ಮಧ್ವ ಸರೋವರದಲ್ಲಿ ಮುಳುಗಿ ಯಾತ್ರಾತ್ರಿ ಸಾವು

7

ಮಧ್ವ ಸರೋವರದಲ್ಲಿ ಮುಳುಗಿ ಯಾತ್ರಾತ್ರಿ ಸಾವು

Published:
Updated:

ಉಡುಪಿ: ಶ್ರೀಕೃಷ್ಣಮಠದ ಪರಿಸರದಲ್ಲಿರುವ ಮಧ್ವ ಸರೋವರದಲ್ಲಿ ಸ್ನಾನ ಮಾಡಲು ತೆರಳಿದ್ದ ಯಾತ್ರಾತ್ರಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಶಿವಮೊಗ್ಗದ ವಿದ್ಯಾನಗರದ ಆದರ್ಶ್ (39) ಎಂದು ಗುರುತಿಸಲಾಗಿದೆ.

ಈಚೆಗೆ ಶ್ರೀಕೃಷ್ಣಮಠಕ್ಕೆ ದೇವರ ದರ್ಶನಕ್ಕೆ ಆದರ್ಶ್ ಬಂದಿದ್ದರು. ಬೆಳಿಗ್ಗೆ ಸರೋವರದಲ್ಲಿ ಸ್ನಾನಕ್ಕೆ ಇಳಿದಾಗ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ.

ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಸರೋವರದ ಆಳ ಸೇರಿದ್ದ ಶವವನ್ನು ಹೊರತೆಗೆದರು. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !