ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಅಂಗವಿಕಲರ ವೈದ್ಯಕೀಯ ಪರೀಕ್ಷೆಗೆ ಜಿಲ್ಲಾಸ್ಪತ್ರೆಯಲ್ಲಿ ಒಂದೇ ದಿನ ಅವಕಾಶ

ಕಾದು ಕುಳಿತು ಸುಸ್ತಾಗುವ ಅಂಗವಿಕಲರು
Last Updated 26 ಸೆಪ್ಟೆಂಬರ್ 2019, 19:46 IST
ಅಕ್ಷರ ಗಾತ್ರ

ಕಾರವಾರ: ಅಂಗವಿಕಲರ ಪ್ರಮಾಣಪತ್ರಪಡೆಯಲು ಅಗತ್ಯ ಇರುವವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಅಂಗವಿಕಲರು ಹೈರಾಣಾಗುವಂತಾಗಿದೆ.ವಾರದಲ್ಲಿ ಒಂದೇ ದಿನ (ಗುರುವಾರ)ಜಿಲ್ಲಾ ಆಸ್ಪತ್ರೆಯಲ್ಲಿ ಇದಕ್ಕೆ ಅವಕಾಶ ಕಲ್ಪಿಸಿರುವುದರಿಂದ ಇದಕ್ಕೆ ತೊಡಕಾಗಿದೆ.

ಜಿಲ್ಲೆಯಲ್ಲಿ20 ಸಾವಿರಕ್ಕೂ ಅಧಿಕ ಅಂಗವಿಕಲರು ಇದ್ದಾರೆ. ಇತ್ತೀಚಿಗೆ ಅವರಿಗೆ ‘ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ’ಯನ್ನು (ಯುಡಿಐಡಿ)ನೀಡಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಅಂಗವೈಕಲ್ಯ ಪ್ರಮಾಣಪತ್ರ ಪಡೆಯುವುದುಕಡ್ಡಾಯವಾಗಿದೆ.ಈಗಾಗಲೇಪ್ರಮಾಣಪತ್ರ ಹೊಂದಿರುವವರು ಆಧಾರ್‌, ಫೋಟೊ, ಪಿಂಚಣಿ ಮಂಜೂರಾತಿ ಪತ್ರದ ವಿವರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕಿದೆ.

ನಂತರ ಅದು ಜಿಲ್ಲಾ ಮಟ್ಟದ ಪ್ರಾಧಿಕಾರದ ಸಂಬಂಧಪಟ್ಟ ವೈದ್ಯಾಧಿಕಾರಿಯ ಲಾಗಿನ್‌ಗೆ ಬರಲಿದ್ದು, ಅವರು ಅನುಮೋದನೆ ನೀಡಿದಬಳಿಕ ‘ಯುಡಿಐಡಿ’ಅಂಗವಿಕಲರ ವಿಳಾಸಕ್ಕೆಅಂಚೆಯಮೂಲಕ ತಲುಪಲಿದೆ. ಆದರೆ, ಅಂಗವಿಕಲರ ಪ್ರಮಾಣಪತ್ರವನ್ನು ಪಡೆಯಲು ತಾಲ್ಲೂಕಿನಲ್ಲಿ ವ್ಯವಸ್ಥೆ ಇಲ್ಲದಿರುವುದರಿಂದ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವ ಅನಿವಾರ್ಯತೆ ಎದುರಾಗಿದೆ.ಬೆಳಗ್ಗಿನಿಂದ ಮಧ್ಯಾಹ್ನದವರೆಗೂಸರದಿ ಸಾಲಿನಲ್ಲಿದ್ದುಚೀಟಿ ಪಡೆದು, ತಜ್ಞ ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕಿದೆ.ಇದು ಬಹು ಅಂಗವೈಕಲ್ಯ ಹೊಂದಿದವರಿಗೆ ಕಷ್ಟಸಾಧ್ಯವಾಗಿದೆ. ಒಂದೇ ಸಮನೆ ಸಾವಿರಾರು ಮಂದಿ ಪರೀಕ್ಷೆಗೆಹಾಜರಾಗುವ ಕಾರಣ ವೈದ್ಯರ ಮೇಲೂ ಒತ್ತಡ ಹೆಚ್ಚಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿವಾಸ್ತವ್ಯ: ಗುರುವಾರ ಒಂದೇ ದಿನವೈದ್ಯಕೀಯ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೇ ‘ಯುಡಿಐಡಿ’ಯನ್ನು ಶೀಘ್ರವೇ ಮಾಡಿಸಿಕೊಳ್ಳಬೇಕೆಂಬ ಬಯಕೆಯೂ ಹಲವರದ್ದು. ಹಾಗಾಗಿ ಜಿಲ್ಲೆಯ ವಿವಿಧೆಡೆಯಿಂದ ಬುಧವಾರ ರಾತ್ರಿಯೇ ಅಂಗವಿಕಲರು ಜಿಲ್ಲಾ ಆಸ್ಪತ್ರೆಗೆ ಬಂದು ವಾಸ್ತವ್ಯ ಹೂಡಿದ್ದರು.ಅವರಿಗೆ ಜಿಲ್ಲಾ ಕೇಂದ್ರಕ್ಕೆ ಹೋಗಿ–ಬರಲು ವಾಹನದ ಸೌಕರ್ಯ, ರಾತ್ರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡುವವರಿಗೆಶೌಚಕ್ಕೆ, ಊಟ, ತಿಂಡಿಗೂ ಸಮಸ್ಯೆ ಉಂಟಾಗುತ್ತಿದೆ.

‘ಮಗಳಿಗೆ ಅಂಗವೈಕಲ್ಯ ಇದೆ. ಹೀಗಾಗಿ ವೈದ್ಯಕೀಯ ಪರೀಕ್ಷೆಗಾಗಿ ಅಂಕೋಲಾದಿಂದಇಲ್ಲಿಗೆ ಬಂದಿದ್ದೇವೆ.ಬೆಳಿಗ್ಗೆ ಎಂಟು ಗಂಟೆಗೆಚೀಟಿ ಪಡೆಯಲು ಸಾಲಿನಲ್ಲಿ ನಿಂತಿದ್ದೆವು.ಒಂದುಗಂಟೆಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಿದ್ದೇವೆ’ಎನ್ನುತ್ತಾರೆ ಅಂಕೋಲಾದ ಹುಲಿಯಾ.

‘ತಾಲ್ಲೂಕಿನಲ್ಲೇ ವ್ಯವಸ್ಥೆ ಮಾಡಿ’: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ನೌಕರರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿನಾಗಯ್ಯ ಪೂಜಾರ್, ‘ಜಿಲ್ಲಾ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ದೂರದ ತಾಲ್ಲೂಕು, ಅಲ್ಲಿನ ಕುಗ್ರಾಮಗಳಿಂದ ಬರುವವರಿಗೆ ಆರ್ಥಿಕವಾಗಿಯೂ ಇದು ಹೊರೆಯಾಗಿ ಪರಿಣಮಿಸಿದೆ. ಜಿಲ್ಲಾಡಳಿತ ತಾಲ್ಲೂಕಿನಲ್ಲೇಅಂಗವೈಕಲ್ಯ ಪ್ರಮಾಣಪತ್ರ ವಿತರಿಸಲು ವ್ಯವಸ್ಥೆ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT