ಬುಧವಾರ, ಆಗಸ್ಟ್ 17, 2022
29 °C

ಮೊದಲ ಹಂತದ ಚುನಾವಣೆಗೆ 4,432 ನಾಮಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯಲ್ಲಿ ಡಿ.22ರಂದು ನಡೆಯಲಿರುವ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಒಟ್ಟು 4,432 ನಾಮಪತ್ರಗಳು ಸಲ್ಲಿಕೆಯಾಗಿವೆ. ಆದರೆ, ಕಾರವಾರ ತಾಲ್ಲೂಕಿನ ಎರಡು, ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕಿನ ತಲಾ ಒಂದು ಕ್ಷೇತ್ರಗಳಿಗೆ ಒಂದೂ ಉಮೇದುವಾರಿಕೆ ಬಂದಿಲ್ಲ.

ಸ್ಥಳೀಯ ಮಟ್ಟದ ಚುನಾವಣೆಗೆ ಇಷ್ಟೊಂದು ಪ್ರಮಾಣದಲ್ಲಿ ಉಮೇದುವಾರಿಕೆ ಇದೇ ಮೊದಲ ಬಾರಿಗೆ ಕಂಡುಬಂದಿದೆ. ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಡಿ.7ರಂದೇ 40ಕ್ಕೂ ಅಧಿಕ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಕೊನೆಯ ದಿನಗಳಾದ ಡಿ.9 ಮತ್ತು 10ರಂದು 1,500ಕ್ಕೂ ಅಧಿಕ ಉಮೇದುವಾರಿಕೆಗಳು ಬಂದಿದ್ದವು.

ಶನಿವಾರ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಕೆಯ ಅವಧಿ ಮುಕ್ತಾಯವಾಗಿದೆ. ಹೊನ್ನಾವರ ತಾಲ್ಲೂಕಿನಲ್ಲಿ 1,072, ಕುಮಟಾ ತಾಲ್ಲೂಕಿನಲ್ಲಿ 1,068, ಭಟ್ಕಳ ತಾಲ್ಲೂಕಿನಲ್ಲಿ 853, ಅಂಕೋಲಾ ತಾಲ್ಲೂಕಿನಲ್ಲಿ 745 ಹಾಗೂ ಕಾರವಾರ ತಾಲ್ಲೂಕಿನಲ್ಲಿ 694 ಉಮೇದುವಾರಿಕೆಗಳು ಕಂಡುಬಂದಿವೆ.

ನಾಮಪತ್ರಗಳನ್ನು ಹಿಂಪಡೆಯಲು ಡಿ.14 ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆಯು ಶನಿವಾರ ನಡೆದಿದ್ದು, ಸ್ವೀಕೃತ ಮತ್ತು ತಿರಸ್ಕೃತವಾದವುಗಳ ಮಾಹಿತಿ ತಿಳಿದುಬರಬೇಕಿದೆ. ಕರಾವಳಿಯ ಐದು ತಾಲ್ಲೂಕುಗಳಲ್ಲಿ 101 ಗ್ರಾಮ ಪಂಚಾಯಿತಿಗಳ 1,380 ಕ್ಷೇತ್ರಗಳಿಗೆ ಡಿ.22ರಂದು ಮತದಾನ ನಡೆಯಲಿದೆ. 

31 ತಿರಸ್ಕೃತ

ಭಟ್ಕಳ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಲ್ಲಿಕೆಯಾದ 31 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಕಾಯ್ಕಿಣಿಯಲ್ಲಿ 9, ಬೈಲೂರಿನಲ್ಲಿ 6, ಮಾವಿನಕುರ್ವಾ ಮತ್ತು ಮಾವಿನಕುರ್ವಾದಲ್ಲಿ ತಲಾ 4, ಮುಂಡಳ್ಳಿಯಲ್ಲಿ 3, ಬೆಳಕೆ, ಬೇಂಗ್ರೆ, ಮಾವಳ್ಳಿ– 1 ಗ್ರಾಮದಲ್ಲಿ ಹಾಗೂ ಯಲ್ವಡಿಕವೂರದಲ್ಲಿ ತಲಾ 2 ಹಾಗೂ ಹಾಡುವಳ್ಳಿಯಲ್ಲಿ ಒಂದು ನಾಮಪತ್ರಗಳು ಕ್ರಮಬದ್ಧವಾಗಿರಲಿಲ್ಲ. 

ಮಾವಳ್ಳಿ 2 – ಕೋಟದಮಕ್ಕಿ ಅನುಸೂಚಿತ ಜಾತಿ ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಮಪತ್ರ ಹಿಂಪಡೆಯಲು ಡಿ.14 ಕೊನೆಯ ದಿನವಾಗಿದೆ.

ಎರಡನೇ ಹಂತದ ಚುನಾವಣೆ

ಉತ್ತರ ಕನ್ನಡದ ಗ್ರಾಮ ಪಂಚಾಯಿತಿಗಳ ಎರಡನೇ ಹಂತದ ಚುನಾವಣೆಗೆ ಜಿಲ್ಲೆಯಲ್ಲಿ ಶನಿವಾರ 178 ನಾಮಪತ್ರಗಳು ಸಲ್ಲಿಕೆಯಾಗಿವೆ.

ಶಿರಸಿ ತಾಲ್ಲೂಕಿನಲ್ಲಿ 55, ಸಿದ್ದಾಪುರ ತಾಲ್ಲೂಕಿನಲ್ಲಿ 40, ಜೊಯಿಡಾ ತಾಲ್ಲೂಕಿನಲ್ಲಿ 37, ಯಲ್ಲಾಪುರ ತಾಲ್ಲೂಕಿನಲ್ಲಿ 28, ಮುಂಡಗೋಡ ತಾಲ್ಲೂಕಿನಲ್ಲಿ 13, ಹಳಿಯಾಳ ತಾಲ್ಲೂಕಿನಲ್ಲಿ 5 ಉಮೇದುವಾರಿಕೆಗಳು ಬಂದಿವೆ.

ಎರಡನೇ ಹಂತದಲ್ಲಿ 126 ಗ್ರಾಮ ಪಂಚಾಯಿತಿಗಳ 1,282 ಕ್ಷೇತ್ರಗಳಿಗೆ ಡಿ.27ರಂದು ಚುನಾವಣೆ ನಡೆಯಲಿದೆ. 1,073 ಕ್ಷೇತ್ರಗಳಿಗೆ ಇನ್ನೂ ಒಂದೂ ನಾಮಪತ್ರ ಸಲ್ಲಿಕೆಯಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.