ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ

Last Updated 12 ಮೇ 2012, 9:00 IST
ಅಕ್ಷರ ಗಾತ್ರ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಫಥ ಯೋಜನೆಯ ಸಂತ್ರಸ್ಥರು ಶುಕ್ರವಾರ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದ ದೆಹಲಿಯ ಹೆದ್ದಾರಿ ಪ್ರಾಧಿಕಾರ ಸದಸ್ಯರಿಗೆ ಅಹವಾಲುಗಳನ್ನು ಸಲ್ಲಿಸಿದರು. ಅಲ್ಲದೇ ಯೋಜನೆಯಿಂದ

  ಪಡುಬಿದ್ರಿ: ಮತ್ತೊಂದು ಸುತ್ತಿನ ಮಾತುಕತೆ
ಪಡುಬಿದ್ರಿ: ಸುರತ್ಕಲ್-ಕುಂದಾಪುರ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಪಡುಬಿದ್ರಿಯ ಸಮಸ್ಯೆ ಬಗ್ಗೆ ದೆಹಲಿಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ಪ್ರಾಧಿಕಾರದ ತಾಂತ್ರಿಕ ವಿಭಾಗದ ಚೀಫ್ ಜನರಲ್ ಮೇನೇಜರ್ ಎ.ಕೆ.ಮಾಥುರ್ ಹೇಳಿದ್ದಾರೆ.

ಪಡುಬಿದ್ರಿಯಲ್ಲಿ ಬೈಪಾಸ್ ನಿರ್ಮಾಣದ ಬಗ್ಗೆ ಪರ ಹಾಗೂ ವಿರೋಧ ವ್ಯಕ್ತವಾಗಿದ್ದವು. ಇದರಿಂದ ಕಾಮಗಾರಿ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಪಡುಬಿದ್ರಿಯ ಕಲ್ಸಂಕ ಬಳಿ ಸ್ಥಳೀಯರ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ರಾಜ್ಯ ಸಭಾಸದಸ್ಯ ಆಸ್ಕರ್ ಫರ್ನಾಂಡಿಸ್ ಮತ್ತು ಸಂಸದ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಆಗಮಿಸಿದ ತಜ್ಞರ ಸಮಿತಿಯ ರಾಜ್ಯ ಸರ್ಕಾರ ಪಡುಬಿದ್ರಿಯಲ್ಲಿ ಬೈಪಾಸ್ ಯೋಜನೆ ಜಾರಿಗೊಳಿಸಲು ಅನುಮತಿಸಿದ್ದು, ಹೆದ್ದಾರಿ ಪ್ರಾಧಿಕಾರವು ಆಸ್ಕರ್ ಹಾಗೂ ಹೆಗ್ಡೆ ಮನವಿ ಮೇರೆಗೆ ಸ್ಥಳ ಪರಿಶೀಲನೆಗಾಗಿ ಆಗಮಿಸಿತ್ತು.

ಆಸ್ಕರ್‌ಫರ್ನಾಂಡಿಸ್ ಬೈಪಾಸ್ ಯೋಜನೆ ಪರ ಹಾಗೂ ವಿರೋಧಿ ಗುಂಪುಗಳ ಮಾತುಕತೆ ನಡೆಸಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಯಾವುದೇ ಕಾರಣಕ್ಕೂ ಬೈಪಾಸ್ ಯೋಜನೆ ಮಾಡಬಾರದು ಇದರಿಂದ ದಲಿತ ಕುಟುಂಬಗಳಿಗೆ ಅನ್ಯಾಯವಾಗಲಿದ್ದು, ನ್ಯಾಯ ದೊರಕಿಸಿಕೊಡಿ ಎಂದು ದಲಿತ ಮುಖಂಡ ಶೇಖರ್ ಹೆಜ್ಮಾಡಿ ಮನವಿ ಮಾಡಿದರು.

ಇಲಾಖಾಧಿಕಾರಿಗಳೊಂದಿಗೆ ಕಡಿಮೆ ವೆಚ್ಚ ಹಾಗೂ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಯೋಜನೆ ಜಾರಿಗೊಳಿಸುವ ಬಗ್ಗೆ ಆಸ್ಕರ್ ಸ್ಥಳೀಯರಿಗೆ ಭರವಸೆ ನೀಡಿದರು.
ಹೆದ್ದಾರಿ ಪ್ರಾದಿಕಾರದ ಮೇನೇಜರ್ ಗವಾಸಾನಿ, ಕೆ.ಎಂ.ಹೆಗಡೆ, ಮಾಜಿ ಸಚಿವ ವಸಂತ ಸಾಲ್ಯಾನ್, ಎಂ.ಎ.ಗಪೂರ್, ಕಾಂಗ್ರೆಸ್ ಮುಖಂಡ ಗಂಗಾಧರ ಸಾಲ್ಯಾನ್, ಮಿಥುನ್ ಹೆಗ್ಡೆ, ದಿವಾಕರ ರಾವ್, ಮ್ಯೋಕ್ಸಿಮ್ ಡಿಸೋಜ, ನವೀನ್ ಎನ್.ಶೆಟ್ಟಿ, ವೈಸುಕುಮಾರ್, ರಫೀಕ್ ದೀನ್‌ಷ್ಟ್ರೀಟ್, ಜಯಶೆಟ್ಟಿ, ಮೋಹನ್ ಪಡುಬಿದ್ರಿ, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

ಇದೇ ವೇಳೆ ಕಾಪು ಮಾರಿಗುಡಿ ಬಳಿ ನಿರ್ಮಾಣ ಹಂತದಲ್ಲಿರುವ ಅಂಡರ್‌ಪಾಸ್ ಕಾಮಗಾರಿಯ ಬಗ್ಗೆ ವೀಕ್ಷಿಸಿ ದರು. ಈ ವೇಳೆ ಮಾಜಿ ಸಚಿವ ವಸಂತ ಸಾಲ್ಯಾನ್ ಈ ಕಾಮಗಾರಿ ಯಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಕಟಪಾಡಿ, ಎರ್ಮಾಳಿನಲ್ಲೂ ಸ್ಥಳೀಯರು ಇದೇ ವೇಳೆ ಸಮಾನವಾಗಿ ಭೂಸ್ವಾಧೀನ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದರು.

ಹೆದ್ದಾರಿ ಕಾಮಗಾರಿಯ ವೇಳೆ ಹೆಜಮಾಡಿಯ ಗರೊಡಿಯನ್ನು ಉಳಿಸಿಕೊಡಬೇಕು ಎಂದು ಅಧಿಕಾರಿಗಳಿಗೆ  ಮನವಿ ಮಾಡಿದರು. ಈ ಬಗ್ಗೆ ಮಾತ ನಾಡಿದ ಗವಾಸಾನಿ, ಈಗಿನ ಸರ್ವೇಯಲ್ಲಿ ಗರೊಡಿ ಉಳಿಯುತ್ತದೆ ಎಂದರು,
ಹೆಜಮಾಡಿಯ ಬೈಪಾಸ್ ಬಳಿಯ ಮಸೀದಿಗೆ ಸಂಪೂರ್ಣ ಹಾನಿ ಯಾಗಲಿದ್ದು, ಮಸೀದಿಯನ್ನು ಉಳಿಸಿಕೊಡಬೇಕು ಮನವಿ ಮಾಡಲಾಯಿತು.

ಆಗುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತಂದ ಸಂತ್ರಸ್ತರು ಪರ್ಯಾಯೋ ಪಾಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ಸಂಸದ ಕೆ.ಜಯಪ್ರಕಾಶ ಹೆಗ್ಡೆ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಅಹವಾಲುಗಳನ್ನು ಆಲಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಕಾಮಗಾರಿ ನಡೆಸಲು ಉದ್ದೇಶಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸುವ ಭರವಸೆ ನೀಡಿದರು.

ಕುಂದಾಪುರದ ಶಾಸ್ತ್ರಿ ಸರ್ಕಲ್‌ಗೆ ಆಗಮಿಸಿದ ಅಧಿಕಾರಿಗಳ ತಂಡ ಸ್ಥಳೀಯರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಿತು. ಹೆದ್ದಾರಿ ಹೋರಾಟ ಸಮಿತಿಯ ಪದಾಧಿ ಕಾರಿಗಳು, ಬಂಟ ಯಾನೆ ನಾಡವರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜ ನಿಕರು, ಕುಂದಾಪುರ ನಗರವನ್ನು ಇಬ್ಬಾಗಗೊಳಿಸುವ ಎಂಬ್ಯಾಕ್‌ಮೆಂಟ್ ಯೋಜನೆಯನ್ನು ಕೈಬಿಟ್ಟು ಫ್ಲೈ  ಓವರ್‌ನ್ನು ನಿರ್ಮಿಸುವಂತೆ ಆಗ್ರಹಿಸಿದರು.

ಜನರ ಭಾವನೆಗಳಿಗೆ ಸ್ಪಂದಿಸಿದ ಸಂಸದರು ಇಲಾಖೆಯ ಇತಿ ಮಿತಿಯೊಳಗೆ ಸಮಸ್ಯೆಯನ್ನು ಪರಿಹರಿಸು ವುದಾಗಿ ಭರವಸೆ ನೀಡಿದರು.

ಕುಂದಾಪುರದಿಂದ ಹೊರಟ ತಂಡ ಕುಂಭಾಸಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿದರು. ಪ್ರಾಸ್ತಾಪಿತ ಕಾಮಗಾರಿಯನ್ನೆ ಮುಂದುವರೆಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿತ್ತು.

ಕೋಟ ಅಮತೇಶ್ವರಿ ರಸ್ತೆ, ಜುಮ್ಮೋ ಮಸೀದಿ ಹಾಗೂ ಹೀರೆ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಚೇಂಪಿ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಸಾಸ್ತಾನದಲ್ಲಿ ನಿರ್ಮಾಣಗೊಳ್ಳ ಲಿರುವ ಟೋಲ್‌ಗೇಟ್ ಹಾಗೂ ಅಡಳಿತ ಕಚೇರಿಗಾಗಿ ತಮ್ಮ ಬಹುತೇಕ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ಹೆದ್ದಾರಿ ಇಲಾಖೆ ಮುಂದಾಗಿದೆ ಇದರಿಂದಾಗಿ ತಾವು ಅತಂತ್ರರಾಗುತ್ತೇವೆ ಎಂದು ನೋವನ್ನು ತೋಡಿಕೊಂಡ ಕೊಳ್ಕೇಬೈಲು ಗೋಪಾಲ ಶೆಟ್ಟಿ ಕುಟುಂಬಿಕರಿಗೆ ಸಾಂತ್ವನ ಹೇಳಿದ ತಂಡದ ಸದಸ್ಯರು ಸಮಸ್ಯೆಯ ಗಂಭೀರತೆಯ ಕುರಿತು ಗಮನ ಹರಿಸುವುದಾಗಿ ತಿಳಿಸಿದರು.
 
ಉಡುಪಿಯಲ್ಲಿ ಪರಿಶೀಲನೆ

ಉಡುಪಿಯ ಪುತ್ತೂರಿನಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಕರಾವಳಿ ಹೋಟೇಲ್ ಜಂಕ್ಷನ್ ಬಳಿ  ತಮ್ಮ ಅಹವಾಲು ತೋಡಿಕೊಂಡ ಚೇಂಬರ್ ಆಫ್ ಕಾಮರ್ಸ್‌ನ ಪ್ರಸಾದ ಕಾಂಚನ್, ಉದ್ಯಮಿ ದಿನೇಶ್ ಪುತ್ರನ್ ಮುಂತಾದವರು ವಾಹನ ಸುಗಮ ಸಂಚಾರಕ್ಕೆ ಸುರಂಗ ಮಾರ್ಗ ನಿರ್ಮಿಸುವ ಹಾಗೂ ಆಂಬಲಪಾಡಿಯಿಂದ ಕರಾವಳಿ ಜಂಕ್ಷನ್‌ವರೆಗೆ ಹೆದ್ದಾರಿ ಮಿತಿಯನ್ನು 45 ಮೀಟರ್‌ಗೆ ನಿಗದಿಗೊಳಿಸುವಂತೆ ಆಗ್ರಹಿಸಿದರು.

ಉಡುಪಿ ಹೈಟೆಕ್ ಆಸ್ಪತ್ರೆಯ ಬಳಿಯಲ್ಲಿ ಸೇರಿದ್ದ ನೂರಾರು ಜನರೊಂದಿಗೆ ಮಾತುಕತೆ ನಡೆಸಿದ ಸಂಸದರು  ಅಲ್ಲಿನ ಸಮಸ್ಯೆಗಳ ಕುರಿತು ವಿಸ್ತ್ರತ ಚರ್ಚೆ ನಡೆಸಿದರು.

ಚತುಷ್ಫಥ ಹೆದ್ದಾರಿ ರಚನೆಯಿಂದ ನಗರಕ್ಕೆ ರಸ್ತೆಯ ಬಲಭಾಗದ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ಪಾದಾಚಾರಿ ಸುರಂಗ ಮಾರ್ಗವನ್ನು ನಿರ್ಮಿಸುವಂತೆ ಒತ್ತಾಯಿಸಲಾಯಿತು.
 
ಹೆದ್ದಾರಿ ಪ್ರಾಧಿಕಾರದ ಆಧಿಕಾರಿಗ ಳೊಂದಿಗೆ ಚರ್ಚೆ ನಡೆಸಿದ ವಕೀಲರಾದ ಬಿ.ಶ್ರೀಧರ ರಾವ್,ರಾಮದಾಸನಾಯ್ಕ, ಅಶೋಕ ಶೆಟ್ಟಿ ಮುಂತಾ ದವರು ಹೆದ್ದಾರಿ ಇಲಾಖೆಯ ಕಾನೂನಿನಲ್ಲಿಯೆ ಅಗತ್ಯ ಬದಲಾವ ಣೆಗಳಿಗೆ ಅವಕಾಶಗಳಿ ರುವುದರಿಂದ ಸ್ಥಳೀಯರ ಬೇಡಿಕೆ ಪರಿಶೀಲಿಸುವಂತೆ ಆಗ್ರಹಿಸಿದರು.

ಉದ್ಯಮಿ ಜಿ.ಶಂಕರ, ಡಾ.ಹರೀಶ್ಚಂದ್ರ, ಟಿ.ವಿ ರಾವ್,
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಆಧಿಕಾರಿ ಎ.ಎ ಮಾಥೂರ್, ರಾಷ್ಟ್ರೀಯ ವೃತ್ತಿ ಶಿಕ್ಷಣ ಮಂಡಳಿಯ ತಜ್ಞ ರಾಜೇಶ್ ಕೆ.ಸಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ ಗಫೂರ್, ಮಂಗಳೂರಿನ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಪ್ರಶಾಂತ ಎನ್ ಗೌಸಾನಿ, ತಾಂತ್ರಿಕ ಇಂಜಿನಿಯರ್ ಬಿ.ಎಂ ಹೆಗ್ಡೆ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT