ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಜಗತ್ತು ಬೆಳಗುವ ದೀಪವಾಗಲಿ: ಕೆ.ಜೆ.ಗಣೇಶ್ ಆಚಾರ್ಯ

ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್‌ನ ಉದ್ಘಾಟನಾ ಸಮಾರಂಭ
Last Updated 30 ಅಕ್ಟೋಬರ್ 2020, 16:41 IST
ಅಕ್ಷರ ಗಾತ್ರ

ಉಡುಪಿ: ಯಕ್ಷ ಆರಾಧನಾ ಕಿದಿಯೂರು ಟ್ರಸ್ಟ್‌ನ ಉದ್ಘಾಟನಾ ಸಮಾರಂಭ ಈಚೆಗೆ ಕಿದಿಯೂರಿನ ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆಯ ಸಭಾಂಗಣದಲ್ಲಿ ಜರುಗಿತು.

ಮ್ಯಾನೇಜಿಂಗ್ ಟ್ರಸ್ಟಿ ಕೆ.ಜೆ.ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮದಲ್ಲಿಆಶೀರ್ವಚನ ನೀಡಿ ಮಾತನಾಡಿ, ಕೆ.ಜೆ. ಗಣೇಶ್ ಆಚಾರ್ಯ ಹಾಗೂ ಸಹೋದರರ ಸಾಧನೆ ಸಫಲವಾಗಲಿ. ಈ ಮೂಲಕ ಯಕ್ಷಗಾನ ಜಗತ್ತನ್ನು ಬೆಳಗುವ ದೀಪವಾಗಲಿ ಎಂದು ಹರಸಿದರು.

ಪ್ರೊ.ಉದ್ಯಾವರ ಮಾಧವ ಆಚಾರ್ಯರು ಮಾತನಾಡಿ, ಒಳ್ಳೆಯ ಉದ್ದೇಶದಿಂದ ಮುಂದಡಿ ಇಡುವಾಗ ಶುಭ ಹಾರೈಸುವುದು ಎಲ್ಲರ ಕರ್ತವ್ಯ. ಕಲೆಯ ಬಗ್ಗೆ, ಸಮಾಜದ ಬಗ್ಗೆ ನಿಷ್ಠೆಯನ್ನು ತೋರಿ, ಹಿರಿಯರು ಬೆಳೆಸಿದ ಪರಂಪರೆ ಉಳಿಸಿ ಮುನ್ನಡೆಯಿರಿ ಎಂದು ಶುಭ ಹಾರೈಸಿದರು.

ಪ್ರೊ.ಎಂ.ಎಲ್. ಸಾಮಗ ಮಾತನಾಡಿ, ತಂದೆಯಂತೆ ಮಕ್ಕಳು ಸೌಜನ್ಯವಂತರಾಗಿದ್ದು, ಯಕ್ಷಗಾನ ಹಿಮ್ಮೇಳದಲ್ಲಿ ಕೆ.ಜೆ ಸಹೋದರರು ಎಂದೇ ಪ್ರಸಿದ್ಧರಾಗಿದ್ದಾರೆ ಎಂದು ಹಾರೈಸಿದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಅಂಬಲಪಾಡಿ ಯಕ್ಷಗಾನ ಸಂಘಕ್ಕೆ ಕೆ.ಜೆ ಅವರ ಕುಟುಂಬ ಸಮರ್ಪಿಸಿಕೊಂಡಿದೆ ಎಂದರು.

ಎಂ.ಕೆ.ರಮೇಶ್ ಆಚಾರ್ಯ, ಉದಯ ಕುಮಾರ್ ಶೆಟ್ಟಿ, ಗುಂಡು ಬಿ.ಅಮೀನ್, ಪ್ರೊ.ರಾಧಾಕೃಷ್ಣ ಆಚಾರ್ಯ, ನಂದಕುಮಾರ್ ಶುಭ ಹಾರೈಸಿದರು. ದಾಮೋದರ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಕೆ.ಜೆ. ಕೃಷ್ಣ, ಕೆ.ಜೆ.ಸುಧೀಂದ್ರ, ಕೆ.ಜಗದೀಶ್ ಆಚಾರ್ಯ, ಡಾ.ನಿ.ಬಿ.ವಿಜಯ ಬಲ್ಲಾಳರು ಉಪಸ್ಥಿತರಿದ್ದರು.

ಕೆ.ಜೆ ಸಹೋದರರಿಂದ ಯಕ್ಷಗಾಯನ ನಡೆಯಿತು. ಪ್ರತಿಮಾ, ಮಾನ್ಯ ಪೀಠಿಕಾ ಸ್ತ್ರೀವೇಷ ನೃತ್ಯ ಅಭಿನಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT