ಮಂಗಳವಾರ, ನವೆಂಬರ್ 12, 2019
28 °C

ಬದನಗೋಡಿನಲ್ಲಿ ಕಾಡಾನೆ ಹಿಂಡು

Published:
Updated:
Prajavani

ಶಿರಸಿ: ತಾಲ್ಲೂಕಿನ ಬದನಗೋಡ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ಕಾಡಾನೆಗಳ ಹಿಂಡು ಕಾಣಿಸಿಕೊಂಡು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ನಾಲ್ಕು ದಿನಗಳ ಹಿಂದೆ ಆನವಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಮೂರು ಆನೆಗಳು ಹಾಗು ಒಂದು ಮರಿ, ಗುರುವಾರ ಕಾನೇಶ್ವರಿ ದೇವಾಲಯದ ಸಮೀಪ ಕಂಡುಬಂದವು. ರೈತರ ಜಮೀನಿನಲ್ಲಿ ಓಡಾಡಿದ ಇವು, ನಂತರ ಪಕ್ಕದ ಕಾಡಿಗೆ ಹೋಗಿವೆ. ಬದನಗೋಡಿನಿಂದ ಕ್ಯಾದಗಿಕೊಪ್ಪಕ್ಕೆ ಹೋಗುವ ಮಾರ್ಗ ಮಧ್ಯೆ ರೈತರ ಕೃಷಿ ಜಮೀನನ್ನು ತುಳಿದು ಹಾಳು ಮಾಡಿವೆ.

ಆನೆಗಳ ಫೋಟೊ ತೆಗೆಯಲು ಹೋಗಿದ್ದ ಕೆಲವರು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾದರು. ಅರಣ್ಯ ಇಲಾಖೆ ಸಿಬ್ಬಂದಿ, ಆನೆಗಳನ್ನು ಓಡಿಸಲು ಸಹಕರಿಸಿದರು.

 

ಪ್ರತಿಕ್ರಿಯಿಸಿ (+)