ನಗರಸಭೆ: ಹೊಸ ಮುಖಗಳಿಗೆ ಪಕ್ಷಗಳ ಮಣೆ

7
ಕಾರವಾರ: ಅಖಾಡಕ್ಕೆ ಇಳಿಯಲು ಸಜ್ಜಾದ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು

ನಗರಸಭೆ: ಹೊಸ ಮುಖಗಳಿಗೆ ಪಕ್ಷಗಳ ಮಣೆ

Published:
Updated:
Deccan Herald

ಕಾರವಾರ:  ನಗರಸಭೆ ಚುನಾವಣೆಯ ಕಾವು ಜೋರಾಗುತ್ತಿದ್ದು, ಬಿಜೆಪಿ ಎಲ್ಲ 31 ವಾರ್ಡ್‌ಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ 26 ವಾರ್ಡ್‌ಗಳಿಗ ಉಮೇದುವಾರರ ಹೆಸರನ್ನು ಅಂತಿಮಗೊಳಿಸಿದೆ.

‘ಬಿಜೆಪಿಯಲ್ಲಿ ಈ ಬಾರಿ ಕೇವಲ ಐವರಿಗೆ ಮಾತ್ರ ಪುನರಾಯ್ಕೆಗೆ ಅವಕಾಶ ನೀಡಲಾಗಿದೆ. ಉಳಿದ 26 ವಾರ್ಡ್‌ಗಳಿಗೆ ಹೊಸಬರನ್ನು ಕಣಕ್ಕಿಳಿಸಲಾಗುತ್ತಿದೆ. ನಗರದಲ್ಲಿ ಪಕ್ಷ ಸಂಘಟನೆ ಮಾಡಿದವರಿಗೆ ಮತ್ತು ಹಿರಿಯರು ಸೂಚಿಸಿದವರಿಗೆ ಈಗಾಗಲೇ ಬಿ ಫಾರ್ಮ್ ನೀಡಲಾಗಿದೆ’ ಎಂದು ಪಕ್ಷದ ನಗರ ಘಟಕದ ಅಧ್ಯಕ್ಷ ಮನೋಜ ಭಟ್ ತಿಳಿಸಿದ್ದಾರೆ.

ಕಾಂಗ್ರೆಸ್ ಹಾಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಅವರನ್ನೂ ಒಳಗೊಂಡಂತೆ ಹಲವರಿಗೆ ಮತ್ತೊಂದು ಅವಧಿಗೆ ಆಯ್ಕೆಯಾಗಲು ಟಿಕೆಟ್ ನೀಡಿದೆ. ಸ್ಥಳೀಯವಾಗಿ ಗುರುತಿಸಿಕೊಂಡಿರುವ ಮತ್ತು ಗೆಲ್ಲುವ ಸಾಮರ್ಥ್ಯ ಉಳ್ಳವರನ್ನೇ ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗಿದೆ. ತೀವ್ರ ಪೈಪೋಟಿ ಇರುವ ಆರು ವಾರ್ಡ್‌ಗಳಿಗೆ ಶೀಘ್ರವೇ ಅಭ್ಯರ್ಥಿಗಳು ಯಾರು ಎಂದು ತಿಳಿಸುವುದಾಗಿ ಪಕ್ಷದ ಮುಖಂಡರು ಹೇಳಿದ್ದಾರೆ.

                                    ಕಾರವಾರ ನಗರಸಭೆ ಅಭ್ಯರ್ಥಿಗಳು

ವಾರ್ಡ್‌ ನಂ ಬಿಜೆಪಿ  ಕಾಂಗ್ರೆಸ್‌
1 ವೈಶಾಲಿ ಕಿಶೋರ್ ತಾಂಡೇಲ್ ಪ್ರಕಟಿಸಿಲ್ಲ
2 ಶ್ರೇಯಾ ಸಾಯಿನಾಥ ಪಾರುಲೇಕರ್ ಸ್ನೇಹಲ್ ಚೇತನ್ ಹರಿಕಂತ್ರ
3 ಸಂಧ್ಯಾ ಸಾಯಿದೀಪ್ ಸುವಿಧಾ ಓಂ ಉಳ್ವೇಕರ್
4 ಡಾ.ನಿತಿನ್ ಪಿಕಳೆ ಎಲ್ವಿನ್ ಫೆಲಿಕ್ಸ್ ಫರ್ನಾಂಡಿಸ್
5 ರೇಷ್ಮಾ ಅನು ಕಳಸ್
6 ಪ್ರದೀಪ ಆರ್.ನಾಯ್ಕ ಗಣಪತಿ ನಾಯ್ಕ
7 ಶಿಲ್ಪಾ ಸುಭಾಶ್ ನಾಯ್ಕ ಪ್ರಕಟಿಸಿಲ್ಲ
8 ದೇವಿದಾಸ ವಿಠೋಬ ನಾಯ್ಕ ಮೋಹನ ನಾಯ್ಕ
9 ತುಳಸಿ ಅರುಣ್ ವೈಂಗಣ್ಕರ್ ರಂಜಿತಾ ರಾಜೇಂದ್ರ ಸಾರಂಗ್
10 ರವಿರಾಜ ಚಂದ್ರಹಾಸ ಅಂಕೋಲೆಕರ್ ಬಾಬು ಶೇಖ್
11 ನಂದಾ ಬಾಲ ಸಾವಂತ್ ವಿಠ್ಠಲ ಸಾವಂತ್
12 ಗಣಪತಿ ದುಮ್ಮ ಉಳ್ವೇಲಕರ್ ಪ್ರಕಟಿಸಿಲ್ಲ
13 ಅನುಶ್ರೀ ಗಜಾನನ ಕುಬಡೆ ಮಂಗಲಾ ನಾಯ್ಕ
14 ನಯನಾ ಎನ್.ನೀಲಾವರ್ ರತ್ನಾ ರತ್ನಾಕರ ನಾಯ್ಕ
15 ಶಾಗುಪ್ತಾ ಸಿದ್ದಿಕಿ ಮಕ್ಬೂಲ್ ಶೇಖ್
16 ದಿಗಂಬರ ವಿ ಹಳದಂಕರ್ ಮುನ್ನಾ ರೇವಂಡಿಕರ್
17 ಅಶ್ವಿನಿ ಆದೇಶ ಬಾಂದೇಕರ ಸುಚಿತ್ರ ಸುನಿಲ್ ಕಲ್ಗುಟ್ಕರ್
18 ಉಲ್ಲಾಸ್ ಜಿ ಕೇಣಿ ಲೀಲಾಬಾಯಿ ಠಾಣೇಕರ್
19 ಹನುಮಂತ ತಲವಾರ್ ಪ್ರಕಟಿಸಿಲ್ಲ
20 ಮಾಧುರಿ ಎಂ.ನಾಯ್ಕ ಸುಹಾನಿ ಪೂರ್ಣಾನಂದ ಪಾಟೀಲ್
21 ಮಾಲಾ ಪಿ.ಹುಲಸ್ವಾರ್ ಪ್ರಕಟಿಸಿಲ್ಲ
22 ಸಂಜನಾ ಎಸ್.ನಾಯ್ಕ ಜ್ಯೋತಿ ದೀಪಕ್ ವೆರ್ಣೇಕರ್
23 ಸಂಜಯ ಧನಂಜಯ ನಾಯ್ಕ ಸಂತೋಷ್ ಮಹಾಲಸ್ಕರ್
24 ಮಹೇಶ್ ಉಲ್ಲಾಸ ತಾಮ್ಸೆ ಹರೇಶ್ ಸಾಗೇಕರ್
25 ಮೀನಾಕ್ಷಿ ಮಾರುತಿ ಕಲ್ಗುಟ್ಕರ್ ಪದ್ಮಾ ದೀಪಕ್ ಪಾಲೇಕರ್
26 ನಂದಾ ಟಿ ನಾಯ್ಕ ಅನಿಲ್ ನಾಯ್ಕ
27 ಮಧುರಾ ಮಹೇಶ್ ತಾರಿ ಅರ್ಚನಾ ರವಿ ಚಿಪ್ಕರ್
28 ಉಲ್ಲಾಸ್ ಅನಂತ ಭಟ್ ಸಂದೀಪ ತಳೇಕರ್
29 ಸುಜಾತಾ ವಸಂತ ಗೌಡ ಶ್ವೇತಾ ನಾಯ್ಕ
30 ಸೀತಾರಾಮ ದೇಮು ಗುನಗಿ ರಾಜೇಂದ್ರ ಅಂಚೇಕರ್
31 ರಂಗಮ್ಮ ಎಂ.ಲಮಾಣಿ ಈಶ್ವರಿ ರೆಡ್ಡಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !