ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್ ಫ್ರೂಟ್ ಕೇಕ್ ಮಿಕ್ಸಿಂಗ್

ಡಬ್ಲ್ಯುಜಿಎಸ್‌ಎಚ್‌ಎ ಕಾಲೇಜಿನಲ್ಲಿ ವಿಭಿನ್ನ ಕಾರ್ಯಕ್ರಮ
Last Updated 14 ನವೆಂಬರ್ 2022, 16:25 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲದ ವೆಲ್‌ಕಮ್‌ ಗ್ರೂಪ್‌ ಗ್ರಾಜುಯೇಟ್ ಸ್ಕೂಲ್ ಆಫ್‌ ಹೋಟೆಲ್‌ ಅಡ್ಮಿನಿಸ್ಟ್ರೇಷನ್‌ನಿಂದ ಸೋಮವಾರ ವಾರ್ಷಿಕ ಕ್ರಿಸ್‌ಮಸ್‌ ಕೇಕ್‌ ಫ್ರೂಟ್‌ ಮಿಕ್ಸಿಂಗ್‌ ಕಾರ್ಯಕ್ರಮ ನಡೆಯಿತು.

ಪ್ರತಿವರ್ಷದ ಸಂಪ್ರದಾಯದಂತೆ ಒಣ ಹಣ್ಣುಗಳು ಹಾಗೂ ಆಲ್ಕೊಹಾಲ್ ಬಳಸಿ ಕ್ರಿಸ್‌ಮಸ್‌ ಕೇಕ್‌ ಫ್ರೂಟ್‌ ತಯಾರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಮಾಹೆ ಟ್ರಸ್ಟಿ ವಸಂತಿ ಆರ್‌.ಪೈ, ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್, ಇಂದಿರಾ ಬಲ್ಲಾಳ್, ಮಾಹೆ ಕುಲಪತಿ ಡಾ.ಎಂ.ಡಿ.ವೆಂಕಟೇಶ್‌, ಕುಸುಮಾ ವೆಂಕಟೇಶ್‌, ಮಾಹೆ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಯಿತ್‌ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿದೇಗಳಲ್ಲಿ 17 ಶತಮಾತದಿಂದಲೂ ಕ್ರಿಸ್‌ಮಸ್‌ ಕೇಕ್ ತಯಾರಿಸುವ ಸಂಪ್ರದಾಯ ಇದೆ. ಹಲವು ಬಗೆಯ ಹಣ ಹಣ್ಣು, ಒಣ ಬೀಜಗಳು ಹಾಗೂ ಮದ್ಯವನ್ನು ಬೆರೆಸಿ ಹಲವು ದಿನಗಳವರೆಗೆ ಇಟ್ಟು ಅತ್ಯಂತ ರುಚಿಕರ ಹಾಗೂ ಸುವಾಸಿತ ಕ್ರಿಸ್‌ಮಸ್‌ ಕೇಕ್‌ ಫ್ರೂಟ್‌ ತಯಾರಿಸಲಾಗುತ್ತದೆ.

ಸಾಮಾನ್ಯವಾಗಿ ಕ್ರಿಸ್‌ಮಸ್ ಹಬ್ಬಕ್ಕೆ ಒಂದು ಅಥವಾ ಎರಡು ತಿಂಗಳು ಮೊದಲು ಫ್ರೂಟ್‌ ಕೇಕ್‌ ಮಿಕ್ಸಿಂಗ್ ನಡೆಯುತ್ತದೆ. ಹಬ್ಬದ ಸಂದರ್ಭ ಸವಿಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT