ಕಾರವಾರ: ಕೊರೊನಾ ಕಾರಣದಿಂದ ಸಂಚಾರ ನಿಲ್ಲಿಸಲಾಗಿದ್ದ ಕಾರವಾರ- ಬೆಂಗಳೂರು ಹಾಗೂ ಮಂಗಳೂರು- ಬೆಂಗಳೂರು ನಡುವಿನ ರೈಲುಗಳ ಸಂಚಾರವು ಸೆ.4ರಂದು ಪುನರಾರಂಭವಾಗಲಿದೆ.

ರೈಲು ನಂ.06585 ವೈ.ಪಿ.ಆರ್ (ಯಶವಂತಪುರ)- ಕಾರವಾರ ಹಾಗೂ ನಂ.06586 ಕಾರವಾರ-ವೈಪಿಆರ್ ರೈಲು ಸೆ.5ರಿಂದ ಕಾರ್ಯಾರಂಭಿಸಲಿದೆ. ಹಿಂದೆ ಸಂಚರಿಸುತ್ತಿದ್ದ ನಂ.16595/16596 ರೈಲುಗಳದ್ದೇ ವೇಳಾಪಟ್ಟಿಯಲ್ಲೇ ಸಂಚರಿಸಲಿವೆ. ಸೆ.4ರಂದು ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಡುವ ರೈಲು ಕಾರವಾರಕ್ಕೆ ಮರುದಿನ ಬೆಳಗ್ಗೆ 8.25ಕ್ಕೆ ತಲುಪುವುದು. ಸೆ.5ರಂದು ಸಂಜೆ 6ಕ್ಕೆ ಕಾರವಾರದಿಂದ ರೈಲು ಹೊರಡಲಿದೆ ಎಂದು ಕೊಂಕಣ ರೈಲ್ವೇ ಪ್ರಕಟಣೆ ತಿಳಿಸಿದೆ.

ಈ ರೈಲುಗಳಲ್ಲಿ 7 ಸ್ಲೀಪರ್, ಒಂದು 3 ಟೈರ್ ಎ.ಸಿ, ಒಂದು 2 ಟೈರ್ ಎ.ಸಿ, 4 ಸಾಮಾನ್ಯ ಸಹಿತ 15 ಬೋಗಿಗಳು ಇರಲಿವೆ. ರೈಲುಗಳಿಗೆ ಸ್ಟೇಷನ್ನಲ್ಲಿ ಟಿಕೆಟ್ ನೀಡಲಾಗುವುದಿಲ್ಲ. ಪೂರ್ವ ಕಾಯ್ದಿರಿಸಿದ ಟಿಕೆಟ್ನಲ್ಲೇ ಪ್ರಯಾಣಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಬೆಂಗಳೂರು-ಮಂಗಳೂರು ರೈಲು ನಂ.06515 ಬೆಂಗಳೂರು ಸಿಟಿ ಮಂಗಳೂರು (ವಾರದಲ್ಲಿ ನಾಲ್ಕುದಿನ) ರೈಲು ಸೆ.4ರಿಂದ ಮುಂದಿನ ಸೂಚನೆವರೆಗೆ ಹಾಗೂ ನಂಬರ್ 06516 ಮಂಗಳೂರು-ಬೆಂಗಳೂರು ಸಿಟಿ (ವಾರದಲ್ಲಿ ನಾಲ್ಕುದಿನ) ರೈಲು ಸೆ.6ರಿಂದ ಮುಂದಿನ ಸೂಚನೆವರೆಗೂ ಸಂಚರಿಸಲಿವೆ. ಇವುಗಳಿಗೆ ನಂ.16511/16512 ರೈಲುಗಳ ನಿಲುಗಡೆ ಅನ್ವಯವಾಗಲಿದೆ.

ನಂ.06517 ಬೆಂಗಳೂರು-ಮಂಗಳೂರು (ವಾರದಲ್ಲಿ ಮೂರುದಿನ) ರೈಲು ಸೆ.6ರಿಂದ ಹಾಗೂ ನಂ.06518 ಮಂಗಳೂರು-ಬೆಂಗಳೂರು (ವಾರದಲ್ಲಿ ಮೂರುದಿನ) ಸೆ.5ರಂದು ಸಂಚಾರ ಆರಂಭಿಸಲಿದೆ. ಈ ರೈಲುಗಳಿಗೆ ನಂ.16517/16518ರ ನಿಲುಗಡೆಯೇ ಅನ್ವಯವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.