ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಶಿಲದಲ್ಲಿ ಕಾಣಿಸಿದ ನಕ್ಸಲರ ತಂಡ

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಬೆಳ್ತಂಗಡಿ ತಾಲ್ಲೂಕಿನ ಶಿಶಿಲ ಗ್ರಾಮದಲ್ಲಿ ಮಂಗಳವಾರ ಸಂಜೆ ಆರು ಮಂದಿ ನಕ್ಸಲರ ತಂಡವೊಂದು ಕಾಣಿಸಿಕೊಂಡಿದ್ದು, ತಂಡದಲ್ಲಿ ನಾಲ್ವರು ಶಸ್ತ್ರಧಾರಿ ಪುರುಷರು ಹಾಗೂ ಇಬ್ಬರು ಮಹಿಳೆಯರು ಇದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಶಿಶಿಲ ಗ್ರಾಮದ ಅಂಬುಡೆದಂಗೆ ಎಂಬಲ್ಲಿ ಕಾಡಿನ ಅಂಚಿನಲ್ಲಿರುವ ಪರಿಶಿಷ್ಟರ ಕಾಲೋನಿ ಮನೆಯೊಂದಕ್ಕೆ ಭೇಟಿ ನೀಡಿದ ಖಾಕಿ ಬಣ್ಣದ ಸಮವಸ್ತ್ರ ಧರಿಸಿದ್ದ ಆರು ಮಂದಿ, ~ನಾವು ನಕ್ಸಲರು. ನಮ್ಮ ಬಗ್ಗೆ ನೀವು ಹೆದರಬೇಕಾದ ಅಗತ್ಯ ಇಲ್ಲ. ಮತ್ತೆ ಇಲ್ಲಿಗೆ ಬರುತ್ತೇವೆ~ ಎಂದು ಹೇಳಿ ಬಳಿಕ ಕಾಡು ದಾರಿ ಹಿಡಿದರು. ಅವರ ಬಳಿ ಚೀಲ ಹಾಗೂ ಟಾರ್ಚ್ ಇತ್ತು ಎನ್ನಲಾಗಿದೆ.

 ಮಲೆಕುಡಿಯ ವ್ಯಕ್ತಿಯೊಬ್ಬರಿಗೆ ಕಾಡು ದಾರಿಯಲ್ಲಿ ನಕ್ಸಲರ ತಂಡ ಕಾಣಿಸಿಕೊಂಡಿತ್ತು. ಅವರನ್ನು ಕಾಣುತ್ತಲೇ ಆ ವ್ಯಕ್ತಿ ಹೆದರಿ ಮನೆಯತ್ತ ಓಡಿಬಂದರು. ಅವರ ಬೆನ್ನಲ್ಲೇ ಆಗಮಿಸಿದ ನಕ್ಸಲ ತಂಡ ಗ್ರಾಮಸ್ಥರನ್ನು ಮಾತನಾಡಿಸಿದೆ~ ಎಂದು ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT