಾಜ್ ಅವರ ಆಸ್ತಿ ಒಂದೇ ವರ್ಷದಲ್ಲಿ ₹ 8.84 ಕೋಟಿಯಷ್ಟು ಹೆಚ್ಚಾಗಿದೆ ಎಂದು ಅಂಕಿ ಅಂಶಗಳು ದೃಢಪಡಿಸಿವೆ.

2018ರ ವಿಧಾನಸಭಾ ಚುನಾವಣೆ ವೇಳೆ ಪ್ರಮೋದ್ ಮಧ್ವರಾಜ್ ₹ 78.46 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಇದರಲ್ಲಿ ₹ 76.14 ಕೋಟಿ ಚರಾಸ್ಥಿ ಹಾಗೂ ₹ 2.32 ಕೋಟಿ ಸ್ಥಿರಾಸ್ಥಿ ಇತ್ತು.

ಪ್ರಸ್ತುತ ಲೋಕಸಭಾ ಚುನಾವಣೆಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ₹ 87.31 ಮೌಲ್ಯದ ಆಸ್ತಿ ಇರುವುದಾಗಿ ಮಾಹಿತಿ ನೀಡಿದ್ದಾರೆ. ಇದರಲ್ಲಿ ₹ 83.71 ಚರಾಸ್ತಿ ಹಾಗೂ ₹ 3.59 ಸ್ಥಿರಾಸ್ತಿ ಇದೆ. ಒಟ್ಟಾರೆ ಆಸ್ತಿ ಮೌಲ್ಯ ಗಣನೀಯವಾಗಿ ಏರಿಕೆಯಾಗಿರುವುದು ಕಂಡುಬಂದಿದೆ.

ಸಾಲಗಾರ:

2018ರಲ್ಲಿ ಪ್ರಮೋದ್ ಮೇಲೆ ಸಾಲ ಇರಲಿಲ್ಲ. ಆದರೆ, 2019ರಲ್ಲಿ ₹ 1.50 ಕೋಟಿ ತೆರಿಗೆ ಬಾಕಿ ಹಾಗೂ ₹ 83.81 ಲಕ್ಷ (ಲಯಬಿಲಿಟಿಸ್‌ ಅಂಡರ್ ಡಿಸ್‌ಪ್ಯುಟ್‌) ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.‌ ಪತ್ನಿಯ ಹೆಸರಿನಲ್ಲಿ ₹ 66.57 ಲಕ್ಷ ಸಾಲ ಇದೆ. ಪುತ್ರಿಯ ಹೆಸರಿನಲ್ಲೂ ₹ 1.10 ಲಕ್ಷ ಸಾಲ ಇದೆ.

ಪತ್ನಿ, ಪುತ್ರಿಯ ಆಸ್ತಿಯೂ ಏರಿಕೆ:

ಪ್ರಮೋದ್ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಪತ್ನಿ ಹಾಗೂ ಪುತ್ರಿಯ ಆದಾಯದ ವಿವರಗಳನ್ನು ತಿಳಿಸಿದ್ದರು. ಅದರಂತೆ ಪತ್ನಿ ಸುಪ್ರಿಯಾ ಪ್ರಮೋದ್‌ರಾಜ್ ₹ 5.85 ಕೋಟಿ ಹಾಗೂ ಪುತ್ರಿ ಪ್ರತ್ಯಕ್ಷ ಪ್ರಮೋದ್ ರಾಜ್ ₹ 1.76 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದರು. 

ಈ ಬಾರಿ ಪತ್ನಿಯ ಆಸ್ತಿ ಮೌಲ್ಯ ₹ 8,56 ಇದ್ದು, ಕಳೆದ ಬಾರಿಗೆ ಹೋಲಿಸಿದರೆ ₹ 2,70 ಕೋಟಿ ಜಾಸ್ತಿಯಾಗಿದೆ. ಪುತ್ರಿ ಪ್ರಸ್ತುತ ₹ 3.19 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಕಳೆದ ಸಲಕ್ಕಿಂತ  ₹ 1,43 ಕೋಟಿ ಏರಿಕೆಯಾಗಿದೆ.

ಬಂಗಾರ:

ಪ್ರಮೋದ್ ಅವರ ಕೈನಲ್ಲಿ ₹ 7.65 ಲಕ್ಷ ಹಣವಿದ್ದು, 424 ಗ್ರಾಂ ಚಿನ್ನದ ಆಭರಣ ಇದೆಯಂತೆ. ಕಳೆದ ವರ್ಷ 344 ಗ್ರಾಂ ಚಿನ್ನ ಇತ್ತು. ಪತ್ನಿಯ ಬಳಿ ಒಂದೂವರೆ ಕೆಜಿಗೂ ಹೆಚ್ಚು ಬಂಗಾರ ಹಾಗೂ ಹರಳುಗಳು, 1 ಕೆಜಿಯ ಬೆಳ್ಳಿಯ ವಸ್ತುಗಳು ಇವೆ. ಒಟ್ಟಾರೆ ಆಭರಣದ ಮೌಲ್ಯ ₹ 44.30 ಲಕ್ಷ. ಪುತ್ರಿಯ ಬಳಿ 200 ಗ್ರಾಂ ಬಂಗಾರ ಇದೆ.

ಠೇವಣಿ:

ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಪ್ರಮೋದ್ ₹ 72.19 ಲಕ್ಷ ಠೇವಣಿ ಹೊಂದಿದ್ದಾರೆ. ಬಾಂಡ್ಸ್, ಡಿಬೆಂಚರ್ಸ್‌, ಷೇರು ಹಾಗೂ ಮ್ಯೂಚುವಲ್ ಫಂಡ್‌ ಮೇಲೆ ₹ 11.07 ಕೋಟಿ ಹೂಡಿಕೆ ಮಾಡಿದ್ದು, ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ₹ 5.85 ಕೋಟಿಗೆ ಇಳಿಕೆಯಾಗಿದೆ.

ಬಂಡವಾಳ ಹೂಡಿಕೆ:

ಎನ್‌ಎಸ್‌ಸಿ ಪೋಸ್ಟಲ್ ಡೆಪಾಸಿಟ್‌, ಎಲ್‌ಐಸಿ ಮೇಲೆ ₹ 1.55 ಕೋಟಿ ಹೂಡಿಕೆ ಮಾಡಿದ್ದಾರೆ. ತಾಯಿ ಮನೋರಮಾ ಮಧ್ವರಾಜ್ ಅವರಿಗೆ ₹ 30.25 ಲಕ್ಷ ಸಾಲ ನೀಡಿದ್ದಾರೆ. ಪಿಶ್‌ಮಿಲ್‌ಗಳು ಸೇರಿದಂತೆ ಇತರ ಕಂಪೆನಿಗಳ ಮೇಲೆ ₹ 69.87 ಕೋಟಿ ಬಂಡವಾಳ ಹೂಡಿದ್ದಾರೆ.

ಜಮೀನು, ಫ್ಲಾಟ್‌:

ಪ್ರಮೋದ್ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಕೊಡವೂರಿನ 2 ಕಡೆಗಳಲ್ಲಿ 25 ಸೆಂಟ್ ಜಾಗ, ಉಡುಪಿಯ ಶಿರಿಬೀಡಿನಲ್ಲಿ ವಾಣಿಜ್ಯ ಕಟ್ಟಡ, ಅಂಬಲಪಾಡಿ ಹಾಗೂ ಬೆಂಗಳೂರಿನಲ್ಲಿ ವಾಸದ ಫ್ಲಾಟ್‌ಗಳಿವೆ.

ಪ್ರಮೋದ್ ಅವರು 1986ರಲ್ಲಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪಾಸು ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !