ಸೋಮವಾರ, ಆಗಸ್ಟ್ 15, 2022
20 °C

ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ವಿತರಿಸಬೇಕಿದ್ದ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ನಡೆಸಲು ಸಾಗಿಸುತ್ತಿದ್ದ ತಂಡವೊಂದನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಚಿಪಗಿ ಕ್ರಾಸ್ ಬಳಿ ಶುಕ್ರವಾರ ರಾತ್ರಿ ಬಂಧಿಸಿದ್ದು, 2360 ಕೆಜಿ ಅಕ್ಕಿ ಜಫ್ತುಪಡಿಸಿಕೊಂಡಿದ್ದಾರೆ

ಕಸ್ತೂರಬಾ ನಗರದ ಜಾಕೀರ್ ಅಯುಬ್ ಖಾನ್ (52), ನೆಹರೂ ನಗರದ ಸಲ್ಮಾನ್ ಬಶೀರ್ ಅಹ್ಮದ್ (23) ಬಂಧಿತರು. ಆರೋಪಿಗಳು ಲಾರಿಯೊಂದರಲ್ಲಿ ತಲಾ 40 ಕೆಜಿ ತೂಕದಂತೆ 59 ಚೀಲಗಳಲ್ಲಿ ತುಂಬಿಡಲಾಗಿದ್ದ ಅಕ್ಕಿಯನ್ನು ಸಾಗಿಸುತ್ತಿದ್ದರು. ಈ ಕುರಿತು ತಾಲ್ಲೂಕಾ ಆಹಾರ ನಿರೀಕ್ಷಕರು ನೀಡಿದ ದೂರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು