ಭಾನುವಾರ, ನವೆಂಬರ್ 29, 2020
19 °C

ನಿವೃತ್ತಿ ದಿನ ಬಡ ವಿದ್ಯಾರ್ಥಿನಿಗೆ ಮನೆ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ತಾಲ್ಲೂಕಿನ ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಕಡೇಕಾರ್ ಅವರು ನಿವೃತ್ತಿಯ ದಿನವೇ ಬಡ ವಿದ್ಯಾರ್ಥಿನಿಗೆ ಮನೆಯನ್ನು ಕಟ್ಟಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಶನಿವಾರ ತಾಲ್ಲೂಕಿನ ಕಕ್ಕುಂಜೆಯಲ್ಲಿ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳ ಸಮ್ಮುಖದಲ್ಲಿ ವಿದ್ಯಾರ್ಥಿನಿ ನಯನಾಗೆ ಮನೆ ಹಸ್ತಾಂತರಿಸಲಾಯಿತು. ಮುರಳಿ ಕಡೇಕಾರ್ 32 ವರ್ಷಗಳಿಂದ ನಿಟ್ಟೂರು ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದು, 5 ವರ್ಷಗಳ ಹಿಂದೆ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿದ್ದರು.

ಅದೇ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಕೊರಗ ಸಮುದಾಯದ ನಯನಾ ಕುಟುಂಬ ತೀರಾ ಬಡತನದಲ್ಲಿರುವುದನ್ನು ಕಂಡು ಸ್ವಂತ ದುಡಿಮೆಯ ಹಣದಲ್ಲಿ ₹ 3.5 ಲಕ್ಷ ವ್ಯಯಿಸಿ ಚಿಕ್ಕದೊಂದು ಸೂರು ಕಟ್ಟಿಸಿಕೊಟ್ಟಿದ್ದಾರೆ.

‘ನಿವೃತ್ತಿಯ ದಿನ ವಿಶೇಷವಾಗಿರಬೇಕು ಎಂಬ ಉದ್ದೇಶದಿಂದ ಜೋಪಡಿಯಲ್ಲಿದ್ದ ನಯನಾಗೆ ಮನೆ ಕಟ್ಟಿಸಿಕೊಟ್ಟಿದ್ದೇನೆ. ಹಿಂದಿನಿಂದಲೂ ದುಡಿಮೆಯ ಒಂದು ಭಾಗವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುತ್ತಾ ಬಂದಿದ್ದೇನೆ. ಮುಂದೆಯೂ ಸಮಾಜಪರ ಕಾರ್ಯಗಳು ಮುಂದುವರಿಯಲಿವೆ’ ಎಂದು ಮುರಳಿ ಕಡೇಕಾರ್ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು