ಸೋಮವಾರ, ಏಪ್ರಿಲ್ 12, 2021
25 °C
ಉಡುಪಿ‌: 218 ಸೋಂಕಿತರು ಗುಣಮುಖ

ಉಡುಪಿ: ಒಂದು ಸಾವು, 258 ಪಾಸಿಟಿವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಬುಧವಾರ ಕೋವಿಡ್‌ ಸೋಂಕಿತ ವ್ಯಕ್ತಿಯೊಬ್ಬ ಮೃತಪಟ್ಟು, 258 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಉಡುಪಿಯ 162, ಕುಂದಾಪುರದ 39, ಕಾರ್ಕಳದ 41 ಹಾಗೂ ಇತರೆ ಜಿಲ್ಲೆಗಳ 16 ಜನರಿಗೆ ಸೋಂಕು ದೃಢವಾಗಿದೆ.

ಪ್ರಾಥಮಿಕ ಸಂಪರ್ಕದಿಂದ 171, ಶೀತಜ್ವರದ ಲಕ್ಷಣಗಳಿದ್ದ 49, ತೀವ್ರ ಉಸಿರಾಟದ ಸಮಸ್ಯೆ ಇದ್ದ 7 ಜನರಲ್ಲಿ ಸೋಂಕು ಪತ್ತೆಯಾದರೆ, 31 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಇವರಲ್ಲಿ 164 ಪುರುಷರು, 104 ಮಹಿಳೆಯರು ಇದ್ದಾರೆ.

144 ಸೋಂಕಿತರಿಗೆ ರೋಗ ಲಕ್ಷಣಗಳಿದ್ದರೆ, 114 ಮಂದಿಗೆ ಲಕ್ಷಣಗಳಿಲ್ಲ. ಬುಧವಾರ 1,315 ಶಂಕಿತರ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. 

218 ರೋಗಿಗಳು ಗುಣಮುಖರಾಗಿದ್ದು, ಇದುವರೆಗೂ 11,342 ಮಂದಿ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,884 ಸಕ್ರಿಯ ಪ್ರಕರಣಗಳಿವೆ. ಒಟ್ಟು ಪ್ರಕರಣಗಳ ಸಂಖ್ಯೆ 13,345ಕ್ಕೇರಿಕೆಯಾಗಿದೆ. 

ವ್ಯಕ್ತಿ ಸಾವು: ಹಲವು ಗಂಭೀರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಕಾರ್ಕಳ ತಾಲ್ಲಕಿನ 66 ವರ್ಷದ ಸೋಂಕಿತ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮೃತ ಸೋಂಕಿತರ ಸಂಖ್ಯೆ 122ಕ್ಕೇರಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು