ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಟ್ಟೆ ವಿಶ್ವವಿದ್ಯಾಲಯದಲ್ಲಿ ತುಳು ದಿನಾಚರಣೆ

Published : 1 ಅಕ್ಟೋಬರ್ 2024, 13:49 IST
Last Updated : 1 ಅಕ್ಟೋಬರ್ 2024, 13:49 IST
ಫಾಲೋ ಮಾಡಿ
Comments

ಕಾರ್ಕಳ: ತಾಲ್ಲೂಕಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ, ಐಲೇಸಾ– ವಾಯ್ಸ್ ಆಫ್ ಓಷನ್ ಸಹಯೋಗದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ಸಂಭ್ರಮ ಸಭಾಂಗಣದಲ್ಲಿ ತುಳು ದಿನ ಈಚೆಗೆ ಆಚರಿಸಲಾಯಿತು.

ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಬರೆದಿರುವ ‘ಅಮೃತ ನೆಂಪು’ ಹಸ್ತಪ್ರತಿಯನ್ನು ನಿಟ್ಟೆ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು. ಕೊರಗ ಸಮುದಾಯದ ಬುಡಕಟ್ಟು ಸಂಗೀತದ ಸೌಂದರ್ಯವನ್ನು ಅನಾವರಣಗೊಳಿಸುವ ‘ಐಲೇಸಾ’ ಕೊರಗ ಹಾಡನ್ನು ಪ್ರದರ್ಶಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿವಿಯ ಐಎಸ್ಆರ್, ಸಿಆರ್‌ಎಲ್ ಉಪಾಧ್ಯಕ್ಷ ಪ್ರೊ.ಸತೀಶ್ ಕುಮಾರ್ ಭಂಡಾರಿ ಅವರು ತುಳುನಾಡಿನ ಶ್ರೀಮಂತ ಸಂಸ್ಕೃತಿ, ತುಳು ಭಾಷೆಯ ಶ್ರೀಮಂತಿಕೆಯನ್ನು ವಿವರಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ.ಚೇತನ್ ಸೋಮೇಶ್ವರ ಅನುಭವಗಳನ್ನು ಹಂಚಿಕೊಂಡರು.

ಸಂಗೀತ ನಿರ್ದೇಶಕ ವಿ. ಮನೋಹರ್, ನಿಟ್ಟೆ ವಿವಿ ಉಪಾಧ್ಯಕ್ಷ ಪ್ರೊ.ಗೋಪಾಲ್ ಮುಗೇರಾಯ ತುಳು ಸಮುದಾಯ, ತುಳು ಭಾಷೆ, ಪ್ರಾಚೀನ ಕಾಲದಿಂದ ಇಲ್ಲಿ ಅನುಸರಿಸುತ್ತಿರುವ ಸಂಸ್ಕೃತಿಯ ಶ್ರೀಮಂತಿಕೆ ಬಗ್ಗೆ ಮಾತನಾಡಿದರು.

ಎನ್ಎಂಎಎಂಐಟಿ ಪ್ರಾಂಶುಪಾಲ ನಿರಂಜನ್ ಎನ್.ಚಿಪ್ಳೂಣ್ಕರ್ ಸ್ವಾಗತಿಸಿದರು. ಐಲೇಸಾ ಪ್ರತಿನಿಧಿ ರಮೇಶ್ ಚಂದ್ರ ಪ್ರಾರ್ಥಿಸಿದರು. ಎನ್.ಎಸ್.ಎ.ಎಂ. ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲೆ ವೀಣಾ ಬಿ.ಕೆ. ಇದ್ದರು. ನರಸಿಂಹ ಕೆ. ಬೈಲಕೇರಿ ವಂದಿಸಿದರು. ಸಂಯೋಜಕ ಕೆ.ಆರ್.ಶೆಟ್ಟಿ, ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥೆ ಸಾಯೀಗೀತಾ, ಶಶಿಕುಮಾರ್ ಶೆಟ್ಟಿ ಸಹಕರಿಸಿದರು. ವಿದ್ಯಾರ್ಥಿಗಳಾದ ವಿಘ್ನೇಶ್, ಚೈತ್ರಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT