ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತಮ ಶಿಕ್ಷಕ’ ಪ್ರಶಸ್ತಿ ಪ್ರದಾನ 5ರಂದು

Last Updated 2 ಸೆಪ್ಟೆಂಬರ್ 2022, 14:21 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲಾ ಮಟ್ಟದ ‘ಉತ್ತಮ ಶಿಕ್ಷಕ ಪ್ರಶಸ್ತಿ’ಗಳು ಪ್ರಕಟವಾಗಿವೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ತಾಲ್ಲೂಕಿಗೆ ಒಬ್ಬರಂತೆ ತಲಾ ಐವರನ್ನು ಆಯ್ಕೆ ಮಾಡಲಾಗಿದೆ.

ಕಿರಿಯ ಪ್ರಾಥಮಿಕ ಶಾಲೆ:

ಗೀತಾ ಎನ್.ರಾಣೆ (ಶೇಜೆಬಾಗ, ಕಾರವಾರ), ವಿನಾಯಕ ಪಿ.ನಾಯ್ಕ (ವಜ್ರಳ್ಳಿ, ಅಂಕೋಲಾ), ಶ್ರೀಕಾಂತ ಸುಬ್ರಾಯ ಹೆಗಡೆ (ಕುಡ್ಲೆ ಅಂತ್ರವಳ್ಳಿ, ಕುಮಟಾ), ಶೋಭಾ ಶೇಟ್ (ಕೆರೆಮನೆ, ಹೊನ್ನಾವರ), ಮಹೇಶ ಸಿ.ತೇರ‍್ನಮಕ್ಕಿ (ತೂದಳ್ಳಿ, ಭಟ್ಕಳ).

ಹಿರಿಯ ಪ್ರಾಥಮಿಕ ಶಾಲೆ:

ವಿನುತಾ ಕುಮಾರಿ ಗೋವಿಂದರಾಯ ನಾಯಕ (ಅಂಗಡಿ, ಕಾರವಾರ), ಲಕ್ಷ್ಮಿ ಎನ್.ನಾಯಕ (ಗಂಡುಮಕ್ಕಳ ಶಾಲೆ ಅವರ್ಸಾ, ಅಂಕೋಲಾ), ಮಂಜುನಾಥ ಎಂ.ನಾಯ್ಕ (ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಗುಡಿಗಾರಗಲ್ಲಿ, ಕುಮಟಾ), ಗಣಪತಿ ಅಮಕೂಸ ಗೌಡ (ನಗರೆ ನಂ.1, ಹೊನ್ನಾವರ), ಈಶ್ವರ ವೆಂಕಟ್ರಮಣ ಹೆಗಡೆ (ಗಡಿಮುಂಡ್ಕಿ, ಭಟ್ಕಳ).

ಪ್ರೌಢಶಾಲೆ:

ತಿಪ್ಪೇಸ್ವಾಮಿ ಜಿ.ಬಿ (ಶಿವಾಜಿ ವಿದ್ಯಾಮಂದಿರ ಅಸ್ನೋಟಿ, ಕಾರವಾರ), ವಿಜಯಾ ಎಚ್.ಗಾಂವ್ಕರ್ (ಕೇಣಿ, ಅಂಕೋಲಾ), ಮಹಾದೇವ ಬೊಮ್ಮು ಗೌಡ (ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ, ಕುಮಟಾ), ಎಸ್.ವೈ.ಬೈಲೂರು (ಸೇಂಟ್ ಥಾಮಸ್ ಪ್ರೌಢಶಾಲೆ, ಹೊನ್ನಾವರ), ರಾಜೇಸಾಬ ನಿಪ್ಪಾಣಿ (ಐ.ಎ.ಯು.ಎಚ್.ಎಸ್, ಭಟ್ಕಳ).

ಪ್ರಶಸ್ತಿಗಳನ್ನು ಕುಮಟಾದ ಕಲಭಾಗದಲ್ಲಿರುವ ಕೊಂಕಣ ಎಜುಕೇಶನ್ ಟ್ರಸ್ಟ್ ‍ಪ್ರೌಢಶಾಲೆಯಲ್ಲಿ ಸೆ.5ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇಬ್ಬರಿಗೆ ರಾಜ್ಯಮಟ್ಟದ ಪ್ರಶಸ್ತಿ:

ಶಿರಸಿ ಶೈಕ್ಷಣಿಕ ಜಿಲ್ಲೆಯ ಇಬ್ಬರು ಶಿಕ್ಷಕರು ರಾಜ್ಯಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಯಲ್ಲಾಪುರ ತಾಲ್ಲೂಕಿನ ಕಂಚನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸುಧಾಕರ ಗಣಪತಿ ನಾಯಕ, ಶಿರಸಿ ಮಾರಿಕಾಂಬಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಕನ್ನಡ ಶಿಕ್ಷಕ ನಾರಾಯಣ ಪರಮೇಶ್ವರ ಭಾಗ್ವತ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಮತ್ತು ಪ್ರಮಾಣಪತ್ರ, ಸನ್ಮಾನವನ್ನು ಒಳಗೊಂಡಿದೆ.

ನಿವೃತ್ತ ಶಿಕ್ಷಕರಿಗೆ ಸನ್ಮಾನ:

ಕಾರವಾರ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆ.5ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ತಾಲ್ಲೂಕಿನ ನಿವೃತ್ತ ಶಿಕ್ಷಕರಿಗೆ ಅಂದು ಸನ್ಮಾನ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿದೆ. ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಲಿದ್ದು, ವಿಧಾನಪರಿಷತ್ ಸದಸ್ಯ ಗಣಪತಿ ಡಿ.ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮತ್ತು ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT