ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಂಬ ಸಂಸ್ಥೆಯಿಂದ ಚಾಲಿ ಸಂಸ್ಕರಣೆ: ಶಂಭುಲಿಂಗ ಹೆಗಡೆ

Last Updated 16 ನವೆಂಬರ್ 2021, 16:37 IST
ಅಕ್ಷರ ಗಾತ್ರ

ಶಿರಸಿ: ರೈತರ ಅನುಕೂಲಕ್ಕಾಗಿ ಇದೇ ವರ್ಷದಿಂದ ಸಂಸ್ಥೆಯ ವತಿಯಿಂದ ಚಾಲಿ ಸುಲಿಯುವ ಮತ್ತು ಸಂಸ್ಕರಿಸುವ ಸೌಲಭ್ಯ ಒದಗಿಸಲಾಗುವುದು ಎಂದು ಕದಂಬಮಾರ್ಕೆಟಿಂಗ್ ಸೌಹಾರ್ದ ಸಹಕಾರ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ ಹೇಳಿದರು.

ಈಚೆಗೆ ನಡೆದ ಸಂಸ್ಥೆಯ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ‘ಬಾಳೆಕಾಯಿ ಮಾರಾಟಕ್ಕೆ ಟೆಂಡರ್ ವ್ಯವಸ್ಥೆ ಕಲ್ಪಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಒಣ ಅಡಿಕೆ ಟೆಂಡರ್ ಆರಂಭಿಸಲಾಗಿದೆ. ಸಂಸ್ಥೆಯ ವತಿಯಿಂದ ಕಾಳುಮೆಣಸು, ಏಲಕ್ಕಿ, ಅರಿಷಿಣ, ಶುಂಠಿ ಹಾಗೂ ಜಾಯಿಪತ್ರೆಯನ್ನು ರಫ್ತು ಮಾಡಲಾಗಿದೆ’ ಎಂದರು.

‘ಕಳೆದ ವರ್ಷಕ್ಕಿಂತ ಈ ವರ್ಷ ಸಂಸ್ಥೆಯ ವಹಿವಾಟು ಶೇ 39.33ರಷ್ಟು ಹೆಚ್ಚಿದೆ. ಸಮಸ್ಥೆ ₹34.10 ಕೋಟಿ ವಹಿವಾಟು ನಡೆಸಿ ₹17.49 ಲಕ್ಷ ಲಾಭ ಗಳಿಸಿದೆ’ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕರು,ಸದಸ್ಯರು ಇದ್ದರು. ಪ್ರಭಾರ ವ್ಯವಸ್ಥಾಪಕ ರಾಜೇಂದ್ರ ಜೋಶಿ ವಾರ್ಷಿಕ ವರದಿವಾಚಿಸಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT