ಶಿರ್ವ: ಕಾಪು ವಿಧಾನಸಭಾ ಕ್ಷೇತ್ರದ ಇನ್ನಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿಗೆ ₹40 ಲಕ್ಷ ಅನುದಾನ ಮಂಜೂರಾಗಿದ್ದು, ಇದರ ಭೂಮಿಪೂಜೆ ನಡೆಯಿತು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೂಮಿಪೂಜೆ ನೆರವೇರಿಸಿದರು. ಇನ್ನಂಜೆ ಗ್ರಾಮದ ನಿರಂಜನ ಶೆಟ್ಟಿ ಮನೆ ಬಳಿ ರಸ್ತೆ ಅಭಿವೃದ್ಧಿ, ಪಾಂಗಾಳ ಗ್ರಾಮದ ಸದಾಡಿ ಗುರುರಾಜ್ ಆಚಾರ್ಯ ಮನೆ ಬಳಿಯಿಂದ ಮಲೆ ಜುಮಾದಿ ಸಾನದವರೆಗೆ ರಸ್ತೆ ಅಭಿವೃದ್ಧಿ, ಇನ್ನಂಜೆ ಗ್ರಾಮದ ಗೋಳಿಕಟ್ಟೆ ವಿಠಲ್ ಕುಮಾರ್ ಮನೆ ಬಳಿಯ ರಸ್ತೆ ಅಭಿವೃದ್ಧಿ, ಶೀಲಾಪುರ ಮೋಹನ್ ಆಚಾರ್ಯ ಮನೆ ಬಳಿಯ ರಸ್ತೆ ಅಭಿವೃದ್ಧಿಗೆ ತಲಾ ₹10 ಲಕ್ಷ ಸೇರಿದಂತೆ ಒಟ್ಟು ₹40 ಲಕ್ಷದಲ್ಲಿ ಕಾಮಗಾರಿ ನಡೆಯಲಿದೆ ಎಂದು ತಿಳಿಸಲಾಯಿತು.

ಇನ್ನಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಉಪಾಧ್ಯಕ್ಷೆ ಸುರೇಖಾ ಶೆಟ್ಟಿ, ಸದಸ್ಯರಾದ ದಿವೇಶ್ ಶೆಟ್ಟಿ, ನಿತೇಶ್ ಸಾಲಿಯಾನ್, ಪುಷ್ಪಾ, ಸವಿತಾ ಶೆಟ್ಟಿ, ಮಲ್ಲಿಕಾ ಆಚಾರ್ಯ, ಸುನೀತಾ ಕುಲಾಲ್, ಅನಿತಾ ಮಥಾಯಸ್, ಜಯಶ್ರೀ, ರಾಜೇಶ್ ಆಚಾರ್ಯ, ಶಕ್ತಿ ಕೇಂದ್ರದ ಪ್ರವೀಣ್ ಶೆಟ್ಟಿ ಪಾಂಗಾಳ, ಸ್ಥಳೀಯರಾದ ಶೈಲೇಶ್ ಶೆಟ್ಟಿ ಪಾಂಗಾಳ, ನಾಗೇಶ್ ಭಂಡಾರಿ, ರಾಜೇಶ್ ಕುಲಾಲ್, ಪ್ರಕಾಶ್ ಆಚಾರ್ಯ, ಮಧುಸೂದನ್ ಆಚಾರ್ಯ, ನಿರಂಜನ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.