ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳಕೇಬೈಲ್‌ ಗುಡ್ಡ ಕುಸಿಯುವ ಭೀತಿ

ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮದಲ್ಲಿ ಅಪಾಯದ ಆತಂಕ
Last Updated 4 ಆಗಸ್ಟ್ 2019, 12:56 IST
ಅಕ್ಷರ ಗಾತ್ರ

ಕಾರವಾರ:ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮದ ತಳಕೇಬೈಲ್ ಬಳಿ ಗುಡ್ಡವು ಅಪಾಯಕಾರಿ ಸ್ಥಿತಿಯಲ್ಲಿದೆ. ಎರಡು ದಿನಗಳ ಹಿಂದೆ ಇಲ್ಲಿ ಮತ್ತೆ ಮಣ್ಣು ಕುಸಿದಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಮ್ಯಾಂಗನೀಸ್ ಅದಿರಿನಿಂದ ಬರಡಾದಈ ಅರಣ್ಯ ಪ್ರದೇಶದ ಸಮೀಪದಲ್ಲೇಕಾರವಾರ– ಇಳಕಲ್ ರಾಜ್ಯ ಹೆದ್ದಾರಿ 6 ಹಾದುಹೋಗುತ್ತದೆ. ಒಂದುವೇಳೆ ಇಲ್ಲಿ ಗುಡ್ಡ ಕುಸಿತವಾಗಿ ರಸ್ತೆ ಮುಚ್ಚಿಹೋದರೆ ಹತ್ತಾರು ಹಳ್ಳಿಗಳಿಗೆಹೊರ ಜಗತ್ತಿನ ಸಂಪರ್ಕಕಷ್ಟವಾಗಲಿದೆ. ಮುಖ್ಯವಾಗಿ ಕೈಗಾಪ್ರದೇಶಕ್ಕೆ ಸಂಪರ್ಕ ಕಡಿತವಾಗಲಿದೆಎಂದು ಸ್ಥಳೀಯರಾದ ದತ್ತಾತ್ರಯ ಭಟ್ಟ ಕಣ್ಣಿಪಾಲಹೇಳಿದ್ದಾರೆ.

‘ಗುಡ್ಡವುಐದಾರು ವರ್ಷಗಳಿಂದ ಸ್ವಲ್ಪ ಸ್ವಲ್ಪವೇ ಕುಸಿಯುತ್ತಿದೆ. ಈ ಬಾರಿ ಎರಡು ದಿನ ನಿರಂತರವಾಗಿ ವರ್ಷಧಾರೆಯಾದ ಪರಿಣಾಮ ಮಣ್ಣು ಮೆತ್ತಗಾಗಿದೆ. ಗುಡ್ಡದ ಮೇಲೆ ಅದಿರು ನಿಕ್ಷೇಪದ ಸ್ಥಳದಲ್ಲಿ ಬೃಹತ್ ಹೊಂಡಗಳಿವೆ. ಅವುಗಳಲ್ಲಿ ನೀರುತುಂಬಿಕೊಂಡು ಭೂಮಿಯ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ಹಾಗಾಗಿ ಈ ಪ್ರದೇಶವನ್ನು ಅಧ್ಯಯನಕ್ಕೆಒಳಪಡಿಸುವ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾಳಿ ನದಿಯಂಚಿನ ಕೊಡಸಳ್ಳಿ ಮತ್ತು ಕದ್ರಾ ಜಲಾಶಯಗಳ ಕಣಿವೆಯ ಒಂದು ಬದಿ ಪಾರ್ಶ್ವದಲ್ಲಿಎತ್ತರಕ್ಕೆ ಕಲ್ಲಿನ ಬೆಟ್ಟಗಳಿವೆ. ಕಳಚೆಗ್ರಾಮದಹೆಬ್ಬಾರ ಕುಂಬ್ರಿ ಘಟ್ಟಪ್ರದೇಶದ ನಂತರದ ತುದಿಯಲ್ಲಿ ಬೇಡ್ತಿ ನದಿಯಿದೆ. ಈ ಕಣಿವೆಗಳ ಸಮಾನ ಅಂತರದಲ್ಲಿ ತಳಕೆಬೈಲ್ಇದೆ.

ಇಲ್ಲಿ ರಾಜ್ಯ ಹೆದ್ದಾರಿಯ ಅಂಚಿನಲ್ಲಿಮೂರು ವರ್ಷಗಳ ಹಿಂದೆ ನೂರಾರು ಅಡಿ ವಿಸ್ತೀರ್ಣದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿತ್ತು. ಅಲ್ಲಿದ್ದದೊಡ್ಡ ಮರಗಳು ಬುಡಮೇಲಾದ ಪರಿಣಾಮ ಕಂದಕವಾಗಿ ಮಾರ್ಪಟ್ಟಿದೆ. ಇದೀಗ ರಸ್ತೆಯಿಂದ ಹತ್ತಾರು ಅಡಿಗಳ ದೂರದಲ್ಲಿಯೇಮತ್ತೆಭೂಕುಸಿತದ ಆತಂಕ ಎದುರಾಗಿದೆ.

‘ಇಲ್ಲಿ ಈ ಹಿಂದೆಗಣಿ ಮತ್ತು ಭೂ ವಿಜ್ಞಾನಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತ್ತು.ಆದರೆ, ಅದರ ವರದಿಏನಾಯಿತು ಎಂದು ತಿಳಿದಿಲ್ಲ.ಮಳೆಗಾಲ ಮುಗಿಯುತ್ತಿದ್ದಂತೆಯೇ ಅವಘಡವೂ ಮರೆತು ಹೋಗುತ್ತಿದೆ’ ಎಂದು ಅವರು ವಿಷಾದಿಸಿದರು.

ಮಾಸಿದ ಎಚ್ಚರಿಕೆ ಫಲಕ:‘ವಜ್ರಳ್ಳಿ ಗ್ರಾಮ ಪಂಚಾಯ್ತಿಯುಭೂ ಕುಸಿತದ ಕುರಿತು ರಸ್ತೆಯಂಚಿನಲ್ಲಿ ಎಚ್ಚರಿಕೆಯ ಮಾಹಿತಿ ಫಲಕ ಅಳವಡಿಸಿದೆ. ಅಲ್ಲಿ ತಂತಿ ಬೇಲಿ ನೆಟ್ಟುಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದೆ. ಆದರೆ, ಅದರಲ್ಲಿರುವ ಅಕ್ಷರಗಳು ಮಾಸಿದ್ದು, ಮತ್ತೆ ಬಣ್ಣ ಬಳಿದು ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಅವಶ್ಯಕತೆ ಇದೆ. ಕೈಗಾ ಮತ್ತು ಸುತ್ತಮುತ್ತ ಗ್ರಾಮೀಣ ಪ್ರದೇಶದವರು, ಪ್ರವಾಸಿಗರು ಈ ಭಾಗದಲ್ಲಿ ಸಂಚರಿಸುತ್ತಾರೆ. ಹಾಗಾಗಿ ಈ ಕಾರ್ಯ ಕೂಡಲೇ ಆಗಬೇಕು’ ಎಂದು ದತ್ತಾತ್ರಯ ಭಟ್ಟ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT