ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರಪ್ರದೇಶದಲ್ಲಿ ದಕ್ಷಿಣ ಭಾರತ ವಲಯ ಚಾಂಪಿಯನ್ ಶಿಪ್ ಸ್ಪೋರ್ಟ್ಸ್

Published 30 ಜೂನ್ 2024, 13:46 IST
Last Updated 30 ಜೂನ್ 2024, 13:46 IST
ಅಕ್ಷರ ಗಾತ್ರ

ಹೆಬ್ರಿ: ಎಚ್‌ಸಿಎಲ್‌ ಫೌಂಡೇಷನ್ ವತಿಯಿಂದ ಜೂನ್ 20 ಮತ್ತು 21ರಂದು ಆಂಧ್ರಪ್ರದೇಶದ ಗುಂಟೂರು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ನಡೆದ ‘ದಕ್ಷಿಣ ಭಾರತ ವಲಯ ಚಾಂಪಿಯನ್ ಶಿಪ್ ಸ್ಪೋರ್ಟ್ಸ್ ಫೋರ್ ಚೇಂಜ್–24’ರಲ್ಲಿ ಉಡುಪಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಪ್ರತಿನಿಧಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಾರ್ಕಳ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ಇಲಾಂಗ್ ಬಮ್ ನಾನ್ ತೋಯಿ ದೇವಿ (ಚೆಸ್), ಧನುಷ್ (ಬ್ಯಾಡ್ಮಿಂಟನ್), ಅಮೋಘ (ಟೇಬಲ್ ಟೆನ್ನಿಸ್), ಸಿಂಚನ (ಟೇಬಲ್ ಟೆನ್ನಿಸ್).

ಗುಂಡ್ಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿನ್ಮಯಿ (60 ಮೀಟರ್ ರನ್ನಿಂಗ್ ರೇಸ್), ಮಣಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಿಂಕ ಚೌದರಿ (ಉದ್ದ ಜಿಗಿತ), ಶೇಕ್ ಮಹಮ್ಮದ್ ಅಲ್ಫಾಜ್ (ಗುಂಡು ಎಸೆತ), ಹೃತ್ವೀಕ್ (ಎತ್ತರ ಜಿಗಿತ), ಭುವನೇಂದ್ರ ಆಚಾರ್ಯ (ಕೇರಂ), ಅರಮನೆ ಒಕ್ಕಲು‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜುನೈದ್ (60 ಮೀಟರ್ ರನ್ನಿಂಗ್ ರೇಸ್), ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ಪ್ರೇಕ್ಷ (600 ಮೀಟರ್ ರನ್ನಿಂಗ್ ರೇಸ್), ದೀಕ್ಷಿತ್ (ವಾಲಿಬಾಲ್), ಅಲ್ಬಾಡಿ ಆರ್ಡಿ ಸರ್ಕಾರಿ ಪ್ರೌಢಶಾಲೆಯ ನಂದನ (ಎತ್ತರ ಜಿಗಿತ) ಆದಿತ್ಯ (600 ಮೀಟರ್ ರನ್ನಿಂಗ್ ರೇಸ್).

ಒಳಕಾಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ರಶ್ಮಿತಾ (ಗುಂಡು ಎಸೆತ), ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿತೇಶ್ (ಟ್ರಯಥ್ಲಾನ್), ಬ್ರಹ್ಮಾವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಯುಷ್ ಎಸ್ ಅಮೀನ್ (ಗುಂಡು ಎಸೆತ), ಗೌತಮ್ (ತ್ರೋಬಾಲ್), ಮೂಡುಗಿಳಿಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಲ್ಮಾನ್ (ತ್ರೋಬಾಲ್), ಬಸ್ರೂರು ಸರ್ಕಾರಿ ಪ್ರೌಢಶಾಲೆಯ ರಿತೇಶ್ (ಟ್ರಯಥ್ಲಾನ್) ತಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾವ್ಯಾ (ಬ್ಯಾಡ್ಮಿಂಟನ್), ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಶಾಲೆಯ ಶಮಿತ್ (ವಾಲಿಬಾಲ್) ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಾರ್ಕಳ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ ಎನ್, ಪೆರ್ವಾಜಿ ಸರ್ಕಾರಿ ಮಾದರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ಎಂ, ಮೇಲ್ವಿಚಾರಕಿ ವಿಶಾಲ ದೇವಾಡಿಗ, ಶೋಧನ್ ಶೆಟ್ಟಿ ಮುನಿಯಾಲು, ಶ್ರವಣ್ ಅಜೆಕಾರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT