ಬುಧವಾರ, ಸೆಪ್ಟೆಂಬರ್ 22, 2021
21 °C

ಶಿರಸಿ: ನೆರೆ ಸಂತ್ರಸ್ತರಿಗೆ ಅಮೆರಿಕ ಹವ್ಯಕ ಅಸೋಸಿಯೇಶನ್ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಅತಿವೃಷ್ಟಿಯಿಂದ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಕಳಚೆ, ಇನ್ನಿತರ ಪ್ರದೇಶಗಳ ಜನರಿಗೆ ನೆರವಾಗಲು ಅಮೆರಿಕದ ಹವ್ಯಕ ಅಸೋಸಿಯೇಶನ್ ₹ 5 ಲಕ್ಷಕ್ಕೂ ಅಧಿಕ (7 ಸಾವಿರ ಅಮೆರಿಕನ್ ಡಾಲರ್) ದೇಣಿಗೆ ನೀಡಿದೆ.

ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೀಡಿದ ಕರೆಗೆ ಸ್ಪಂದಿಸಿರುವ ಅಸೋಸಿಯೇಶನ್, ದೇಣಿಗೆಯನ್ನು ಮಠದ ವತಿಯಿಂದ ಕೈಗೊಳ್ಳುತ್ತಿರುವ ನೆರವು ಕಾರ್ಯಕ್ಕೆ ಬಳಸಿಕೊಳ್ಳಲು ವಿನಂತಿಸಿದೆ.

ಭೈರುಂಬೆ ಶಾರದಾಂಬಾ ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೆಸರಿನಲ್ಲಿ ಇರುವ ನವದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಹಣ ಜಮಾ ಮಾಡಲಾಗಿದೆ ಎಂದು ಅಸೋಸಿಯೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.