ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ: ‘ಸರ್ಕಾರಿ ಶಾಲೆ ಎಂದು ಕೀಳರಿಮೆ ಬೇಡ’

Published 7 ಫೆಬ್ರುವರಿ 2024, 15:34 IST
Last Updated 7 ಫೆಬ್ರುವರಿ 2024, 15:34 IST
ಅಕ್ಷರ ಗಾತ್ರ

ಕಾರ್ಕಳ: ಸರ್ಕಾರಿ ಶಾಲೆ ಎನ್ನುವ ಕೀಳರಿಮೆ ಬೇಡ. ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೇ ಸಮಾಜದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.

ತಾಲ್ಲೂಕಿನ ಮಿಯ್ಯಾರು ಕಾಡಂಬಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಹಳೆವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಅಂಕ ಗಳಿಕೆಯ ಶಿಕ್ಷಣ ಮಾತ್ರ ದೊರಕದೆ ಬದುಕಿಗೆ ಪೂರಕವಾದ ಶಿಕ್ಷಣ ದೊರೆಯುತ್ತದೆ ಎಂದರು.

ಶಾಲಾ ಹಿತೈಷಿ ಅರ್ಬಿ ಸುಬ್ರಾಯ ಪಾಠಕ್, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಅಣ್ಣು, ಉದ್ಯಮಿ ಉಮೇಶ್, ಮುಡಾರು ಶಾಲಾ ಮುಖ್ಯಶಿಕ್ಷಕ ದೇವದಾಸ್ ಪಾಟ್ಕರ್ ಅವರನ್ನು ಸನ್ಮಾನಿಸಲಾಯಿತು. ಮಿಯ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸನ್ಮತಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಕೆ.ಎಮ್.ಎಫ್ ನಿರ್ದೇಶಕ ಮುಡಾರು ಸುಧಾಕರ್ ಶೆಟ್ಟಿ, ದುರ್ಗಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್, ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಸಂತೋಷ್, ಶಿಕ್ಷಣ ಸಂಯೋಜಕ ಬಾಲಕೃಷ್ಣ ನಾಯಕ್, ಮಿಯ್ಯಾರು ಸಿಆರ್‌ಪಿ ಉಮೇಶ್ ಕೆ.ಎಸ್, ಕಾರ್ಕಳ ಎಸ್‌ವಿಟಿ ಶಾಲಾ ಶಿಕ್ಷಕ ದೇವದಾಸ್ ಕೆರೆಮನೆ, ಶಿಕ್ಷಕ ಸಂಜೀವ ದೇವಾಡಿಗ, ಶಂಕರ್ ನಾಯಕ್, ಅಂಗನವಾಡಿ ಶಿಕ್ಷಕಿ ವಸಂತಿ, ಉದ್ಯಮಿ ಉಮೇಶ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜು, ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ವಸಂತ್, ಮಾಜಿ ಅಧ್ಯಕ್ಷ ಕಿಟ್ಟಣ್ಣ ಇದ್ದರು. ‌ಮುಖ್ಯಶಿಕ್ಷಕ ಚಂದ್ರಶೇಖರ ಭಟ್ ನಂದಳಿಕೆ ಸ್ವಾಗತಿಸಿ, ವರದಿ ವಾಚಿಸಿದರು. ಸುಧೀರ್ ನಾಯಕ್ ಸಚ್ಚೇರಿಪೇಟೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT