ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವೇದನಾಶೀಲತೆ ಜೀವನಕ್ಕೆ ಅಗತ್ಯ

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿಕೆ
Last Updated 16 ಜನವರಿ 2017, 5:48 IST
ಅಕ್ಷರ ಗಾತ್ರ

ಪುಂಡಲೀಕ ಹಾಲಂಬಿ ವೇದಿಕೆ (ಬ್ರಹ್ಮಾವರ): ನಮ್ಮ ದೇಶದ ಜನರಲ್ಲಿ ಇರುವ ಲವಲವಿಕೆ, ಉತ್ಸಾಹ, ಮಾನವೀ ಯತೆ, ಏಕಾಗ್ರತೆ ವಿದೇಶಿಯರಲ್ಲಿ ನಾವು ಕಾಣಲು ಸಾಧ್ಯವಿಲ್ಲ. ಆದರೆ, ಮೊಬೈಲ್, ಇಂಟರ್‌ನೆಟ್‌ ಕಾರಣದಿಂದ ನಾವು ಭಾವನಾರಹಿತ, ಸಂವೇದನಾ ಶೀಲತೆ ಯಿಂದ ದೂರವಾಗುತ್ತಿದ್ದೇವೆ. ಇದನ್ನು ಸರಿಪಡಿಸಲು ನಾವು ಚಿಂತನೆ ಮಾಡ ಬೇಕಾಗಿದೆ ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಂದಾಡಿ ಸುಬ್ಬಣ್ಣ ಭಟ್ ಸಭಾಂಗಣದ ಪುಂಡ ಲೀಕ ಹಾಲಂಬಿ ವೇದಿಕೆಯಲ್ಲಿ ನಡೆದ 11ನೇ  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಸಾಧಕ ಸಂಘಸಂಸ್ಥೆಗಳಿಗೆ ಗೌರವಿಸುವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ, ಕನ್ನಡ ಶಾಲೆಯ ಉಳಿವು, ಭಾಷೆಯ ಉಳಿವಿಗೆ ಜನರು ಸಂಘಟಿತರಾಗಬೇಕು. ಜನಪ್ರತಿನಿಧಿ ಗಳಿಂದ ಇದು ಸಾಧ್ಯವಿಲ್ಲ. ಸ್ವಾಭಿಮಾನ ವನ್ನು ಜಾಗೃತಗೊಳಿಸಿಕೊಂಡು, ಹಿರಿ ಯರ ಆದರ್ಶಗಳನ್ನು ಮೈಗೂಡಿಸಿಕೊ ಳ್ಳುವತ್ತ ಪ್ರಯತ್ನ ಪಡಬೇಕು ಎಂದರು.

ಸಮ್ಮೇಳನಾಧ್ಯಕ್ಷ ಪ್ರೊ.ಎಂ. ರಾಮಚಂದ್ರ, ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಕೋಟದ ಉದ್ಯಮಿ ಆನಂದ ಸಿ.ಕುಂದರ್, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಭಟ್, ಬ್ರಹ್ಮಾವರ ಹೋಬಳಿಯ ಅಧ್ಯಕ್ಷ ಮೋಹನ್‌ ಉಡುಪ ಹಂದಾಡಿ, ಹಿರಿಯ ನಾಗರಿಕ ವೇದಿಕೆಯ ಭಾಸ್ಕರ ರೈ ಮತ್ತಿತರರು ಉಪಸ್ಥಿತರಿದ್ದರು.

ಗೌರವ ಪಡೆದ ಸಂಸ್ಥೆಗಳು:  ಬ್ರಹ್ಮಾವರ ರೋಟರಿ ಕ್ಲಬ್, ಗ್ರಾಮೀಣಾಭಿವೃದ್ಧಿ ಯೋಜನೆ, ಕೋಟ ಗೀತಾನಂದ ಫೌಂಡೇಶನ್, ಮೊಗವೀರ ಯುವ ವೇದಿಕೆ, ತಲ್ಲೂರ್‌ ಫ್ಯಾಮಿಲಿ ಟ್ರಸ್ಟ್, ಕೋಟ ಕಾರಂತ ಸನ್ಮಾನ ಪ್ರಶಸ್ತಿ  ಪ್ರತಿಷ್ಠಾನ, ಸಾಯಿಬ್ರಕಟ್ಟೆ ಜನನಿ ಕನ್ನಡ ಸಂಘ, ಹಾರಾಡಿಯ ಭೂಮಿಕಾ ರಂಗ ತಂಡ, ಕೊಕ್ಕರ್ಣೆ ಕ್ರಿಯೇಟಿವ್ ಯೂತ್‌ ಕ್ಲಬ್, ಬಿರ್ತಿಯ ಅಂಕದ ಮನೆ ಅಂಬೇಡ್ಕರ್ ಯುವಕ ಮಂಡಲ, ಬೀಜಾಡಿಯ ಮಿತ್ರ ಸಂಗಮ,

ನೀಲಾವರ ಚೈತನ್ಯ ಯುವಕ ಸಂಘ, ಹೇರೂರು ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಬ್ರಹ್ಮಾವರ ಮಟಪಾಡಿಯ ನಂದಿಕೇಶ್ವರ ಯಕ್ಷಗಾನ ಮಂಡಳಿ, ಕಾರ್ಕಳದ ಮಹಾಲಿಂಗೇಶ್ವರ ಯಕ್ಷಗಾನ ಸಂಘ, ಉಪ್ಪೂರು ಯುವ ವಿಚಾರ ವೇದಿಕೆ, ಅಚ್ಲಾಡಿಯ ಸಂಚಯಿನಿ ಗೆಳೆಯರ ಬಳಗ, ಕೋಡಿಬೆಂಗ್ರೆಯ ಮೈತ್ರಿ ಯುವಕ ಮಂಡಲ ಮತ್ತು  ಕೊಡಂಕೂರು ಫ್ರೆಂಡ್ಸ್ ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT