ಭಾನುವಾರ, ಜುಲೈ 3, 2022
24 °C

ಉಡುಪಿ: ಟಿಪ್ಪರ್ ಮಗುಚಿ ಬಿದ್ದು ಚಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡುಬಿದ್ರಿ: ಟಿಪ್ಪರ್ ಮಗುಚಿ ಬಿದ್ದು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಸಮೀಪದ ನಂದಿಕೂರು-ಮುದರಂಗಡಿ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ಪಕ್ಷಿಕೆರೆ ನಿವಾಸಿ ಹರೀಶ್ ಕೋಟ್ಯಾನ್ (37) ಎಂದು ಗುರುತಿಸಲಾಗಿದೆ.

ನಂದಿಕೂರು ಇಂಡಸ್ಟ್ರಿಯಲ್ ಎಸ್ಟೇಟ್‌ಗೆ ಟಿಪ್ಪರ್‌ನಲ್ಲಿ ಮಣ್ಣು ಸಾಗಿಸುತ್ತಿದ್ದರು. ಮಣ್ಣನ್ನು ಖಾಲಿ ಮಾಡುತ್ತಿರುವ ವೇಳೆ ಟಿಪ್ಪರ್ ಹರೀಶ್ ಮೇಲೆ ಮಗುಚಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಮೊದಲು ಹರೀಶ್‌ ಬಸ್‌ ಚಾಲಕನಾಗಿದ್ದ ಎನ್ನಲಾಗಿದೆ.

ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು