ಕುಂದಾಪುರ : ‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಲ್ಲಿ ನರ್ಸ್ಗಳ ಮಾಸಿಕ ವೇತನ ₹2,500ರಿಂದ ₹3 ಸಾವಿರ ಹೆಚ್ಚಾಗಿದ್ದು, ಇದನ್ನು ನೀಡಲು ಆರೋಗ್ಯ ಇಲಾಖೆಯಲ್ಲಿ 3 ತಿಂಗಳ ಹೆಚ್ಚುವರಿ ವೇತನ ಲಂಚ ಪಡೆಯಲಾಗುತ್ತಿದೆ’ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಆರೋಪಿಸಿದರು.

ಇಲ್ಲಿ ಮಂಗಳವಾರ ನಡೆದ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

‘ಸಿಬ್ಬಂದಿಯ ವೇತನದಲ್ಲಿ ಏರಿಕೆಯಾಗಿರುವ ಅಲ್ಪ ಪ್ರಮಾಣಕ್ಕೂ ಲಂಚ ಪಡೆಯುವ ದುಷ್ಟತನ ಯಾಕೆ? ಕೇಳಿರುವುದು ಹಾಗೂ ಪಡೆದಿರುವುದು ಯಾರು ಎನ್ನುವುದಕ್ಕೆ ಸಾಕ್ಷಿ ಇದೆ. ಸದ್ಯ ಹೆಸರು ಬಹಿರಂಗಪಡಿಸುವುದಿಲ್ಲ. ಪಡೆದವರು ತಕ್ಷಣ ಅದನ್ನು ಮರಳಿಸಬೇಕು’ ಎಂದು ಸೂಚನೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ‘ನಮ್ಮ ಜಿಲ್ಲೆ ಇಷ್ಟೊಂದು ಲಂಚಬಾಕತನದಲ್ಲಿ ಹೆಸರು ಕೆಡಿಸಿಕೊಂಡಿರಲಿಲ್ಲ. ಹಣ ಪಡೆದವರು ಮರಳಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.