‘ದಾನವರ ಬದಲು ಮಾನವರಾಗೋಣ’

7

‘ದಾನವರ ಬದಲು ಮಾನವರಾಗೋಣ’

Published:
Updated:
Deccan Herald

ಕಾರವಾರ:  ‘ನಾವೆಲ್ಲರೂ ಜಾತಿ, ಧರ್ಮ, ಮತ ಆಧಾರಿತವಾದ ಜೀವನವನ್ನು ಮರೆಯಬೇಕು. ಇದು ಸಾಧ್ಯವಾಗಲು ಬಾಲ್ಯದಿಂದಲೇ ಮಾನವೀಯತೆಯ ವಿಚಾರಗಳನ್ನು ತಿಳಿಸಿಕೊಡಬೇಕು’ ಎಂದು ಕಲ್ಲೂರು ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಇಬ್ರಾಹಿಂ ಕಲ್ಲೂರು ಹೇಳಿದರು.

ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಲಾದ ‘ನನ್ನ ಇಷ್ಟದ ಕವಿತೆ ವಾಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಸಮಾಜದಲ್ಲಿ ಯಾರೂ ಗರಿಷ್ಠರಲ್ಲ, ಕನಿಷ್ಠರೂ ಅಲ್ಲ. ಎಲ್ಲರೂ ಒಂದಾಗಿ ಬಾಳುವ ನಿಟ್ಟಿನಲ್ಲಿ ಕವಿವಾಣಿಯಂತೆ ಮೊದಲು ಮಾನವರಾಗೋಣ. ದಾನವರಾಗೋದು ಬೇಡ’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಸುಗಮ ಸಂಗೀತ ಗಾಯಕಿ ದೀಪ್ತಿ ಅರ್ಗೇಕರ, ‘ಕಾರವಾರದಂತಹ ಗಡಿನಾಡಿನಲ್ಲಿ ಕನ್ನಡ ಕವಿಗಳ ಕೃತಿಗಳನ್ನು ವಾಚನ ಮಾಡಬೇಕು. ಅವುಗಳನ್ನು ಹಾಡಿ ಮಹತ್ವ ತಿಳಿದುಕೊಳ್ಳುವ ಹೆಚ್ಚಿನ ಅಗತ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಆಶಯ ನುಡಿಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹರಪನಹಳ್ಳಿ, ‘ಕನ್ನಡದ ಮಕ್ಕಳಿಗೆ ಮತ್ತಷ್ಟು ಹತ್ತಿರವಾಗಬೇಕು ಎಂಬ ಕಾರಣದಿಂದ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಇಷ್ಟದ ಕವಿತೆಗಳನ್ನು ಓದಬೇಕು. ಅವುಗಳ ಅರ್ಥವನ್ನು ಅರಿತುಕೊಳ್ಳಬೇಕು ಎಂಬುದು ಉದ್ದೇಶವಾಗಿದೆ’ ಎಂದು ಹೇಳಿದರು.

ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಜನಾ ಅರ್ಗೇಕರ್ (123 ಅಂಕಗಳು), ಮಾದೇವಿ ಗೌಡರ್ (121 ಅಂಕಗಳು) ಮತ್ತು ಸಿಮ್ರನ್ ಶೇಖ್ (120 ಅಂಕಗಳು) ಅವರಿಗೆ ಸಾಹಿತ್ಯ ಪರಿಷತ್ತಿನಿಂದ ಬಹುಮಾನ ವಿತರಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಪಾವಸ್ಕರ್, ನಜೀರ್ ಶೇಖ್, ಇಮ್ತಿಯಾಜ್ ಬುಖಾರಿ, ಅಲ್ತಾಫ್ ಶೇಖ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !