ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋನ್‌ ನಿಂದ ಮೋಡ ಬಿತ್ತನೆ ಪ್ರಾತ್ಯಕ್ಷಿಕೆ

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ವೀಕ್ಷಣೆ
Last Updated 20 ಮಾರ್ಚ್ 2017, 5:37 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಸ್ಕೈ ವೀವ್‌ ತಂಡದ ಸದಸ್ಯರು ಅಭಿವೃದ್ಧಿ ಪಡಿಸಿರುವ ಪೈಲೆಟ್‌ ಮ್ಯಾನುವೆಲ್‌ ಅಟೋನೊಮಸ್‌ ವೇ ಪಾಯಿಂಟಿಂಗ್‌ ಡ್ರೋನ್‌ನ ಮೂಲಕ 200 ಮೀಟರ್‌ ಎತ್ತರದಲ್ಲಿ ಮೋಡ ಬಿತ್ತನೆ ನಡೆಸುವ ಪ್ರಾಯೋಗಿಕ ಪ್ರಾತ್ಯಕ್ಷಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಭಾನುವಾರ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು.

ಆ ನಂತರ ಮಾತನಾಡಿದ ಸಚಿವರು, ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯದಾ ದ್ಯಂತ ಈ ವರ್ಷ ತೀವ್ರ ಬರಗಾಲವಿದೆ. ಹಾಗಾಗಿ ಮೋಡ ಬಿತ್ತನೆ ಮಾಡುವುದು ಅನಿವಾರ್ಯವಾಗಿದೆ. ಈವರೆಗೆ ಮೋಡ ಬಿತ್ತನೆ ಪ್ರಕ್ರಿಯೆಗೆ ಸಾಕಷ್ಟು ಖರ್ಚು ತಗಲುತ್ತಿತ್ತು. ಪ್ರಸ್ತುತ ಕಡಿಮೆ ಖರ್ಚಿನಲ್ಲಿ ಡ್ರೋನ್‌ ಮೂಲಕ ಮೋಡ ಬಿತ್ತನೆ ಮಾಡುವ ತಂತ್ರಜ್ಞಾನವನ್ನು ಸಂಶೋಧಿ ಸಿರುವುದು ತುಂಬಾ ಅನುಕೂಲವಾಗಿದೆ.

ಈ ವಿಷಯವನ್ನು ಮುಖ್ಯಮಂತ್ರಿ ಮತ್ತು ಕೃಷಿ ಸಚಿವರ ಜೊತೆ ಚರ್ಚಿಸಿ, ಸರ್ಕಾರದಿಂದ ನೀಡಬಹುದಾದ ಎಲ್ಲ ಸಹಕಾರವನ್ನು ಒದಗಿಸಲು ಪ್ರಯತ್ನಿಸಲಾ ಗುವುದು ಎಂದರು. 

ಡ್ರೋನ್‌ನ ಕಾರ್ಯನಿರ್ವಹಣೆ: ಪ್ರಸ್ತುತ ಅಭಿವೃದ್ಧಿ ಪಡಿಸಲಾಗಿರುವ ಡ್ರೋನ್‌ಗೆ ಲ್ಯಾಂಡ್‌ ಲ್ಯಾಡರ್‌ಗೆ ಮೋಡ ವನ್ನು ಮಳೆಯಾಗಿಸುವ ಸಿಲ್ವರ್‌ ಅಯೋ ಡೈಡ್‌ ರಾಸಾಯನಿಕ ವನ್ನೊಳಗೊಂಡ ಸಣ್ಣಸಣ್ಣ ಕ್ಷಿಪಣಿಗಳನ್ನು ಅಳವಡಿಸಲಾಗಿದೆ. ಡ್ರೋನ್‌ ತನ್ನ ಗುರಿಯನ್ನು ಮುಟ್ಟಿ ದಾಕ್ಷಣ ಈ ಕ್ಷಿಪಣಿಗಳು ಉರಿದು ಕೊಂಡು ಮೋಡಗಳಿಗೆ ಪರಿಣಾಮಕಾರಿ ಯಾಗಿ ಸ್ಪರ್ಶಿಸಿ ಮಳೆ ಬರಿಸುತ್ತದೆ.

ಒಂದು ಕ್ಷಿಪಣಿ ಕಾರ್ಯಾಚರಣೆ ಮುಗಿಸಿ ವಾಪಾಸ್‌ ಬರುತ್ತಿದ್ದಂತೆ ಸಿದ್ಧವಾಗಿರುವ ಇನ್ನೊಂದು ಕ್ಷಿಪಣಿಯನ್ನು ಹಾರಿಸಲಾ ಗುತ್ತದೆ. ಹೀಗೆ 500ಮೀ. ಎತ್ತರದಿಂದ 2,500 ಮೀ.ವರೆಗೂ ಮೋಡಗಳನ್ನು ಗುರಿಯಾಗಿಸಿ ಹಾರಿಸಬಹುದಾಗಿದೆ ಎಂದು ಅವರು ಹೇಳಿದರು.

ಎಲ್ಲಾ ಮೋಡಗಳಿಂದ ಮಳೆ ಭರಿ ಸಲು ಸಾಧ್ಯವಿಲ್ಲ. ಹೀಗಾಗಿ ಹವಮಾನ ಇಲಾಖೆಯ ಸೂಕ್ತ ಮಾಹಿತಿ ಪಡೆದು, ಅವರ ಮಾಹಿತಿಯ ಆಧಾರದ ಮೇಲೆ ಮೋಡಗಳನ್ನು ಗುರಿಯನ್ನಾಗಿಸಿಕೊಂಡು ಈ ಡ್ರೋನ್‌ ಹಾರಿಸಿದಲ್ಲಿ ಸುಮಾರು 10 ಕಿ.ಮೀ ವ್ಯಾಪ್ತಿಯವರೆಗೆ ಮಳೆ ಆಗುವ ಸಾಧ್ಯತೆಗಳಿವೆ ಎಂದು ಸಂಶೋಧನ ತಂಡ ದ ರತ್ನಾಕರ ನಾಯ್ಕ್‌ ಮಾಹಿತಿ ನೀಡಿದರು. 

ಈ ತಂತ್ರಜ್ಞಾನವು ಪರಿಸರ ಸ್ನೇಹಿ ಯಾಗಿದ್ದು, ಸ್ವಯಂ ನಿರ್ವಹಣೆಯನ್ನು ಹೊಂದಿದೆ. ಯಾವುದೇ ಚಾಲಕರ, ವಿಮಾನಗಳ ಅವಶ್ಯಕತೆ ಇರುವುದಿಲ್ಲ. ಇದರ ನಿರ್ವಹಣಾ ವೆಚ್ಚವು ಕಡಿಮೆ ಯಾಗಿದ್ದು, ಹೆಚ್ಚು ಪ್ರಯೋಜನಕಾರಿ ಯಾಗಿದೆ ಎಂದರು. 

ಪ್ರಜ್ವಲ್‌ ಹೆಗ್ಡೆ ಬೈಲೂರು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಸದಸ್ಯ ಜನಾರ್ದನ್‌ ಭಂಡಾರ್ಕರ್‌, ಕ್ರೀಡಾ ಇಲಾಖೆಯ ಸಹಾಯಕ ಉಪನಿರ್ದೇಶಕ ರೋಶನ್‌ ಕುಮಾರ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ದಿವಾಕರ ಭಟ್‌ ಸ್ವಾಗತಿಸಿದರು.

*
ಮೋಡ ಬಿತ್ತನೆ ಕಾರ್ಯವನ್ನು ಕಡಿಮೆ ಖರ್ಚಿನಲ್ಲಿ ಮಾಡುವುದಕ್ಕೆ ಡ್ರೋನ್‌ ಸಹಕಾರಿಯಾಗಿದೆ. ಅಟೋನೊಮಸ್‌ ವೇ ಪಾಯಿಂಟಿಂಗ್‌ ಯಂತ್ರ.
-ಪ್ರಮೋದ್‌ ಮಧ್ವರಾಜ್‌,
ಸಚಿವ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT