ಬುಧವಾರ, ಆಗಸ್ಟ್ 21, 2019
25 °C

ಕಾರವಾರಕ್ಕೂ ಭೇಟಿ ನೀಡಿದ್ದರು ಸುಷ್ಮಾ

Published:
Updated:
Prajavani

ಕಾರವಾರ: ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಜಿಲ್ಲೆಯ ಕರಾವಳಿಗೂ ಭೇಟಿ ನೀಡಿ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದರು. ಕಾರವಾರದ ಪ್ರಾಕೃತಿಕ ಸೌಂದರ್ಯವನ್ನು ಅವರು ಮನದುಂಬಿ ಮೆಚ್ಚಿಕೊಂಡಿದ್ದರು.

1999ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಭಾಕರ ರಾಣೆ ಕಾರವಾರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರ ಪರ ಪ್ರಚಾರಕ್ಕೆ 1999ರ ಸೆ.7ರಂದು ಹೆಲಿಕಾಪ್ಟರ್‌ ಮೂಲಕ ಕಾರವಾರಕ್ಕೆ ಭೇಟಿ ನೀಡಿದ್ದರು ಎಂದು ಪಕ್ಷದ ಪ್ರಮುಖರು ನೆನಪಿಸಿಕೊಳ್ಳುತ್ತಾರೆ.

ಆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮಾರ್ಗರೆಟ್ ಆಳ್ವ ಸ್ಪರ್ಧಿಸಿದ್ದರು. ನಗರದ ಮಿತ್ರ ಸಮಾಜ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಿದ್ದರು. ಇಲ್ಲಿನ ಕಡಲತೀರ, ಅಚ್ಚ ಹಸಿರಿನ ಬೆಟ್ಟಗಳ ನಡುವೆ ಇರುವ ನಗರದ ಸೌಂದರ್ಯಕ್ಕೆ ಅವರು ಮಾರುಹೋಗಿದ್ದರು. ಕೆಲವು ತಾಸು ಇಲ್ಲಿದ್ದು ಅವರು ಶಿರಸಿ, ಕುಮಟಾ, ಹೊನ್ನಾವರಕ್ಕೆ ತೆರಳಿದ್ದರು. ಬಳಿಕ ಹೆಲಿಕಾಪ್ಟರ್‌ನಲ್ಲಿ ಬೆಳಗಾವಿಗೆ ಪ್ರಯಾಣಿಸಿದ್ದರು ಎಂದು ಪಕ್ಷದ ಜಿಲ್ಲಾ ಘಟಕದ ವಕ್ತಾರ ರಾಜೇಶ್ ನಾಯ್ಕ ಸ್ಮರಿಸಿದರು.

Post Comments (+)