ಗುರುವಾರ , ನವೆಂಬರ್ 26, 2020
20 °C
‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಸತತವಾಗಿ ಭಾಜನವಾದ ಮಂಕಿ ಹಳೆಮಠ

ಮಂಕಿ ಹಳೆಮಠ: ಐದು ವರ್ಷದಲ್ಲಿ ಮೂರು ಪ್ರಶಸ್ತಿಯ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಈ ಗ್ರಾಮ ಪಂಚಾಯ್ತಿ ಸ್ಥಾಪನೆಯಾಗಿ ಕೇವಲ ಐದು ವರ್ಷಗಳಾಗಿವೆ. ಅಷ್ಟರಲ್ಲೇ ಸತತ ಮೂರು ಬಾರಿ ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ಪಡೆದುಕೊಂಡು ಮೆಚ್ಚುಗೆಗೆ ಪಾತ್ರವಾಗಿದೆ.

ಹೊನ್ನಾವರ ತಾಲ್ಲೂಕಿನ ಮಂಕಿ ಹಳೆಮಠ ಗ್ರಾಮ ಪಂಚಾಯ್ತಿಯ ಈಗ ತನ್ನ ಸಾಧನೆಯ ಮೂಲಕ ರಾಜ್ಯದ ಗಮನ ಸೆಳೆಯುತ್ತಿದೆ. ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಬೀದಿ ದೀಪ, ಕ್ರೀಡಾಂಗಣ, ಘನತ್ಯಾಜ್ಯದ ಸಮರ್ಪಕ ವಿಲೇವಾರಿ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಬಳಕೆಗೆ ಬೇಕಾದ ವಿದ್ಯುತ್ ಅನ್ನು ಸೌರ ವಿದ್ಯುತ್ ಮೂಲಕ ಪಡೆಯಲಾಗುತ್ತಿದೆ. 

ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಗ್ರಾಮ ಪಂಚಾಯ್ತಿಯಾಗಿದ್ದ ಮಂಕಿ ಗ್ರಾಮ ಪಂಚಾಯ್ತಿಯನ್ನು 2015ರಲ್ಲಿ ನಾಲ್ಕು ಪಂಚಾಯ್ತಿಗಳನ್ನಾಗಿ ವಿಭಜಿಸಿ ಸರ್ಕಾರ ಆದೇಶ ಮಾಡಿತು. ಅವುಗಳಲ್ಲಿ ಒಂದು ಮಂಕಿ ಎ ಹಳೇಮಠ ಗ್ರಾಮ ಪಂಚಾಯ್ತಿ. ಆಗ ಗ್ರಾಮ ಪಂಚಾಯ್ತಿ ಕಚೇರಿಯನ್ನು ಚಿಕ್ಕ ಅಂಗಡಿಯ ಮಳಿಗೆಯಲ್ಲಿ ಪ್ರಾರಂಭಿಸಲಾಗಿತ್ತು. ಈಗ ಸ್ವಂತ ಕಟ್ಟಡ ಹೊಂದಿದ್ದು, 18 ಸದಸ್ಯರಿದ್ದಾರೆ.‌

ಶೌಚಾಲಯ ನಿರ್ಮಾಣದಲ್ಲಿ ಸಾಧಿಸಿದ ಪ್ರಗತಿಗಾಗಿ ಮೊದಲ ಬಾರಿಗೆ ಪ್ರಶಸ್ತಿಗೆ ಭಾಜನವಾಯಿತು. ಎರಡು ಹಾಗೂ ಮೂರನೇ ವರ್ಷದಲ್ಲಿ ಸಮಪರ್ಕವಾಗಿ ಘನತ್ಯಾಜ್ಯ ವಿಲೇವಾರಿಗಾಗಿ ಪುರಸ್ಕಾರ ಪಡೆದುಕೊಂಡಿತು.

₹ 10 ಲಕ್ಷ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ, ₹ 40 ಲಕ್ಷದ ವೆಚ್ಚದ ಗ್ರಾಮ ಪಂಚಾಯ್ತಿ ಕಟ್ಟಡ, ಗ್ರಾಮ ಪಂಚಾಯ್ತಿಯಿಂದಲೇ ಪ್ರಾರಂಭಿಸಿದ ಗ್ರಂಥಾಲಯ, ಪ್ರತಿ ವಾರ್ಡ್‌ನಲ್ಲಿಯೂ ಗುಣಮಟ್ಟದ ರಸ್ತೆ, ಚರಂಡಿ ನಿರ್ಮಿಸಲಾಗಿದೆ. ಎಂಟು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮ ಪಂಚಾಯ್ತಿಯಲ್ಲಿ ಪ್ರತಿನಿತ್ಯ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಘಟಕದಲ್ಲಿ ವಿಂಗಡಿಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು