ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಲಕ್ಷ ಮೀನು ಮರಿ ಸಾಕಣೆಗೆ ಸಿದ್ಧತೆ

100ಕ್ಕೂ ಹೆಚ್ಚು ರೈತರಿಂದ ಬೇಡಿಕೆ
Last Updated 4 ಜುಲೈ 2020, 11:05 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಮೀನುಗಾರಿಕಾ ಇಲಾಖೆಯ ಆವರಣದಲ್ಲಿ ಟಾಕಿಗಳಲ್ಲಿ ಮೀನು ಸಾಕಣೆ ಮಾಡಲು ಇಲಾಖೆ ಮುಂದಾಗಿದೆ. ಸುಮಾರು 5 ಲಕ್ಷ ಮೀನು ಮರಿಗಳು ಒಟ್ಟು ಎಂಟು ಟಾಕಿಗಳಲ್ಲಿ ಬೆಳೆಯಲಿವೆ.

ಮೀನು ಚೆನ್ನಾಗಿ ಬೆಳೆಯಲು ಅಗತ್ಯವಿರುವ ಜೇಡಿಮಣ್ಣು, ಸೆಗಣಿ ಗೊಬ್ಬರವನ್ನು ಹಾಕಿ ನೀರನ್ನು ಹದಗೊಳಿಸಲಾಗಿದೆ. ಇದರಲ್ಲಿ ಮೀನುಮರಿ ಬಿಡುವ ಕಾರ್ಯ ನಡೆದಿದೆ. ಇವನ್ನು ಭದ್ರಾ ಅಣೆಕಟ್ಟು ಮೀನುಮರಿ ಉತ್ಪಾದನಾ ಕೇಂದ್ರದಿಂದ ತರಲಾಗಿದೆ. ಮುಂದಿನ 35–40 ದಿನಗಳ ಕಾಲ ಈ ಮರಿಗಳನ್ನು ಆರೈಕೆ ಮಾಡಲಾಗುತ್ತದೆ. ನಂತರ ಶೇ 30ರಷ್ಟು ಮರಿಗಳನ್ನು ಇಲಾಖೆ ಉಳಿಸಿಕೊಂಡು, ಉಳಿದವನ್ನು ಮೀನು ಕೃಷಿ ಮಾಡುವ ರೈತರಿಗೆ ವಿತರಿಸುತ್ತದೆ.

ಇಲಾಖೆಯ ಅಡಿಯಲ್ಲಿ 17 ಕೆರೆಗಳಿವೆ. ಈ ಕೆರೆಗಳಲ್ಲಿ ಪ್ರತಿವರ್ಷ ಮೀನು ಸಾಕಣೆ ನಡೆಯುತ್ತದೆ. ಕೆರೆ ಸಮಿತಿಗಳು ಇದರ ಉಸ್ತುವಾರಿ ನಿರ್ವಹಿಸುತ್ತವೆ. ‘ಮೀನು ಮರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ 100ಕ್ಕೂ ಹೆಚ್ಚು ರೈತರು ಹೆಸರು ನೋಂದಾಯಿಸಿದ್ದಾರೆ. ಮರಿಗಳು ಬೆಳೆದ ಮೇಲೆ ಒಬ್ಬರಿಗೆ ಗರಿಷ್ಠ 5000 ಮರಿಗಳನ್ನು ನೀಡುವ ಯೋಜನೆ ರೂಪಿಸಲಾಗಿದೆ. ವಾರ್ಷಿಕ 2 ಲಕ್ಷ ಮೀನು ಮರಿ ಮಾರಾಟದ ಗುರಿಯಿತ್ತು. ಈ ಬಾರಿ ಗುರಿ ಮೀರಿ ಸಾಧನೆ ಮಾಡಲಾಗುತ್ತಿದೆ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ವೈಭವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT