ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ರಾಜ್ಯೋತ್ಸವ: 36 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೌರವ

ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ಪ್ರಶಸ್ತಿ ಪ್ರದಾನ
Last Updated 30 ಅಕ್ಟೋಬರ್ 2020, 13:46 IST
ಅಕ್ಷರ ಗಾತ್ರ

ಉಡುಪಿ: ಕಲೆ, ಸಾಹಿತ್ಯ, ಶಿಕ್ಷಣ, ಸಾಮಾಜಿಕ, ಪತ್ರಿಕೋದ್ಯಮ ಹೀಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ 2020ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.

ದೈವಾರಾಧನೆ: ಹೆಬ್ರಿ ತಾಲ್ಲೂಕಿನ ಅಲ್ಬಾಡಿ ಗ್ರಾಮದ ರಂಗ ಪಾಣ, ಮುದ್ರಾಡಿಯ ಮಂಜುನಾಥ್‌ ಶೇರಿಗಾರ, ಕಾರ್ಕಳ ತಾಲ್ಲೂಕು ಕಾಂತಾವರದ ಮೋಂಟು ಪಾಣರ.

ರಂಗಭೂಮಿ: ಬ್ರಹ್ಮಾವರದ ಸಾಲಿಗ್ರಾಮದ ಪಾರಂಪಳ್ಳಿ ನರಸಿಂಹ ಐತಾಳ್‌, ಕಾರ್ಕಳ ತಾಲ್ಲೂಕಿನ ಎಳ್ಳಾರೆಯ ವಸಂತಿ ಪೂಜಾರಿ ಮುನಿಯಾಲು, ಕಾಪು ತಾಲ್ಲೂಕಿನ ಮೂಡುಬೆಳ್ಳೆಯ ದಿನಕರ ಭಂಡಾರಿ ಕಣಜಾರು.

ಸಾಹಿತ್ಯ: ಕುರ್ಕಾಲು ಬಿಳಿಯಾರಿನ ನವೀನ್ ಸುವರ್ಣ ಪಡ್ರೆ.

ಯಕ್ಷಗಾನ: ಬ್ರಹ್ಮಾವರ ತಾಲ್ಲೂಕು ಕೋಟದ ಹಂದಟ್ಟಿನ ಸುದರ್ಶನ ಉರಾಳ, ಚೇರ್ಕಾಡಿಯ ಶಶಿಕಲಾ ಪ್ರಭು, ಕುಂದಾಪುರ ತಾಲ್ಲೂಕಿನ ನಾಡ ಗ್ರಾಮದ ನಾಗೇಶ್ ಗಾಣಿಗ.

ಪತ್ರಿಕೋದ್ಯಮ: ಬೈಂದೂರಿನ ಉಪ್ಪುಂದದ ಉದಯ ಶಂಕರ ಪಡಿಯಾರ್, ಕುಂದಾಪುರದ ಆರ್.ಶ್ರೀಪತಿ ಹೆಗಡೆ ಹಕ್ಲಾಡಿ.

ಶೈಕ್ಷಣಿಕ: ಉಡುಪಿಯ ಚಿಟ್ಪಾಡಿಯ ಡಾ.ಕೆ.ಗೋಪಾಲಕೃಷ್ಣ ಭಟ್‌, ಅಜೆಕಾರು ಪದ್ಮಗೋಪಾಲ ಎಜುಕೇಷನ್‌ ಟ್ರಸ್ಟ್‌ನ ಡಾ.ಸುಧಾಕರ್ ಶೆಟ್ಟಿ. ಉಡುಪಿಯ ಗುಂಡಿಬೈಲಿನ ಡಾ.ಕೆ.ಸುಧೀರ್‌ ರಾವ್.

ಸಂಕೀರ್ಣ: ಉಡುಪಿಯ ಪೂರ್ಣಿಮಾ ಜನಾರ್ಧನ್‌ ಕೊಡವೂರು, ಕುಂದಾಪುರದ ವಡಂಬಳ್ಳಿ ಜಯರಾಮ ಶೆಟ್ಟಿ, ಮಣಿಪಾಲದ ಬೆಳ್ಳಿಪಾಡಿಯ ಹರಿಪ್ರಸಾದ್ ರೈ.

ಯೋಗ: ಕಾರ್ಕಳ ತಾಲ್ಲೂಕಿನ ಕಡ್ತಲದ ಶೇಖರ ಕಡ್ತಲ.

ಕಲೆ (ಕರಕುಶಲ):ಕುಂದಾಪುರ ತಾಲ್ಲೂಕಿನ ಜಪ್ತಿಯ ಬಾಬು ಕೊರಗ, ಶ್ರೀಪತಿ ಆಚಾರ್ಯ (ಕಾಷ್ಟಶಿಲ್ಪ), ಕಾರ್ಕಳದ ನೂರಾಳ್‌ಬೆಟ್ಟುವಿನ ಸುರೇಂದ್ರ (ಪೆನ್ಸಿಲ್‌ ಆರ್ಟ್‌), ರೆಂಜಾಳದ ಆರ್.ರಾಧಮಾಧವ ಶೆಣೈ (ಶಿಲ್ಪಕಲೆ).

ವೈದ್ಯಕೀಯ: ಕಾರ್ಕಳದ ಡಾ.ಎಂ.ರವಿರಾಜ ಶೆಟ್ಟಿ.

ಸಂಗೀತ: ಪ್ರಕಾಶ್ ದೇವಾಡಿಗ, ಮಣಿಪಾಲದ ಮಾಯಾ ಕಾಮತ್.

ನೃತ್ಯ: ಉಡುಪಿಯ ಕುಂಜಿಬೆಟ್ಟುವಿನ ವಿದುಷಿ ಯಶ ರಾಮಕೃಷ್ಣ, ಕಾಪುವಿನ ಉಚ್ಚಿಲದ ಮಂಗಳ ಕಿಶೋರ್ ದೇವಾಡಿಗ.

ಸಮಾಜಸೇವೆ: ಉಡುಪಿಯ ಪಡುತೋನ್ಸೆಯ ಇಮ್ತಿಯಾಜ್, ಬಾರ್ಕೂರು ಕಚ್ಚೂರಿನಕೂಸ ಕುಂದರ್‌, ಕಾರ್ಕಳದ ಜಯಂತ್ ರಾವ್, ಮಣಿಪಾಲದ ನಾರಾಯಣ ಮೂರ್ತಿ.

ಕ್ರೀಡೆ: ಪಡುಬಿದ್ರಿಯ ಶರತ್ ಶೆಟ್ಟಿ, ಕುಂದಾಪುರದ ಉಪ್ಪಿನಕುದ್ರುವಿನ ನಾಗಶ್ರೀ ಗಣೇಶ್‌ ಶೇರುಗಾರ.

ಬಾಲಪ್ರತಿಭೆ: ಉದ್ಯಾವರದ ತನುಶ್ರೀ ಪಿತ್ರೋಡಿ, ಬೈಂದೂರು ಮರವಂತೆಯ ಶ್ರಾವ್ಯ ಮರವಂತೆ.

ಸಂಘ ಸಂಸ್ಥೆ: ಉಡುಪಿಯ ಸ್ವಚ್ಛಭಾರತ್ ಫ್ರೆಂಡ್ಸ್‌, ಅಂಬಲಪಾಡಿಯ ಉಮಾಮಹೇಶ್ವರ ಭಜನಾ ಮಂದಿರ, ಕಾರ್ಕಳ ತಾಲ್ಲೂಕು ನಂದಳಿಕೆಯ ದುರ್ಗಾಪರಮೇಶ್ವರಿ ಫ್ರೆಂಡ್ಸ್‌ ಕ್ಲಬ್‌, ಉದ್ಯಾವರದ ವೆಂಕಟರಮಣ ಸ್ಪೋರ್ಟ್ಸ್‌ ಅಂಡ್‌ ಕಲ್ಚರಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT