ನೀರನ್ನು ಮಿತವಾಗಿ ಬಳಸಿ: ಡಿ.ಕೆ. ಸುರೇಶ್‌

7

ನೀರನ್ನು ಮಿತವಾಗಿ ಬಳಸಿ: ಡಿ.ಕೆ. ಸುರೇಶ್‌

Published:
Updated:
Deccan Herald

ಹಾರೋಹಳ್ಳಿ (ಕನಕಪುರ): ಕುಡಿಯುವ ನೀರಿನಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ದೊಡ್ಡಕಲ್‌ಬಾಳ್‌ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪರಿಸರ ಹಾನಿ ಮನುಷ್ಯನ ದುರಾಸೆಯೇ ಮುಖ್ಯ ಕಾರಣ. ನೀರು ಕಲುಷಿತವಾಗಿ ಕುಡಿಯಲು ಯೋಗ್ಯವಾಗಿಲ್ಲ. ನೀರನ್ನು ಶುದ್ಧೀಕರಿಸಿ ಕುಡಿಯುವ ಅನಿವಾರ್ಯತೆ ತಲೆದೋರಿದೆ. ಆದ್ದರಿಂದ ಗ್ರಾಮದ  ಜನಕ್ಕೂ ಶುದ್ಧ ನೀರು ಸಿಗಲೆಂದು ಈ ಘಟಕ ನಿರ್ಮಾಣ ಮಾಡಿರುವುದಾಗಿ ತಿಳಿಸಿದರು.

‘ಘಟಕಕ್ಕಾಗಿ ದೊಡ್ಡ ಮೊತ್ತದ ಹಣ ಖರ್ಚಾಗುತ್ತಿದೆ. ಆದ್ದರಿಂದ ಇದನ್ನು ನಮ್ಮದು ಎನ್ನುವ ಭಾವನೆಯೊಂದಿಗೆ ಬಳಸಬೇಕು. ನೀರನ್ನು ಹಿತಮಿತವಾಗಿ ಬಳಸಿ ಘಟಕವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು’ ಎಂದು ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಎಸ್. ರವಿ ಮಾತನಾಡಿ, ‘ಬೇರೆ ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗಾಗಿ ಕಿಲೋಮೀಟರ್‌ ದೂರ ಕ್ರಮಿಸಬೇಕು. ಇಲ್ಲಿ ನಿಮ್ಮ ಮನೆಯ ಮುಂದೆಯೇ ಶುದ್ಧ ಕುಡಿಯುವ ನೀರಿನ ಸೌಲಭ್ಯವಿದೆ. ಇದನ್ನು ಒಳ್ಳೆಯ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಉಷಾರವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೊಲ್ಲಳ್ಳಿ ಸುರೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆ.ಸಿ.ಬಿ. ಅಶೋಕ್‌, ಮುಖಂಡರಾದ ಪರಮೇಶ್‌, ಕಲ್ಬಾಳ್‌ ಲಕ್ಷ್ಮಣ್‌  ಉಪಸ್ಥಿತರಿದ್ದರು.

ಗ್ರಾಮಸ್ಥರ ಒತ್ತಾಯ: ಈ ಭಾಗದಲ್ಲಿ ಸಾರಿಗೆ ಸೌಕರ್ಯ ಸರಿಯಾಗಿ ಇಲ್ಲ. ತಮ್ಮ ಗ್ರಾಮಕ್ಕೆ ಬಸ್ಸು ಬರುವಂತೆ ಮಾಡಬೇಕು. ಸಿದ್ದೇನಹಳ್ಳಿ, ದೊಡ್ಡಕಲ್ಲುಬಾಳು, ಚಿಕ್ಕಕಲ್ಲುಬಾಳು ಗ್ರಾಮಗಳು ಹೈನುಗಾರಿಕೆಯನ್ನು ಹೆಚ್ಚಾಗಿ ಅವಲಂಬಿಸಿದೆ. ಆದ್ದರಿಂದ ಪಶು ಆಸ್ಪತ್ರೆ ಸ್ಥಾಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಭರವಸೆ: ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಕೋರಿಕೆಗಳನ್ನು ಈಡೇರಿಸುವುದಾಗಿ ಸಂಸದ ಡಿ.ಕೆ. ಸುರೇಶ್‌ ಭರವಸೆ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !