ಬುಧವಾರ, ಆಗಸ್ಟ್ 21, 2019
27 °C

ಕಾರವಾರ: ಜಿಲ್ಲೆಯಲ್ಲಿ 5,396 ಎಕರೆ ಕೃಷಿಗೆ ಹಾನಿ

Published:
Updated:
Prajavani

ಕಾರವಾರ: ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯು ರೈತರಿಗೆ ಸಂತಸದೊಂದಿಗೆ ದುಃಖವನ್ನೂ ಸುರಿದಿದೆ. ವಿಳಂಬವಾಗಿ ಆರಂಭವಾದ ಮಳೆ ಈ ಬಾರಿಯ ಕೃಷಿಯ ಮೇಲೆ ಕಾರ್ಮೋಡ ತಂದಿತ್ತು. ಆದರೆ, ಮೂರು ದಿನಗಳಿಂದ ಧಾರಾಕಾರ ಮಳೆಯು, ಬಿತ್ತನೆ ಮಾಡಿದ ಜಮೀನನ್ನು ಜಲಾವೃತವಾಗಿಸಿದೆ.

ಜಿಲ್ಲೆಯಲ್ಲಿ ಒಟ್ಟು 5,396 ಎಕರೆ ಜಮೀನಿನಲ್ಲಿ ಮಾಡಲಾಗಿದ್ದ ಕೃಷಿ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಅದರಲ್ಲಿ 4,666 ಎಕರೆ ಭತ್ತ, 575 ಎಕರೆ ಮೆಕ್ಕೆಜೋಳ ಹಾಗೂ 155 ಎಕರೆ ಕಬ್ಬು ಸೇರಿದೆ.

ತಾಲ್ಲೂಕುವಾರು ಹಾನಿಯ ವಿವರ: ಭತ್ತ: ಕಾರವಾರದಲ್ಲಿ 700 ಎಕರೆ, ಅಂಕೋಲಾದಲ್ಲಿ 1,260 ಎಕರೆ, ಕುಮಟಾದಲ್ಲಿ 1,300 ಎಕರೆ, ಹೊನ್ನಾವರದಲ್ಲಿ 230 ಎಕರೆ, ಭಟ್ಕಳದಲ್ಲಿ 20 ಎಕರೆ, ಶಿರಸಿಯಲ್ಲಿ 152 ಎಕರೆ, ಸಿದ್ದಾಪುರದಲ್ಲಿ 344 ಎಕರೆ, ಮುಂಡಗೋಡದಲ್ಲಿ 235 ಎಕರೆ, ಹಳಿಯಾಳದಲ್ಲಿ 185 ಎಕರೆ, ಜೊಯಿಡಾದಲ್ಲಿ 240 ಎಕರೆ ಹಾನಿಯಾಗಿದೆ.

ಮೆಕ್ಕೆಜೋಳ: ಮುಂಡಗೋಡದಲ್ಲಿ 465 ಎಕರೆ ಹಾಗೂ ಹಳಿಯಾಳದಲ್ಲಿ 110 ಎಕರೆ ನಾಶವಾಗಿದೆ. ಹಳಿಯಾಳದಲ್ಲಿ 155 ಎಕರೆ ಕಬ್ಬಿನ ಬೆಳೆಯೂ ಮಳೆಯಬ್ಬರಕ್ಕೆ ಹಾನಿಯಾಗಿದೆ ಎಂದು ಇಲಾಖೆ ತಿಳಿಸಿದೆ.

Post Comments (+)