ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಟವರ್‌ಗಳಿಗೆ ವಿದ್ಯುತ್ ಸ್ಥಗಿತ

ಹೆಸ್ಕಾಂಗೆ ಬಿಲ್ ಪಾವತಿಸದ ಬಿಎಸ್‌ಎನ್‌ಎಲ್: ಯಲ್ಲಾಪುರದ ವಿವಿಧೆಡೆ ಸಮಸ್ಯೆ
Last Updated 13 ಡಿಸೆಂಬರ್ 2018, 14:14 IST
ಅಕ್ಷರ ಗಾತ್ರ

ಯಲ್ಲಾಪುರ: ವಿದ್ಯುತ್ ಬಿಲ್ ಪಾವತಿಸದ ಕಾರಣ ತಾಲ್ಲೂಕಿನವಿವಿಧೆಡೆ ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ಗಳಿಗೆ ಹೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದೆ. ಇದರಿಂದ ಗ್ರಾಹಕರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ತಾಲ್ಲೂಕಿನ ಮಾವಿನಕಟ್ಟಾ ಮೊವೈಲ್ ಟವರ್‌ನವಿದ್ಯುತ್ ಸಂಪರ್ಕವನ್ನು ಈಗಾಗಲೇ ಕಡಿತಗೊಳಿಸಲಾಗಿದೆ. ಇನ್ನುಳಿದ ಟವರ್‌ಗಳು ತಟಸ್ಥವಾಗುವ ಸಾಧ್ಯತೆಯಿದೆ.ತಾಲ್ಲೂಕಿನ ಉಮ್ಮಚಗಿ, ಚಿಪಗೇರಿ ಹಾಗೂ ಕುಂದರ್ಗಿಯಮೊಬೈಲ್ ಟವರ್‌ಗಳ ವಿದ್ಯುತ್ ಬಿಲ್‌ ಪಾವತಿಯಾಗಿಲ್ಲ ಎಂದು ಗೊತ್ತಾಗಿದೆ.

ಉಮ್ಮಚಗಿ ಟವರ್‌ನಿಂದ ₹ 70 ಸಾವಿರ, ಚಿಪಗೇರಿಯಿಂದ₹ 23 ಸಾವಿರ ಹಾಗೂ ಕುಂದರ್ಗಿಯಿಂದ₹ 10 ಸಾವಿರ ಪಾವತಿಯಾಗಬೇಕಿದೆ. ಇವೆಲ್ಲವೂ ಮೂರು– ನಾಲ್ಕುತಿಂಗಳ ಅವಧಿಯ ಮೊತ್ತವಾಗಿವೆ.ತಾಲ್ಲೂಕು ವ್ಯಾಪ್ತಿಯಲ್ಲಿ ಖಾಸಗಿಸಂಸ್ಥೆಗಳದ್ದೂಸೇರಿದಂತೆ 30ಕ್ಕೂ ಹೆಚ್ಚು ಟವರ್‌ಗಳಿವೆ.

‘ಬಿಲ್ ಪಾವತಿಯ ಸಮಸ್ಯೆಯಿಂದ ಸಂಪರ್ಕ ಕಡಿತಗೊಂಡರೆ ಗ್ರಾಮೀಣ ಭಾಗದ ಸಾವಿರಾರು ಗ್ರಾಹಕರು ಸಮಸ್ಯೆ ಎದುರಿಸಬೇಕಾಗುತ್ತದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದಲೇ ಈ ರೀತಿಯ ಸಮಸ್ಯೆಯಾದರೆ ಹೇಗೆ?ಸ್ಥಿರ ದೂರವಾಣಿಈಗಾಗಲೇ ಮರೆಯಾಗುತ್ತಿದೆ. ಅದರ ಬದಲುಜನರುಮೊಬೈಲ್ ಮೊರೆ ಹೋಗುತ್ತಿದ್ದಾರೆ.ಮುಂದೆ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ನಟರಾಜ ಗೌಡರ್ ಒತ್ತಾಯಿಸಿದ್ದಾರೆ.

‘ಕಾಲಾವಕಾಶ ನೀಡಿದ್ದರೂ ಪಾವತಿಸಲಿಲ್ಲ’:ಮೊಬೈಲ್ ಟವರ್‌ಗಳ ವಿದ್ಯುತ್ ಬಿಲ್ ಪಾವತಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಆದರೂ ಹಣ ಪಾವತಿಯಾಗಲಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಸದ್ಯದಲ್ಲಿಯೇ ಹಣ ಪಾವತಿ ಮಾಡುವುದಾಗಿ ಹಿರಿಯ ಅಧಿಕಾರಿಗಳು ಹೆಸ್ಕಾಂಗೆ ತಿಳಿಸಿದ ಕಾರಣ ಸಂಪರ್ಕ ನೀಡಲಾಗಿದೆ’ ಎಂದು ಹೆಸ್ಕಾಂ ಎಇಇ ವಿಶಾಲ್ ಧರೇಪ್ಪಗೋಳ್ ತಿಳಿಸಿದರು.

‘ಯಲ್ಲಾಪುರ ತಾಲ್ಲೂಕಿನಲ್ಲಿ ಬಿಎಸ್‌ಎನ್‌ಎಲ್‌ನ 18 ಮೊಬೈಲ್ ಟವರ್‌ಗಳಿವೆ.5–6 ಟವರ್‌ಗಳ ಬಿಲ್ ಪಾವತಿಗೆ ಬಾಕಿ ಇದೆ. ಬೆಂಗಳೂರಿನಿಂದ ಪ್ರತಿ ತಿಂಗಳು ಪಾವತಿಸಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಬಾಕಿಯಾಗಿದೆ. ಈ ಬಗ್ಗೆ ಕಾರವಾರದ ಬಿಎಸ್ಎನ್ಎಲ್ ಉಪ ಪ್ರಧಾನ ವ್ಯವಸ್ಥಾಪಕರಿಗೆ ವರದಿ ಸಲ್ಲಿಸಲಾಗಿದೆ. ಸದ್ಯದಲ್ಲೇ ಪರಿಸ್ಥಿತಿ ಸುಧಾರಿಸುವ ಭರವಸೆ ಇದೆ’ ಎಂದುಬಿಎಸ್ಎನ್ಎಲ್‌ನಕಿರಿಯ ತಾಂತ್ರಿಕ ಅಧಿಕಾರಿ ಶಿವಂ ಸೋನಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT