ಪುಂಡರ ಹಾವಳಿಗೆ ಕಡಿವಾಣ: ಲಕ್ಷ್ಮಣ ನಿಂಬರಗಿ

7
ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರಿಂದ ದೂರು: ಎಸ್‌ಪಿ ಎಚ್ಚರಿಕೆ

ಪುಂಡರ ಹಾವಳಿಗೆ ಕಡಿವಾಣ: ಲಕ್ಷ್ಮಣ ನಿಂಬರಗಿ

Published:
Updated:
Deccan Herald

ಉಡುಪಿ: ಜಿಲ್ಲೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಶುಕ್ರವಾರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರು ಆಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಮಂದಾರ್ತಿಯ ದುರ್ಗಿ ಕಟ್ಟೆ, ಕುಂದಾಪುರದ ನೆಹರು ಮೈದಾನ, ಸಾಲಿಗ್ರಾಮ, ಕೊಕ್ಕರಣೆ, ಅಂಬಲಪಾಡಿಯಲ್ಲಿ ಸಂಜೆ 6 ನಂತರ ಪುಂಡರ ಹಾವಳಿ ಹೆಚ್ಚಾಗಿದ್ದು, ಇದರಿಂದಾಗಿ ಜನರು ರಸ್ತೆಯಲ್ಲಿ ತಿರುಗಾಡಲು ಸಮಸ್ಯೆ ಆಗಿರಿವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.

ಮಣಿಪಾಲದ ಆರ್.ಟಿ .ಓ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಕೊಡದಿರುವುದರ ಬಗ್ಗೆ ಸಾರ್ವಜನಿಕರೊಬ್ಬರು ದೂರು ನೀಡಿದ್ದಾರೆ. ಈ ಸಮಸ್ಯೆಯ ಕುರಿತು ಶೀಘ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಮಟ್ಕಾ ಪ್ರಕರಣದ ಆರೋಪಿಗಳನ್ನು ಗಡಿಪಾರು ಮಾಡುವ ಪ್ರಯತ್ನವೂ ಮುಂದುವರಿದಿದೆ. ಮಟ್ಕಾ ಬಗ್ಗೆ ಹಿಂದಿನ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದಿದ್ದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ದೂರುಗಳ ಸಂಖ್ಯೆ ಕಡಿಮೆ ಇದೆ ಎಂದು ಮಾಹಿತಿ ನೀಡಿದರು.

ಬಾರಕೂರು, ಬ್ರಹ್ಮಾವರ, ಉಪ್ಪೂರಿನಲ್ಲಿ ವೈಟ್‌ ಬೋರ್ಡ್‌ ವಾಹನಗಳು ಗ್ರಾಹಕರನ್ನು ಹತ್ತಿಸಿಕೊಂಡು ಹೋಗುತ್ತಿರುವುದರಿಮದ ಸಮಸ್ಯೆಯಾಗಿದೆ ಎಂದು ಹಳದಿ ಬೋರ್ಡ್‌ ಟ್ಯಾಕ್ಸಿ ಚಾಲಕರು ದೂರಿದ್ದಾರೆ. ಉಡುಪಿ ಮಣಿಪಾಲದ ರಸ್ತೆಯಲ್ಲಿ ಸಂಚರಿಸುವ ವೇಳೆ ವಾಹನಗಳ ಹೈ ಬೀಮ್‌ ಲೈಟ್‌ ಹಾಕಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಗಮನಕ್ಕೆ ಬಂದಿದ್ದು, ಶೀಘ್ರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.

ಪಡುಬಿದ್ರೆಯಲ್ಲಿ ಅಕ್ರಮ ದನ ಸಾಗಾಟ, ಕರಾವಳಿ ಬೈಪಾಸ್‌ ಬಳಿಯಲ್ಲಿ ಭಾರೀ ವಾಹನಗಳ ನಿಲುಗಡೆ, ಅಂಬಲಪಾಡಿಯಲ್ಲಿ ಹಣಕ್ಕಾಗಿ ಮಂಗಳಮುಖಿಯರು ಅಂಗಡಿ ಮಾಲೀಕರನ್ನು ಪೀಡಿಸುತ್ತಿರುವುದು, ಮೂಡು ಬೆಳ್ಳೆಯಲ್ಲಿ ಅಕ್ರಮ ಮದ್ಯ ಸಾಗಾಟ ಸೇರಿದಂತೆ ಹಲವು ದೂರುಗಳು ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಬಂದಿವೆ. ಇದಕ್ಕಲ್ಲ ಶೀಘ್ರ ಪರಿಹಾರ ನೀಡುವುದಾಗಿ ಎಸ್ಪಿ ಭರವಸೆ ನೀಡಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !