ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಶಕ್ತಿ: ಉಡುಪಿ–ಚಿಕ್ಕಮಗಳೂರು ನಂಬರ್ 1

ರಾಜ್ಯದಲ್ಲೇ ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆ
Published 25 ಮಾರ್ಚ್ 2024, 7:32 IST
Last Updated 25 ಮಾರ್ಚ್ 2024, 7:32 IST
ಅಕ್ಷರ ಗಾತ್ರ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ರಾಜ್ಯದಲ್ಲೇ ಅತಿಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿದೆ. ರಾಜ್ಯದ ಮತದಾರರ ಅಂಕಿ ಅಂಶಗಳನ್ನು ಅವಲೋಕಿಸಿದರೆ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಟ್ಟು 15,72,958 ಮತದಾರರು ಇದ್ದು ಅವರ ಪೈಕಿ 7,62,558 ಮತದಾರರು ಪುರುಷರಾಗಿದ್ದರೆ 8,10,362 ಮತದಾರರು ಮಹಿಳೆಯರು ಎಂಬುದು ವಿಶೇಷ.

ಪುರುಷರಿಗೆ ಹೋಲಿಸಿದರೆ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ 47,804 ಹೆಚ್ಚಾಗಿದೆ. ಶೇ 51.51 ಮಹಿಳಾ ಮತದಾರರು ಇದ್ದರೆ, ಶೇ 49.49 ಪುರುಷ ಮತದಾರರು ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಲೋಕಸಭಾ ಕ್ಷೇತ್ರಗಳ ಪೈಕಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿ 8,76,957(ಶೇ 48.83) ಪುರುಷರಿದ್ದರೆ, 9,19,279 (ಶೇ 51.17) ಮಹಿಳಾ ಮತದಾರರು ಇದ್ದಾರೆ.

ಮೈಸೂರು ಜಿಲ್ಲೆ ಮೂರನೇ ಸ್ಥಾನದಲ್ಲಿದ್ದು, 10,17,120 (ಶೇ 49.09) ಪುರುಷ ಮತದಾರರು, 10,55,035 (ಶೇ 50.91) ಮಹಿಳಾ ಮತದಾರರು ಇದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 8,71,490 ಪುರುಷರು (ಶೇ 49.29) ಹಾಗೂ 8,97,031 (ಶೇ 50.71) ಮಹಿಳೆಯರು ಇದ್ದು ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಐದನೇ ಸ್ಥಾನದಲ್ಲಿ ಕೊಪ್ಪಳ ಜಿಲ್ಲೆಯಿದ್ದು 9,12,818 (ಶೇ 49.31) ಪುರುಷರು ಹಾಗೂ 9,38,750 (ಶೇ 50.69) ಮಹಿಳಾ ಮತದಾರರು ಇದ್ದಾರೆ.

ಇನ್ನೂ ರಾಜ್ಯದಲ್ಲಿ ಅತಿ ಕಡಿಮೆ ಮಹಿಳಾ ಮತದಾರರು ಇರುವ ಕ್ಷೇತ್ರಗಳನ್ನು ನೋಡುವುದಾದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇಲ್ಲಿ 11,95,285 (ಶೇ 51.57) ಪುರುಷ ಮತದಾರರು ಇದ್ದರೆ, 11,21,788 (ಶೇ 48.67) ಮಹಿಳಾ ಮತದಾರರು ಇದ್ದಾರೆ. ಎರಡನೇ ಸ್ಥಾನದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಇದ್ದು ಇಲ್ಲಿ 12,36,897 (51.56) ಪುರುಷರು, 11,61,548 (ಶೇ 48.44) ಮಹಿಳೆಯರು ಇದ್ದಾರೆ.

ಬೀದರ್‌ ಲೋಕಸಭಾ ಕ್ಷೇತ್ರ ಮೂರನೇ ಸ್ಥಾನದಲ್ಲಿದ್ದು ಇಲ್ಲಿ 9,62,809 (ಶೇ 51.33) ಪುರುಷ ಮತದಾರರು, 9,12,542 (ಶೇ 48.67) ಮಹಿಳಾ ಮತದಾರರು ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವಿದ್ದು ಇಲ್ಲಿ 16,29,089 (ಶೇ 51.32) ಹಾಗೂ 15,44,415 (ಶೇ 48.68) ಮಹಿಳಾ ಮತದಾರರು ಇದ್ದಾರೆ. ಐದನೇ ಸ್ಥಾನದಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರವಿದ್ದು 9,81,251 (ಶೇ 50.80) ಪುರುಷ ಮತದಾರರು ಹಾಗೂ 9,49,885 ಮಹಿಳಾ ಮತದಾರರು ಇದ್ದಾರೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲೂ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿರುವುದು ವಿಶೇಷ.

ಕುಂದಾಪುರ ತಾಲ್ಲೂಕಿನಲ್ಲಿ 1,01,066 ಪುರುಷರು, 1,09,051 ಮಹಿಳೆಯರು, ಉಡುಪಿ ಕ್ಷೇತ್ರದಲ್ಲಿ 1,05,654 ಪುರುಷರು, 1,13,372 ಮಹಿಳೆಯರು, ಕಾಪು ತಾಲ್ಲೂಕಿನಲ್ಲಿ 91,492 ಪುರುಷರು, 99,382 ಮಹಿಳೆಯರು, ‌ಕಾರ್ಕಳದಲ್ಲಿ 92,226 ಪುರುಷರು, 99,905 ಮಹಿಳೆಯರು, ಶೃಂಗೇರಿಯಲ್ಲಿ 81,874 ಪುರುಷರು, 86,209 ಮಹಿಳೆಯರು, ಮೂಡಿಗೆರೆಯಲ್ಲಿ 82,835 ಪುರುಷರು, 87,784 ಮಹಿಳೆಯರು, ಚಿಕ್ಕಮಗಳೂರು ಕ್ಷೇತ್ರದಲ್ಲಿ 1,12,797 ಪುರುಷರು, 1,17,205 ಮಹಿಳೆಯರು, ತರೀಕೆರೆ ಕ್ಷೇತ್ರದಲ್ಲಿ 94,614 ಪುರುಷರು ಹಾಗೂ 97,454 ಮಹಿಳೆಯರು ಇದ್ದಾರೆ.

2019ರ ಲೋಕಸಭಾ ಚುನಾವಣೆಯ ಮತದಾರರ ಅಂಕಿ ಅಂಶಗಳನ್ನು ನೋಡುವುದಾರೆ ಕುಂದಾಪುರ 96,164 ಪುರುಷರು, 1,03,937 ಮಹಿಳೆಯರು, ಉಡುಪಿ 99,598 ಪುರುಷರು, 105,966 ಮಹಿಳೆಯರು, ಕಾಪು 86,308 ಪುರುಷರು, 94,858 ಮಹಿಳೆಯರು, ಕಾರ್ಕಳ 86,921 ಪುರುಷರು, 94,464 ಮಹಿಳೆಯರು, ಶೃಂಗೇರಿ 81,206 ಪುರುಷರು, 83,190 ಮಹಿಳೆಯರು, ಮೂಡಿಗೆರೆ 82,405 ಪುರುಷರು, 84,736 ಮಹಿಳೆಯರು, ಚಿಕ್ಕಮಗಳೂರು 1,06,238 ಪುರುಷರು 1,06,732 ಮಹಿಳೆಯರು, ತರಿಕೆರೆಯಲ್ಲಿ 91,449 ಪುರುಷರು 90,222 ಮಹಿಳಾ ಮತದಾರರು ಇದ್ದರು. 2019ರ ಚುನಾವಣೆಯಲ್ಲಿ ತರಿಕೆರೆಯಲ್ಲಿ ಮಾತ್ರ ಪುರುಷರು, ಉಳಿದ 7 ಕ್ಷೇತ್ರಗಳಲ್ಲಿ ಮಹಿಳಾ ಮತದಾರರು ಹೆಚ್ಚಾಗಿರುವುದನ್ನು ಕಾಣಬಹುದು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
‘ಮಾತೃಪ್ರಧಾನ ವ್ಯವಸ್ಥೆ’
ಕರಾವಳಿಯಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಇಂದಿಗೂ ಅಸ್ತಿತ್ವದಲ್ಲಿರುವುದು ಹೆಣ್ಣು ಭ್ರೂಣ ಹತ್ಯೆ ಪ್ರಮಾಣ ಇಲ್ಲದಿರುವುದು ಮಹಿಳಾ ಸಾಕ್ಷರತೆಯಂತಹ ಅಂಶಗಳು ಜಿಲ್ಲೆಯಲ್ಲಿ ಮಹಿಳಾ ಮತದಾರರ ಪಮಾಣ ಹೆಚ್ಚಾಗಲು ಕಾರಣ. ಪುರುಷರ ಸರಿಸಮನಾಗಿ ಮಹಿಳೆಯರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತಿ ತೋರುತ್ತಿದ್ದಾರೆ. ಕರಾವಳಿ ಜಿಲ್ಲೆಗಳಿಂದ ಸಾವಿರಾರು ಪುರುಷರು ಗಲ್ಫ್‌ ರಾಷ್ಟ್ರಗಳಲ್ಲಿ ದುಡಿಯುತ್ತಿರುವುದು ಪುರುಷ ಮತದಾರರ ಸಂಖ್ಯೆ ಕಡಿಮೆಯಾಗಲು ಕಾರಣ ಇರಬಹುದು ಎಂದು ರಾಜಕೀಯ ತಜ್ಞ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್‌ ಶೆಟ್ಟಿ ವಿವರಿಸಿದರು.
ಟಾಪ್ 5 ಮಹಿಳಾ ಮತದಾರರ ಇರುವ ಕ್ಷೇತ್ರಗಳು
ಕ್ಷೇತ್ರ–ಮಹಿಳೆಯರು–ಶೇಕಡವಾರು ಉಡುಪಿ–ಚಿಕ್ಕಮಗಳೂರು–810362; ಶೇ 51.51 ದಕ್ಷಿಣ ಕನ್ನಡ; 919279; ಶೇ 51.17 ಮೈಸೂರು; 1055035; ಶೇ 50.91 ಮಂಡ್ಯ; 897031; ಶೇ 50.71 ಕೊಪ್ಪಳ; 938750; ಶೇ 50.69

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT