ಉಡುಪಿ: ‘ವೈಚಾರಿಕತೆಯ ಪ್ರಖರ ತೆಯಿಂದ ನಾವು ಜಾಗೃತಗೊಳ್ಳಬೇಕು. ಇಲ್ಲವಾದರೆ ಭಾರತ ಭಾರತವಾಗಿ ಉಳಿಯುವುದಿಲ್ಲ, ಅದು ಅಧೋಗತಿ ಯತ್ತಾ ಸಾಗುತ್ತದೆ’ ಎಂದು ವಿಚಾರವಾದಿ ಜ.ಹೊ. ನಾರಾಯಣಸ್ವಾಮಿ ಹಾಸನ ಹೇಳಿದರು.

ಇಂದ್ರಾಳಿ ನೂತನ ಪಬ್ಲಿಕೇಶನ್ಸ್ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೋಪಾಲ ಬಿ. ಶೆಟ್ಟಿ ಅವರ ‘ಮಿಥ್ಯೆಯೊಳಗಿನ ಸತ್ಯ’ ಪುಸ್ತಕ ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯುವಜನತೆ ಕೆಲಸವಿಲ್ಲದೇ ನಿರುದ್ಯೋಗಿಗಳಾಗುತ್ತಿದ್ದರೂ, ಇಡೀ ದೇಶವನ್ನು ಮೇಕ್‌ಇನ್ ಇಂಡಿಯಾ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಜಾತಿ ಮತ್ತು ಧರ್ಮಗಳು ಮನುಷ್ಯನನ್ನು ಸರ್ವನಾಶದತ್ತ ಕೊಂಡೊಯ್ಯುತ್ತಿದೆ ಎಂದರು.

ದೇಶವನ್ನು ತೀವ್ರವಾಗಿ ಕಾಡುತ್ತಿ ರುವುದು ಆಹಾರ ಪದ್ಧತಿ. ಆಹಾರ ವಿಷಯದಲ್ಲಿ ತಲೆ ಕೆಡಿಸಿಕೊಂಡು ದೇಶ ಅವನತಿಯ ಅಂಚಿಗೆ ಸಾಗುತ್ತಿದೆ. ಧರ್ಮ ಎಂದರೆ ಕೊಲ್ಲುವುದಲ್ಲ, ಕೊಲ್ಲುವ ಮನಸ್ಸನ್ನು ತಿದ್ದುವುದು. ಆದರೆ ಇವತ್ತು ಧರ್ಮ ಹಾಗೂ ಅಧರ್ಮಗಳ ನಡುವೆ ದೊಡ್ಡ ಸಂಘರ್ಷವೇ ನಡೆಯುತ್ತಿದೆ. ಇದನ್ನು ಸರಿದೂಗಿಸಬೇಕಾದರೆ ಮೊ ದಲು ಮೌಢ್ಯತೆಯಿಂದ ಹೊರಬರಬೇಕು ಎಂದು ಅಭಿಪ್ರಾಯಪಟ್ಟರು.

ಅಂದು ರಾಜರಾಗಿದ್ದವರೂ ಇಂದು ರಾಜಕಾರಣಿಗಳಾಗಿದ್ದರೆ, ಅಂದಿನ ಋಷಿ ಮುನಿಗಳು ಇವತ್ತು ಪುರೋಹಿತರಾಗಿ ದ್ದರೆ. ಅವರು ಕಾಲ ಕಾಲಕ್ಕೆ ಸರಿಯಾಗಿ ನಮ್ಮನ್ನು ದಿಕ್ಕು ತಪ್ಪಿಸಿ ನಗುತ್ತಿದ್ದಾರೆ ಅಷ್ಟೇ. ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ ಒಮ್ಮೆ ಹೊಟ್ಟೆ ತುಂಬಿದರೆ ಮತ್ತೆ ಆಹಾರಕ್ಕಾಗಿ ಹಪಿಸುವುದಿಲ್ಲ. ಆತ್ಮವಂಚಕನಾದ ಮಾನವನಿಗೆ ಕ್ರೂರ ಪ್ರಾಣಿಗಳಿಗಿರುವ ಕನಿಷ್ಠ ಜ್ಞಾನವೂ ಇಲ್ಲ. ಎಷ್ಟು ಮಠ, ದೇವಸ್ಥಾಗಳನ್ನು ಕಟ್ಟಿದರೂ ಮತ್ತೆ ಮತ್ತೆ ಹೊಟ್ಟೆ ತುಂಬಿಸಿಕೊಳ್ಳಲು ಹಪಿಸು ತ್ತಿರುತ್ತಾನೆ ಎಂದು ಟೀಕಿಸಿದರು.

ಕ್ಷತ್ರಿಯರಾಗಿದ್ದ ವಿವೇಕಾನಂದರು ಹಿಂದೂ ಸನ್ಯಾಸಿ ಅಲ್ಲ, ವಿಶ್ವ ಸನ್ಯಾಸಿ. ಅವರು ಮಾಂಸವನ್ನು ಸೇವಿಸುತ್ತಿದ್ದರು ಎಂದು ಹೇಳಿದರು.

ಬಡಗಬೆಟ್ಟು ಕ್ರೆಡಿಟ್ ಕೋ–ಆಪರೇ ಟಿವ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ವಕೀಲ ಎಂ. ಶಾಂತರಾಮ ಶೆಟ್ಟಿ, ಗುತ್ತಿಗೆದಾರ ಶೇಖರ ಪೂಜಾರಿ ಉಪಸ್ಥಿತರಿದ್ದರು. ಲೇಖಕ ಗೋಪಾಲ ಬಿ. ಶೆಟ್ಟಿ ಸ್ವಾಗತಿಸಿದರು. ವಿಚಾರವಾದಿ ಡಾ.ಭಾಸ್ಕರ ಮಯ್ಯ ಪುಸ್ತಕ ಪರಿಚಯಿಸಿದರು. ಸಂತೋಷ್ ಶೆಟ್ಟಿ ಹಿರಿಯಡಕ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.