ಮಂಗಳವಾರ, ಆಗಸ್ಟ್ 3, 2021
27 °C

ಕಾರವಾರ: ಮೃತ ಯುವಕನಿಗೆ ಕೋವಿಡ್ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Covid19

ಕಾರವಾರ: ಮಿದುಳಿನಲ್ಲಿ ದುರ್ಮಾಂಸ ಬೆಳೆದ ಸಂಬಂಧ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 35 ವರ್ಷದ ಯುವಕ ಶನಿವಾರ ಮೃತಪಟ್ಟಿದ್ದಾರೆ. ಶವದ ಗಂಟಲುದ್ರವದ ಪರೀಕ್ಷೆ ಮಾಡಿದಾಗ ಕೋವಿಡ್ 19 ದೃಢಪಟ್ಟಿದೆ.

ಅವರಿಗೆ ಹೃದಯ ಹಾಗೂ ಶ್ವಾಸಕೋಶದ ಸಮಸ್ಯೆಯೂ ಇತ್ತು. ಎರಡು ದಿನಗಳ ಹಿಂದೆ ಕೋವಿಡ್‌ನಿಂದ ಮೃತಪಟ್ಟ 71 ವರ್ಷದ ಮಹಿಳೆಯು, ಈ ವ್ಯಕ್ತಿಯ ಹಾಸಿಗೆಯ ಸಮೀಪದ ಹಾಸಿಗೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹಾಗಾಗಿ ಮಹಿಳೆಯಿಂದಲೇ ಸೋಂಕು ಹರಡಿದೆ ಎಂದು ಊಹಿಸಲಾಗಿದೆ. ಕೇರಳದವರಾಗಿದ್ದ ಅವರಿಗೆ ಸಂಬಂಧಿಕರು ಯಾರೂ ಇರಲಿಲ್ಲ. ಏಳೆಂಟು ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕೋವಿಡ್‌ನಿಂದ ಮೃತಪಟ್ಟ 71 ವರ್ಷದ ಮಹಿಳೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಜಿಲ್ಲಾ ಆಸ್ಪತ್ರೆಯ ಒಂಬತ್ತು ಸಿಬ್ಬಂದಿಗೆ ಸೋಂಕು ಖಚಿತವಾಗಿದೆ. ಅವರಲ್ಲಿ ನರ್ಸ್‌ಗಳು, ತಾಂತ್ರಿಕ ಸಿಬ್ಬಂದಿ, ಹೊರಗುತ್ತಿಗೆ ಸಿಬ್ಬಂದಿ ಕೂಡ ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು