ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಾಡಸಾಯಿ ನಾಡ ಕಚೇರಿ ಕಟ್ಟಡ ಉದ್ಘಾಟನೆ

Last Updated 22 ಮೇ 2020, 13:49 IST
ಅಕ್ಷರ ಗಾತ್ರ

ಕಾರವಾರ: ‘ಎಲ್ಲ ಕಾರ್ಯಗಳೂಸರಿಯಾದ ಸಮಯದಲ್ಲಿ ನಡೆದರೆ ಸಾರ್ವಜನಿಕರಿಗೆ ಕಚೇರಿ ಕೆಲಸಗಳಲ್ಲಿ ಯಾವುದೇ ವಿಳಂಬವಾಗುವುದಿಲ್ಲ’ ಎಂದು ಶಾಸಕಿ ರೂಪಾಲಿ ನಾಯ್ಕ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಘಾಡಸಾಯಿಯಲ್ಲಿ ಶುಕ್ರವಾರನಾಡಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಡಿಮೆ ಅವಧಿಯಲ್ಲಿ ಕಟ್ಟಡವನ್ನು ಅಚ್ಚುಕಟ್ಟಾಗಿನಿರ್ಮಿಸಿದ್ದಕ್ಕೆ ಅವರುಅಧಿಕಾರಿಗಳನ್ನು ಅಭಿನಂದಿಸಿದರು.ಇಷ್ಟು ದಿನಗಳ ಕಾಲ ಬಾಡಿಗೆ ಕಟ್ಟಡದಲ್ಲಿ ಇದ್ದ ಕಚೇರಿಯನ್ನು ಈಗ ಸ್ವಂತ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಕಚೇರಿಗೆ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಆರ್.ವಿ.ಕಟ್ಟಿ ಹಾಗೂ ಅಧಿಕಾರಿಗಳಿದ್ದರು.

ಭೂಮಿಪೂಜೆ: ಉಳಗಾ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೂಪಾಲಿ ನಾಯ್ಕ ಭೂಮಿಪೂಜೆ ನೆರವೇರಿಸಿದರು.ಜನರಿಗೆ ಅನುಕೂಲವಾಗಬೇಕಾದ ಆಸ್ಪತ್ರೆಗಳಲ್ಲಿವೈದ್ಯರ ಕೊರತೆ ಕಾಡುತ್ತಿರುವುದು ಬೇಸರದ ಸಂಗತಿ.ನಗರೀಕರಣದಿಂದಾಗಿ ವೈದ್ಯರು ನಗರಗಳಲ್ಲಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಈ ಮನಸ್ಥಿತಿಯಿಂದ ವೈದ್ಯರು ಹೊರಗೆ ಬರಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆಪ್ರಮೀಳಾ ನಾಯ್ಕ, ವೈದ್ಯಾಧಿಕಾರಿಗಳಾದ ಡಾ.ಸೂರಜಾ ನಾಯ್ಕ, ರಾಜೇಶ್ವರಿ ಗಾಂವ್ಕರ್, ಉಲ್ಲಾಸ ಪ್ರಭು, ಸುನೀಲ್‍ ದತ್ತ ಎಸ್.ಗಾಂವ್ಕರ್, ಎಂಜಿನಿಯರ್ ರವಿದಾಸ ನಾಯ್ಕ, ಮುಖಂಡ ವಿಠೋಬ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT