ಶುಕ್ರವಾರ, ಜೂನ್ 5, 2020
27 °C
ಬೇಸಗೆಯ ಬೇಗೆಗೆ ತಂಪೆರೆದ ಮಳೆ

ಉಡುಪಿ: ಗುಡುಗು ಸಿಡಿಲು ಸಹಿತ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಾದ್ಯಂತ ಮಂಗಳವಾರ ಗುಡುಗು ಸಿಡಿಲು ಸಹಿತ ಬಿರುಸಾದ ಮಳೆ ಸುರಿಯಿತು. ಹೆಬ್ರಿ, ಬ್ರಹ್ಮಾವರ, ಪಡುಬಿದ್ರಿ, ಉಡುಪಿ, ಬೈಂದೂರು, ಕುಂದಾಪುರ ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿತ್ತು.

ಬೇಸಗೆಯ ದಗೆಗೆ ಕಂಗೆಟ್ಟಿದ್ದ ಸಾರ್ವಜನಿಕರಿಗೆ ವರ್ಷದ ಮೊದಲ ಮಳೆ ತಂಪೆರೆದ ಅನುಭವ ನೀಡಿತು. ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣ ಇತ್ತು. ಏಕಾಏಕಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಸಿಡಿಲು, ಗುಡುಗಿನ ಆರ್ಭಟದೊಂದಿಗೆ ಕೆಲಹೊತ್ತು ಜೋರಾದ ಮಳೆ ಸುರಿಯಿತು.

ಗುಡುಗು ಸಿಡಿಲು ಹೆಚ್ಚಾಗುತ್ತಿದ್ದಂತೆ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಯಿತು. ಒಂದೆರಡು ಕರೆಂಟ್ ಇರಲಿಲ್ಲ. ರಸ್ತೆಗಳು ಮಳೆಯ ನೀರಿನಿಂದ ಜಲಾವೃತವಾಗಿದ್ದವು. ಜೋರು ಗಾಳಿ ಇಲ್ಲವಾದ್ದರಿಂದ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು