ಗೇರುಸೊಪ್ಪ ಅಣೆಕಟ್ಟೆಯಿಂದ 73 ಸಾವಿರ ಕ್ಯುಸೆಕ್ ನೀರು ಬಿಡುಗಡೆ

7

ಗೇರುಸೊಪ್ಪ ಅಣೆಕಟ್ಟೆಯಿಂದ 73 ಸಾವಿರ ಕ್ಯುಸೆಕ್ ನೀರು ಬಿಡುಗಡೆ

Published:
Updated:
Deccan Herald

ಹೊನ್ನಾವರ:  ಲಿಂಗನಮಕ್ಕಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿರುವ ಕಾರಣ ಶರಾವತಿ ನದಿಗೆ ಒಳಹರಿವು ಹೆಚ್ಚಿದೆ. ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಅಣೆಕಟ್ಟೆಗೆ (ಶರಾವತಿ ಟೇಲ್‌ ರೇಸ್) ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಅಣೆಕಟ್ಟೆಗೆ ಶುಕ್ರವಾರ ಸಂಜೆಯ ವೇಳೆಗೆ 63 ಸಾವಿರ ಕ್ಯುಸೆಕ್ ಒಳಹರಿವಿದ್ದು, ಮುನ್ನೆಚ್ಚರಿಕೆಯಾಗಿ 73 ಸಾವಿರ ಕ್ಯುಸೆಕ್‌ಗಳಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಅಣೆಕಟ್ಟೆಯ ಕೆಳಭಾಗದಲ್ಲಿ ನದಿಯು ತುಂಬಿ ಹರಿಯುತ್ತಿದೆ. ಅಣೆಕಟ್ಟೆಯಿಂದ ಕಳೆದ ಮಂಗಳವಾರ ಈ ವರ್ಷದಲ್ಲಿ ಮೊದಲ ಬಾರಿಗೆ ನೀರು ಹೊರಬಿಡಲಾಗಿತ್ತು. 

ಶರಾವತಿ ಎಡ ಮತ್ತು ಬಲದಂಡೆಯ ಭಾಗದಲ್ಲಿರುವ ಗೇರುಸೊಪ್ಪ, ನಗರ ಬಸ್ತಿಕೇರಿ, ಐಗುಂದ, ಬಳ್ಕೂರು, ಇಡಗುಂಜಿಯನ್ನೂ ಒಳಗೊಂಡಂತೆ ವಿವಿಧ ಗ್ರಾಮಗಳಲ್ಲಿ ಮನೆಗಳು, ರಸ್ತೆ, ಸೇತುವೆಗಳು ಜಲಾವೃತವಾದ ಬಗ್ಗೆ ವರದಿಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !