ಸೋಮವಾರ, ಆಗಸ್ಟ್ 8, 2022
21 °C

‘ಸೆಲ್ಫಿ’ ತೆಗೆದುಕೊಳ್ಳುವಾಗ ‘ಕಾಳಿ’ಗೆ ಬಿದ್ದ ಯುವಕ, ಯುವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ತಾಲ್ಲೂಕಿನ ಗಣೇಶಗುಡಿಯಲ್ಲಿ ಸೋಮವಾರ, ಮೊಬೈಲ್‌ ಫೋನ್‌ನಲ್ಲಿ ‘ಸೆಲ್ಫಿ’ ತೆಗೆದುಕೊಳ್ಳುವಾಗ ಆಯತಪ್ಪಿ ಕಾಳಿ ನದಿಗೆ ಬಿದ್ದ ಯುವಕ ಮತ್ತು ಯುವತಿ ನಾಪತ್ತೆಯಾಗಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಸೂಪಾ‌ ಜಲಾಶಯದ ಬಳಿ ಇರುವ ಕಾಳಿ ನದಿ ಸೇತುವೆಯ ಕೆಳಭಾಗದ ಕಟ್ಟೆಯ ಮೇಲೆ ನಿಂತು ‘ಸೆಲ್ಫಿ’ ತೆಗೆದುಕೊಳ್ಳುತ್ತಿದ್ದರು. ಆಗ ಇಬ್ಬರೂ ಕಾಲುಜಾರಿ ನದಿಗೆ ಬಿದ್ದು ತೇಲಿಕೊಂಡು ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಯುವತಿಯನ್ನು ಬೀದರ್‌ನ ರಕ್ಷಿತಾ ಎಂದು ಗುರುತಿಸಲಾಗಿದೆ. ಯುವಕನ ಮಾಹಿತಿ ತಿಳಿದುಬರಬೇಕಿದೆ. ರಾಮನಗರ ಠಾಣೆ ಪಿ.ಎಸ್.ಐ ಕಿರಣ ಪಾಟೀಲ ಹಾಗೂ ಜೊಯಿಡಾದ ಅಗ್ನಿಶಾಮಕ ಸಿಬ್ಬಂದಿ, ವೈಟ್ ವಾಟರ್ ರ‍್ಯಾಫ್ಟಿಂಗ್ ತಂಡದ ಸದಸ್ಯರು  ಸ್ಥಳದಲ್ಲಿದ್ದು, ಇಬ್ಬರಿಗೂ ಶೋಧ ಕಾರ್ಯ ನಡೆಸುತ್ತಿದ್ದಾರೆ. ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು