ಬುಧವಾರ, ನವೆಂಬರ್ 20, 2019
22 °C
ಭಟ್ಕಳ: ಆಟೊದಲ್ಲಿ ಮಹಿಳೆ ಬಿಟ್ಟಹೋಗಿದ್ದ ಪರ್ಸ್‌ನಲ್ಲಿತ್ತು ಲಕ್ಷಾಂತರ ಮೌಲ್ಯದ ಆಭರಣ

ಒಡವೆ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೊ ಚಾಲಕ

Published:
Updated:
Prajavani

ಭಟ್ಕಳ: ತಮ್ಮ ಆಟೊದಲ್ಲಿ ಪ್ರಯಾಣಿಸಿದ್ದ ಮಹಿಳೆಯೊಬ್ಬರು ಬಿಟ್ಟುಹೋಗಿದ್ದ, ಸುಮಾರು ₹ 3.50 ಲಕ್ಷ ಮೌಲ್ಯದ ಚಿನ್ನಾಭರಣ ಇದ್ದ ಪರ್ಸನ್ನು ಚಾಲಕ ಪೊಲೀಸರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ತಾಲ್ಲೂಕಿನ ಸಬ್ಬತ್ತಿಯ ಅಣ್ಣಪ್ಪ ಗೊಂಡ ಅವರು ಪರ್ಸ್ ಅನ್ನು ಮರಳಿಸಿದವರು. ಸೋಮವಾರ ಮಧ್ಯಾಹ್ನದಿಂದ ಹಲವು ಪ್ರಯಾಣಿಕರನ್ನು ಕರೆದೊಯ್ದಿದ್ದ ಅವರಿಗೆ ಪರ್ಸ್ ಯಾರದೆಂದು ತಿಳಿಯಲಿಲ್ಲ. ಅದರಲ್ಲಿ ಆಭರಣಗಳ ಜತೆಗೆ ಪಾನ್ ಕಾರ್ಡ್ ಸಹ ಇತ್ತು. ಅದನ್ನು ನಗರ ಪೊಲೀಸ್ ಠಾಣೆಗೆ ತಂದು ಎ.ಎಸ್.ಐ ನವೀನ್ ಬೋರ್ಕರ್ ಅವರಿಗೆ ನೀಡಿದರು.

ಪಾನ್ ಕಾರ್ಡ್ ಆಧಾರದ ಮೇಲೆ ಪರ್ಸ್ ವಾರಸುದಾರರನ್ನು ಪತ್ತೆ ಹಚ್ಚಲಾಯಿತು. ಪರ್ಸ್ ಕಳೆದುಕೊಂಡಿದ್ದ ತಾಲ್ಲೂಕಿನ ಬೆಳಕೆಯ ಜಯಂತಿ ಮೊಗೇರ ಅವರನ್ನು ಠಾಣೆಗೆ ಕರೆಸಿ ಪರ್ಸನ್ನು ಮರಳಿಸಲಾಯಿತು. ಪ್ರಾಮಾಣಿಕತೆ ಮೆರೆದ ಆಟೊ ಚಾಲಕ ಅಣ್ಣಪ್ಪ ಗೊಂಡ ಅವರನ್ನು ಎ.ಎಸ್‌.ಪಿ ನಿಖಿಲ್.ಬಿ ಸನ್ಮಾನಿಸಿದರು. ರಿಕ್ಷಾ ಯೂನಿಯನ್ ಅಧ್ಯಕ್ಷ ಕೃಷ್ಣನಾಯ್ಕ ಆಸರಿಕೇರಿ ಇದ್ದರು.

ಪ್ರತಿಕ್ರಿಯಿಸಿ (+)