ಸೋಮವಾರ, ಸೆಪ್ಟೆಂಬರ್ 27, 2021
21 °C

ಉತ್ತರ ಕನ್ನಡ ತಲುಪಿದ ನಾಲ್ಕು ವಿಶೇಷ 'ಆಕ್ಸಿ ಬಸ್‌'ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಆಮ್ಲಜನಕದ ಪೂರೈಸಲು ನಾಲ್ಕು ವಿಶೇಷ 'ಆಕ್ಸಿ ಬಸ್'ಗಳು ಜಿಲ್ಲೆಗೆ ಬಂದಿವೆ. ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ಈ ಬಸ್‌ಗಳನ್ನು ನೀಡಿದ್ದು, ರಾಜ್ಯ ಸರ್ಕಾರದೊಂದಿಗೆ ಸಮನ್ವಯದಲ್ಲಿ ಬಳಕೆಯಾಗಲಿವೆ. 

ಬೆಂಗಳೂರಿನ 'ಇಂಡಿ ವಿಲೇಜ್' ಎಂಬ ಸಂಸ್ಥೆಯೊಂದು ನೀಡಿದ್ದು, ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಒಳಗೊಂಡಿವೆ. ಸೋಂಕಿತರು ಹೆಚ್ಚಿರುವ ಕೆಲವು ಜಿಲ್ಲೆಗಳಲ್ಲಿ ಆಮ್ಲಜನಕ ಸಹಿತ ಹಾಸಿಗೆಗಳು ಸಿಗದೆ ಸಮಸ್ಯೆಯಾಗಿದೆ. ಹಾಸಿಗೆ ಸಿಗುವ ತನಕ ಸೋಂಕಿತರು ವೈದ್ಯಕೀಯ ಆಮ್ಲಜನಕದ ಸಹಾಯದಲ್ಲಿ ಇರಲು ಈ ಬಸ್‌ಗಳು ಬಳಕೆಯಾಗುತ್ತವೆ.

ಈ ಬಗ್ಗೆ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, 'ನಮ್ಮ ಜಿಲ್ಲೆಯಲ್ಲಿ ಈವರೆಗೆ ಹಾಸಿಗೆಯ ಕೊರತೆಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು ಇರುವ ಬಸ್‌ಗಳನ್ನು ಸರ್ಕಾರ ಕಳುಹಿಸಿಕೊಟ್ಟಿದೆ' ಎಂದರು.

'ಬಸ್‌ನಲ್ಲಿರುವ ಸಲಕರಣೆಗಳ ಮೂಲಕ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು 95ಕ್ಕೆ ಏರಿಸಲು ಸಾಧ್ಯವಿದೆ. ಕಾರವಾರ, ಹೊನ್ನಾವರ, ಶಿರಸಿ ಮತ್ತು ದಾಂಡೇಲಿಯಲ್ಲಿ ಈ ಬಸ್‌ಗಳನ್ನು ನಿಲುಗಡೆ ಮಾಡಲಾಗುವುದು. ಅಲ್ಲಿಂದಲೇ ಅಗತ್ಯವಿರುವ ಕಡೆಗೆ ಕಳುಹಿಸಲಾಗುವುದು' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು