ಮಂಗಳವಾರ, ಆಗಸ್ಟ್ 4, 2020
22 °C

ಹಿರಿಯ ಪತ್ರಕರ್ತ ಸೀತಾರಾಮ ಭಟ್ಟ ಬೆಳಖಂಡ ನಿಧನ

ನಿಧನ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಹಿರಿಯ ಪತ್ರಕರ್ತ ತಾಲ್ಲೂಕಿನ ಬೆಳಖಂಡದ ಸೀತಾರಾಮ ಭಟ್ಟ (60) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಹಲವು ವರ್ಷಗಳ ಕಾಲ ಸ್ಥಳೀಯ ಪತ್ರಿಕೆ ವರದಿಗಾರರಾಗಿ, ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಮಂಡಳಿ ಸದಸ್ಯರಾಗಿ, ಎಪಿಎಂಸಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.

ಡಿ.ಜಿ.ಭಟ್ಟ ಕೋಳಿಗಾರ ನಿಧನ

ಶಿರಸಿ: ಬಡಗುತಿಟ್ಟು ಯಕ್ಷಗಾನದ ವೇಷಭೂಷಣ, ಮುಖವರ್ಣಿಕೆ, ರಂಗಪರಿಕರ ಸಿದ್ಧಪಡಿಸುವ ಕಲಾವಿದರಾಗಿದ್ದ ತಾಲ್ಲೂಕಿನ ಕೋಳಿಗಾರದ ಡಿ.ಜಿ.ಭಟ್ಟ (62) ಬುಧವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

ಯಕ್ಷಗಾನ ವೇಷಭೂಷಣಗಳ ತಯಾರಿಕೆಯೇ ಅವರಿಗೆ ಬದುಕಾಗಿತ್ತು. ಯಕ್ಷಕಿರಣ ಎನ್ನುವ ಮಕ್ಕಳ ಯಕ್ಷಗಾನ ಮೇಳ ಕಟ್ಟಿದ್ದರು. ಹಲವಾರು ವರ್ಷ ಯಕ್ಷಗಾನ ಕಲಿಕಾ ಶಿಬಿರವನ್ನು ಉಚಿತವಾಗಿ ನಡೆಸಿ, ನೂರಾರು ಮಕ್ಕಳಿಗೆ ಯಕ್ಷಗಾನ ಕಲಿಸಿದ್ದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ, ಯಕ್ಷಗಾನ ಅಕಾಡೆಮಿ ಅಲ್ಪ ಆರ್ಥಿಕ ನೆರವು ನೀಡಿತ್ತು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು