ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುಭಾಗ್ಯ ಯೋಜನೆ ಬಳಸಿಕೊಳ್ಳಿ: ಪೂಜಾರಿ

Last Updated 20 ಮಾರ್ಚ್ 2017, 5:35 IST
ಅಕ್ಷರ ಗಾತ್ರ

ಬೈಂದೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಹಲವು ‘ಭಾಗ್ಯ ಯೋಜನೆ’ ನೀಡಿದೆ. ಅವುಗಳಲ್ಲಿ ಪಶುಭಾಗ್ಯ ಯೋಜನೆಯೂ ಒಂದು. ಗರಿಷ್ಠ ಸಹಾಯಧನ ಲಭ್ಯವಿ ರುವ ಈ ಯೋಜನೆಯನ್ನು ಸಮಾಜದ ದುರ್ಬಲ ವರ್ಗಗಳು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಶಾಸಕ ಕೆ. ಗೋಪಾಲ ಪೂಜಾರಿ ಸಲಹೆ ನೀಡಿದರು.

ಬೈಂದೂರಿನ ಪಶು ಆಸ್ಪತ್ರೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಯೋಜನೆ 21ಫಲಾನುಭವಿಗಳಿಗೆ ಸಹಾ ಯಧನದ ಚೆಕ್ ವಿತರಿಸಿ ಮಾತನಾಡಿ ದರು. ಸ್ವಾಗತಿಸಿದ ಇಲಾಖೆ ಸಹಾಯಕ ನಿರ್ದೇಶಕ ಡಾ. ಸೂರ್ಯ ನಾರಾಯಣ ಉಪಾಧ್ಯಾಯ ಪಶುಭಾಗ್ಯ ಯೋಜನೆ ಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ವ್ಯಕ್ತಿಗಳಿಗೆ 2 ಹಸುಗಳ ಘಟಕ ವೆಚ್ಚವಾದ ₹ 1,20, ಲಕ್ಷದಲ್ಲಿ ಶೇ 50 ಮತ್ತು ಇತರರಿಗೆ ಶೇ 25ರಷ್ಟು ಸಹಾಯಧನ ದೊರೆಯುತ್ತದೆ. ಅಗತ್ಯವಿದ್ದರೆ ಬ್ಯಾಂಕ್‌ ನಿಂದ ಸಾಲ ದೊರೆಯುತ್ತದೆ ಎಂದರು.

4 ಕೋಳಿ ಮತ್ತು 2 ಆಡಿನ ಘಟಕಗ ಳಿಗೂ ಸಹಾಯಧನ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮದನ್‌ಕುಮಾರ್, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಪಶು ವೈದ್ಯಾ ಧಿಕಾರಿ ಶಂಕರ ಶೆಟ್ಟಿ, ಆಯ್ಕೆ ಸಮಿತಿ ಸದಸ್ಯೆ ವನಜಾ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT